February 8, 2023

Newsnap Kannada

The World at your finger tips!

JDS , HDK , politics

First list of JDS candidates to release on November 1 : Kumaraswamy ನವೆಂಬರ್ 1ರಂದು JDS ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ : ಕುಮಾರಸ್ವಾಮಿ

ನನ್ನ ಕಲರ್ ಬ್ಲ್ಯಾಕ್ : ಆದರೆ ನಾನು ಬ್ಲ್ಯಾಕ್​ಮೇಲರ್ ಅಲ್ಲ – HDK

Spread the love

ಕುಮಾರಸ್ವಾಮಿಯೊಬ್ಬ ಬ್ಲ್ಯಾಕ್​ಮೇಲರ್​ ಎಂಬ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ತಿರುಗೇಟು ನೀಡಿದ್ದಾರೆ.

ನಾನು ಇರೋದೇ ಬ್ಲ್ಯಾಕ್. ನನ್ನ ಕಲರ್ ಬ್ಲ್ಯಾಕ್. ಅದು ಬ್ಲ್ಯಾಕ್ ಮೇಲ್​​ ಥರಾ ಕಂಡರೆ ನಾನು ಏನ್ ಮಾಡೋಕೆ ಆಗುತ್ತೆ ಎಂದು ಕಿಚಾಯಿಸಿದ್ದಾರೆ.ಇದನ್ನು ಓದಿ –ಮೈಸೂರು- ಬೆಂಗಳೂರು ಹೈವೇನಲ್ಲಿ ಹೆದ್ದಾರಿ ಗಸ್ತು ಸಿಬ್ಬಂದಿ ನಿಯೋಜನೆ: ಸಂಸದ ಪ್ರತಾಪ್ ಸಿಂಹ

ಸಿಪಿವೈ ಆರೋಪಕ್ಕೆ ಸಂಬಂಧಿಸಿ ಮಾಧ್ಯಮಗಳ ಜೊತೆ ಮಾತನಾಡಿರುವ ಕುಮಾರಸ್ವಾಮಿ ನಾನ್ಯಾಕೆ ಬ್ಲ್ಯಾಕ್​​ಮೇಲ್ ಮಾಡಲಿ. ಯಾರೇ ಸರ್ಕಾರದಿಂದ ದುಡ್ಡು ತಂದರೂ, ಯಾವುದೇ ಅಭಿವೃದ್ಧಿ ಕಾರ್ಯಕ್ರಮ ನಡೆದರೂ, ಅದು ಆ ಕ್ಷೇತ್ರದ ಶಾಸಕನ ನೇತೃತ್ವದಲ್ಲಿಯೇ ನಡೆಯಬೇಕು.


ಸರ್ಕಾರದ ಗೈಡ್​ಲೈನ್ ಇರೋದೇ ಅದು. ಯಾವನೇ ದುಡ್ಡು ತರಲಿ. ಆ ಕ್ಷೇತ್ರದ ಶಾಸಕರ ಉಪಸ್ಥಿತಿಯಲ್ಲೇ ಕಾರ್ಯಕ್ರಮ ಆಗಬೇಕು.

20 ವರ್ಷ ಶಾಸಕರಾಗಿ, ಮಂತ್ರಿಯಾಗಿ ಇಷ್ಟೂ ಗೊತ್ತಿಲ್ವಾ? ಯಾಕೆ ಅನಾಗರಿಕರ ವರ್ತನೆ ಮಾಡಬೇಕಾ ಎಂದು ಯೋಗೇಶ್ವರ್ ವಿರುದ್ಧ ಕಿಡಿಕಾರಿದ್ದಾರೆ.

error: Content is protected !!