ಡಿಜಿಟಿಲ್ ಮಿಡಿಯಾ ಕ್ಷೇತ್ರದಲ್ಲಿ ಭರವಸೆಯ ಎರಡು ಪೂರ್ಣ : ಮೂರನೇ ವರ್ಷಕ್ಕೆ ಕಾಲಿಟ್ಟ ‘ನ್ಯೂಸ್ ಸ್ನ್ಯಾಪ್’

newsnap2nd anniversary

ಡಿಜಿಟಲ್ ಮಿಡಿಯಾ ಕ್ಷೇತ್ರದಲ್ಲಿ ಕ್ರಿಯಾಶೀಲತೆ ಉಳಿಸಿಕೊಂಡು ಬಂದ ನ್ಯೂಸ್ ಸ್ನ್ಯಾಪ್ ಗೆ ಇಂದಿಗೆ ಎರಡು ವರ್ಷ ಪೂರ್ಣಗೊಂಡು ಮೂರನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ.

ಡಿಜಿಟಲ್ ಮಿಡಿಯಾ ಕ್ಷೇತ್ರದಲ್ಲಿನ ಹೊಸ ಆವಿಷ್ಕಾರಗಳು, ಸವಾಲುಗಳನ್ನು ಸಮರ್ಥವಾಗಿ ಎದುರಿಸಿಕೊಂಡು ಬಂದು ಓದುಗರ ಬೆಂಬಲದೊಂದಿಗೆ ನ್ಯೂಸ್ ಸ್ನ್ಯಾಪ್ ಬಾಲ್ಯ ಅವಸ್ಥೆಯಿಂದ ಮೇಲೆಳುತ್ತಿದೆ

ಪತ್ರಿಕೋದ್ಯಮವು ಸಾಕಷ್ಟು ಬದಲಾವಣೆ ಮನ್ವಂತರವನ್ನು ಕಂಡಿದೆ. ಸಾಮಾಜಿಕ ಜಾಲತಾಣಗಳೇ ಈಗ ಪ್ರಬಲ ಮಾಧ್ಯಮ ಎನ್ನುವ ವಾತಾವರಣ ಸೃಷ್ಠಿಯಾಗಿದೆ. ಈ ಮಾಧ್ಯಮದ ಪ್ರಭಾವ ಸಾಕಷ್ಟು ಪ್ರಭಾವಶಾಲಿ ಮತ್ತು ಶಕ್ತಿಶಾಲಿಯಾಗಿದೆ

2020 ಆಗಸ್ಟ್ 28 ರಂದು ಅಂದಿನ ಡಿಸಿ ಡಾ ವೆಂಕಟೇಶ್ ಅವರು ಅತ್ಯಂತ ಪ್ರೀತಿಯಿಂದ ‘ ನ್ಯೂಸ್ ಸ್ನ್ಯಾಪ್ ‘ ಡಿಜಿಟಲ್ ಮಿಡಿಯಾ ಉದ್ಘಾಟಿಸಿ, ಶುಭ ಹಾರೈಸಿದ್ದು ನಿನ್ನೆ ಮೊನ್ನೆ ಎಂಬಂತಿದೆ. ದಿನ ಕಳೆದಿದ್ದೇ ಗೊತ್ತಾಗಲಿಲ್ಲ. ಓದುಗರ ಆಶಯದಂತೆ ಬೆರಳಂಚಿನ ತುದಿಯಲ್ಲೇ ಪ್ರಪಂಚ ಎನ್ನುವ ಕಾಲ ನಿಜವಾಗಿದೆ.

ಮುಂದಿನ ದಿನಗಳಲ್ಲಿ ನ್ಯೂಸ್ ಸ್ನ್ಯಾಪ್ ಅನ್ನು ಮತ್ತಷ್ಟು ಪ್ರಭುದ್ದವಾಗಿ ಮತ್ತು ತಂತ್ರಜ್ಞಾನವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವ ಚಿಂತನೆ ನಡೆದಿದೆ. ಅದೆಲ್ಲವನ್ನೂ ಕಾರ್ಯರೂಪಕ್ಕೆ ತರಲಾಗುವುದು.

ಮಂಡ್ಯ ಸೇರಿದಂತೆ ನೆರೆಯ ರಾಮನಗರ, ಮೈಸೂರು , ಹಾಸನ , ಚಾಮರಾಜನಗರ, ಕೊಡಗು ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಹಿರಿ ಕಿರಿಯ ಪತ್ರಕರ್ತರು, ಲೇಖಕರು, ಅಭಿಮಾನಿಗಳಿಗೆ ಧನ್ಯವಾದಗಳು. ಎಲ್ಲದಕ್ಕಿಂತಲೂ ಮಿಗಿಲಾಗಿ ಓದುಗರ ಶ್ರೀರಕ್ಷೆಯನ್ನು ಬಯಸುತ್ತೇವೆ. ಅದು ಸದಾ ನಮ್ಮೊಂದಿಗೆ ಇರುವ ಕಾರಣಕ್ಕಾಗಿ ನ್ಯೂಸ್ ಸ್ನ್ಯಾಪ್ ಬೆಳವಣಿಗೆಯ ಹಾದಿಯಲ್ಲಿ ಮುಂದೆ ಸಾಗಿದೆ.

ಧನ್ಯವಾದಗಳು

ಕೆ ಎನ್ ರವಿ
ಸಂಪಾದಕ
ನ್ಯೂಸ್ ಸ್ನ್ಯಾಪ್
ಡಿಜಿಟಲ್ ಮಿಡಿಯಾ

Leave a comment

Leave a Reply

Your email address will not be published. Required fields are marked *

error: Content is protected !!