ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ಗೆ ಕೊರೊನಾ

Team Newsnap
1 Min Read
Seminar on Ramayana in Bangalore: Inaugurated by Governor ಬೆಂಗಳೂರಿನಲ್ಲಿ ರಾಮಾಯಣ ಕುರಿತ ವಿಚಾರಗೋಷ್ಠಿ: ರಾಜ್ಯಪಾಲರಿಂದ ಉದ್ಘಾಟನೆ

ರಾಜ್ಯದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ಕೊರೊನಾ ಸೋಂಕು ದೃಢವಾಗಿದೆ.

ಇಂದು ನಡೆಸಿದ ಕೊರೊನಾ ಮಾದರಿ ಪರೀಕ್ಷೆಯಲ್ಲಿ ಅವರಿಗೆ ಪಾಸಿಟಿವ್ ಬಂದಿದೆ. ಆದರೆ ಆರೋಗ್ಯ ಸ್ಥಿರವಾಗಿದೆ , ಯಾವುದೇ ಆತಂಕ ಪಡಬೇಕಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.ಇದನ್ನು ಓದಿ –ನನ್ನ ಕಲರ್ ಬ್ಲ್ಯಾಕ್ : ಆದರೆ ನಾನು ಬ್ಲ್ಯಾಕ್​ಮೇಲರ್ ಅಲ್ಲ – HDK

ರಾಜ್ಯಪಾಲರು ಇತ್ತೀಚೆಗೆ ಬೆಂಗಳೂರಿನ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ನಿನ್ನೆಯೂ ರಾಜ್ಯದ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿ ಆಗಿ ಮೊಹಮ್ಮದ್ ಗೌಸ್ ಶಕುರೆ ಕಮಾಲ್, ರಾಜೇಂದ್ರ ಬಾದಾಮಿಕರ್ ಹಾಗೂ ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಸಿಎಂ ಬಸವರಾಜ ಬೊಮ್ಮಾಯಿ ಸಚಿವ ಗೋವಿಂದ ಕಾರಜೋಳ ಸಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Share This Article
Leave a comment