July 6, 2022

Newsnap Kannada

The World at your finger tips!

namaz,people,Taj Mahal

Namaz - Four arrested in Taj Mahal premises

ತಾಜ್ ಮಹಲ್ ಆವರಣದಲ್ಲಿ ನಮಾಜ್ – ನಾಲ್ವರ ಬಂಧನ​

Spread the love

ಆಗ್ರದ ತಾಜ್ ಮಹಲ್ ಆವರಣದಲ್ಲಿರುವ ಶಾಹಿ ಮಸೀದಿಯಲ್ಲಿ ನಮಾಜ್ ಮಾಡಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.ತಾಜ್ ಮಹಲ್ ಆವರಣದಲ್ಲಿರುವ ಶಹಿ ಮಸೀದಿಯಲ್ಲಿ ಬುಧವಾರ ಸಂಜೆ 5 ಗಂಟೆಗೆ ನಮಾಜ್ ಮಾಡಿ ಬಂಧನಕ್ಕೆ ಒಳಗದ ನಾಲ್ವರಲ್ಲಿ ಮೂವರು ಹೈದರಾಬಾದ್‌ನವರು. ಒಬ್ಬರು ಅಜಂಗಢದವರು.

ಇದನ್ನು ಓದಿ –ನಾಯಿ ಜೊತೆ ವಾಕಿಂಗ್ ಮಾಡಲು ಕ್ರೀಡಾಂಗಣವನ್ನೇ ಖಾಲಿ ಮಾಡಿಸಿದ ಐಎಎಸ್ ದಂಪತಿ ಎತ್ತಂಗಡಿ!

ಸದ್ಯ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಎಂದು ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಕುಮಾರ್ ತಿಳಿಸಿದ್ದಾರೆ.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಪ್ರಕಾರ ಶುಕ್ರವಾರ ಹೊರತುಪಡಿಸಿ ಬೇರೆ ಯಾವ ದಿನಗಳಲ್ಲೂ ತಾಜ್ ಮಹಲ್ ಆವರಣದಲ್ಲಿ ನಮಾಜ್ ಮಾಡುವಂತಿಲ್ಲ ಅಂತ ಸುಪ್ರೀಂ ಕೋರ್ಟ್ ಆದೇಶಿಸಿದೆ.

ಅದು ಕೂಡ ತಾಜ್​ಮಹಲ್​ ಸುತ್ತಮುತ್ತಲಿನ ತಾಜ್‌ಗಂಜ್ ಪ್ರದೇಶದವರಿಗೆ ಮಾತ್ರ ಮಧ್ಯಾಹ್ನ 12 ರಿಂದ 2 ಗಂಟೆಯವರೆಗೆ ಮಾತ್ರ ನಮಾಜ್ ಮಾಡಲು ಅವಕಾಶವಿದೆ.
ಒಟ್ಟಾರೆ ಜಗತ್ತಿನ ಅದ್ಭುತಗಳಲ್ಲಿ ಒಂದಾಗಿರೋ ತಾಜ್‌ ಮಹಲ್‌ ಇತಿಹಾಸದ ಬಗ್ಗೆ ಹಲವಾರು ಗೊಂದಲಗಳು ಹುಟ್ಟಿಕೊಂಡಿವೆ. ಈ ನಡುವೆಯೇ ನಾಲ್ವರು ತಿಳಿದೋ ಅಥವಾ ತಿಳಿಯದೆ ನಮಾಜ್​ ಮಾಡಿ ಬಂಧನಕ್ಕೆ ಒಳಗಾಗಿದ್ದಾರೆ

error: Content is protected !!