ಮೈಸೂರು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ : ನಾಲ್ವರು‌ ಎಂಜಿನಿಯರಿಂಗ್ ವಿದ್ಯಾರ್ಥಿಗಳು ವಶಕ್ಕೆ ?

Team Newsnap
1 Min Read
Voting for state assembly tomorrow: 1.56 lakh police personnel in charge ನಾಳೆ ರಾಜ್ಯ ವಿಧಾನಸಭೆಗೆ ಮತದಾನ : 1.56 ಲಕ್ಷ ಪೊಲೀಸ್ ಸಿಬ್ಬಂದಿಗಳ ಉಸ್ತುವಾರಿ

ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಲಲಿತಾದ್ರಿಪುರ ಗುಡ್ಡದಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ನಡೆಸಿದವರು ಬಗ್ಗೆ ‌ಮಹತ್ವ ಸುಳಿವು ಸಿಕ್ಕಿದೆ ಎನ್ನಲಾಗಿದೆ.

ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ನಾಲ್ವರು ಆರೋಪಿಗಳು ಮೈಸೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಹೊರರಾಜ್ಯದ ವಿದ್ಯಾರ್ಥಿಗಳಾಗಿದ್ದಾರೆ. ಅವರುಗಳನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ ಎಂದು ಗೊತ್ತಾಗಿದೆ.

ಈ ನಾಲ್ವರ ಪೈಕಿ ಮೂವರು ತಮಿಳುನಾಡಿನವರು. ಮತ್ತೋರ್ವ ಕೇರಳದ ವಿದ್ಯಾರ್ಥಿ ಎಂದು ಹೇಳಲಾಗಿದೆ. ಘಟನೆ ನಡೆದು ನಾಲ್ಕು ದಿನಗಳ ನಂತರ ಪೋಲಿಸರು ಆರೋಪಗಳನ್ನು ಪತ್ತೆ ಹಚ್ಚಿದ್ದಾರೆ.

ಕೃತ್ಯವೆಸಗಿದ ನಂತರ ಆರೋಪಿಗಳು ಒಂದು ದಿನ ಮೈಸೂರಿನಲ್ಲಿ ಇದಗದರು. ಬಳಿಕ ಕೇರಳಕ್ಕೆ ತೆರಳಿದ್ದಾರೆ ಎಂದು ಗೊತ್ತಾಗಿದೆ.

ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ಸ್ಥಳೀಯರು ಈ ಕೃತ್ಯದಲ್ಲಿ ಪಾಲ್ಗೊಂಡಿರಬಹುದೆಂದು ಶಂಕೆ ಇತ್ತು. ಆದರೆ ಈಗ ಆರೋಪಿ ಗಳ ಕುರಿತಂತೆ ಮಹತ್ವದ ಸುಳಿವು, ಸಾಕ್ಷಿಗಳು ಸಿಕ್ಕಿವೆ.

ಮೊಬೈಲ್ ಟವರ್ ಸಿಗ್ನಲ್ ಹಾಗೂ ಕರೆಗಳ ಮಾಹಿತಿ ಆಧರಿಸಿ ಅತ್ಯಾಚಾರ ಕೃತ್ಯದಲ್ಲಿ ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪಾಲ್ಗೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ತನಿಖೆ ನಂತರ ಎಲ್ಲವೂ ಲಭ್ಯವಾಗಲಿವೆ.

ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ, ನಾಲ್ವರು ವಿದ್ಯಾರ್ಥಿಗಳು ಕೇರಳದಲ್ಲಿ ತಲೆ ಮರೆಸಿಕೊಂಡಿರಬಹುದೆಂಬ ಕಾರಣಕ್ಕೆ ಅವರುಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಲುವಾಗಿ ಕೇರಳಕ್ಕೆ ತೆರಳಿದ್ದ ಎಂದು ಮೂಲಗಳು ತಿಳಿಸಿವೆ.

Share This Article
Leave a comment