ಐಸಿಎಸ್ – ಕೆ ಉಗ್ರರ ಮೇಲೆ ಅಮೇರಿಕಾ ಏರ್ ಸ್ಟ್ರೈಕ್ – ಪ್ರತಿಕಾರದ ಶಪಥ ಪೂರೈಸಿಕೊಂಡ ಬೈಡನ್

Team Newsnap
1 Min Read

ಉಗ್ರರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ತನ್ನ ಶಪಥವನ್ನು ಅಮೇರಿಕಾ 36 ಗಂಟೆಗಳ ಒಳಗೆ ಈಡೇರಿಸಿಕೊಂಡಿದೆ.

ಅಫ್ಘಾನಿಸ್ತಾನದ ನಂಗಾಹರ್ ಪ್ರಾಂತ್ಯದ ಮೇಲೆ ಏರ್ ಸ್ಟ್ರೈಕ್ ನಡೆಸಿದ ಅಮೇರಿಕಾ ಖೋರಾಸನ ಉಗ್ರರನ್ನು ಬಲಿ ತೆಗೆದುಕೊಂಡಿದೆ ಎಂದು ಹೇಳಲಾಗಿದೆ.

ಪೂರ್ವ ಅಫ್ಘಾನಿಸ್ತಾನದಲ್ಲಿ ಐಸಿಎಸ್ ಖೋರಾಸನ ಉಗ್ರರ ಮೇಲೆ ಅಮೆರಿಕಾ ಏರ್ ಸ್ಟ್ರೈಕ್ ನಡೆಸಲಾಗಿದೆ ಎಂದು ಅಮೆರಿಕಾದ ಸೆಂಟ್ರಲ್ ಕಮ್ಯಾಂಡ್ ಈ ಬಗ್ಗೆ ಮಾಹಿತಿ ನೀಡಿದೆ.

ಈ ದಾಳಿಯಲ್ಲಿ ಉಗ್ರರನ್ನು ಕೊಂದಿದ್ದೇವೆ ಎಂದು ಅಮೆರಿಕಾ ಹೇಳಿಕೊಂಡಿದೆ, ದಾಳಿಯಲ್ಲಿ ಎಷ್ಟು ಮಂದಿ ಉಗ್ರರು ಸತ್ತಿದ್ದಾರೆ ಎಂಬ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಏರ್​ಪೋರ್ಟ್ ಸಮೀಪ ಹೋಗದಂತೆ ತಾಲಿಬಾನ್ ತಡೆಯೊಡ್ಡಿದ್ದು, ಕಾಬೂಲ್ ಏರ್​ಪೋರ್ಟ್ ಗೇಟ್ ಬಳಿ ಹೋಗದಂತೆ ಆಮೆರಿಕಾದ ನಾಗರಿಕರಿಗೆ ಎಚ್ಚರಿಕೆಯನ್ನೂ ನೀಡಲಾಗಿದೆ. ಬೇರೆ ಬೇರೆ ದೇಶಗಳ ಗುಪ್ತಚರ ಇಲಾಖೆಗಳು ಏರ್​ಪೋರ್ಟ್ ಬಳಿ ದೊಡ್ಡ ಸ್ಪೋಟ ನಡೆಸಲು ಐಸಿಎಸ್ ಸಂಚು ಹೂಡಿದೆ ಎಂಬ ಮಾಹಿತಿ ನೀಡಿರುವ ಕಾರಣ ಈ ತೆರನಾದ ಬಿಗಿಭದ್ರತೆ ಕೈಗೊಳ್ಳಲಾಗಿದೆ.

ಬೇರೆ ಬೇರೆ ದೇಶಗಳಿಗೆ ಸಂಭವನೀಯ ಸ್ಪೋಟಗಳನ್ನು ಮುಂದೆಯೂ ಐಸಿಎಸ್ ನಡೆಸುವ ಬಗ್ಗೆ ಇಂಟಲಿಜೆನ್ಸ್ ವಿಭಾಗ ಎಚ್ಚರಿಕೆ ನೀಡಿದೆ.

ಸ್ಫೊಟ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರ ಸಂಘಟನೆಗೆ ನಿನ್ನೆಯಷ್ಟೇ ಖಡಕ್​ ಎಚ್ಚರಿಕೆ ನೀಡಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಅಮೆರಿಕ ವಿರುದ್ಧ ದಾಳಿ ಮಾಡಿದವರು ಎಚ್ಚರಿಕೆಯಿಂದ ಇರಿ. ನಮ್ಮ ವಿರುದ್ಧ ದಾಳಿ ಮಾಡಿದವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ನಿಮ್ಮನ್ನು ನಾವು ಎಂದಿಗೂ ಮರೆಯುವುದಿಲ್ಲ. ನೀವು ಎಲ್ಲೇ ಅವಿತಿದ್ದರೂ ಹೆಕ್ಕಿ ಹೆಕ್ಕಿ ಕೊಲ್ಲುತ್ತೇವೆ ಎಂದು ಹೇಳಿದ್ದನ್ನು ಸ್ಮರಿಸಬಹುದು.‌

Share This Article
Leave a comment