ಮೈಸೂರು- ಬೆಂಗಳೂರು ಹೈವೇನಲ್ಲಿ ಹೆದ್ದಾರಿ ಗಸ್ತು ಸಿಬ್ಬಂದಿ ನಿಯೋಜನೆ: ಸಂಸದ ಪ್ರತಾಪ್ ಸಿಂಹ

Team Newsnap
1 Min Read

ಮೈಸೂರು- ಬೆಂಗಳೂರು ಎಕ್ಸ್ ಪ್ರೆಸ್ ವೇ ನಲ್ಲಿ ಚನ್ನಪಟ್ಟಣದ ಬಳಿ ಅ. 1ರಂದು ಸರಣಿ ಅಪಘಾತದಿಂದಾಗಿ ಬಸ್ಸೊಂದು ಆರು ಕಾರುಗಳಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ನಜ್ಜುಗೊಜ್ಜಾಗಿವೆ.

ಅತಿವೇಗದಿಂದಾಗಿ ಚನ್ನಪಟ್ಟಣದ ಬಳಿ ಆರೇಂಜ್ ಬಸ್ ಚಾಲಕ ಆರು ವಾಹನಗಳಿಗೆ ಹಿಂದಿನಿಂದ ಗುದ್ದಿ ಮಗುವೊಂದು ಸ್ಥಳದಲ್ಲೇ ಮೃತಪಟ್ಟಿದೆ.ಇದನ್ನು ಓದಿ – ಸಿಪಿವೈ Vs ಎಚ್‌ಡಿಕೆ – ಕಲ್ಲು, ಮೊಟ್ಟೆ ಎಸೆತ, ಲಾಠಿ ಚಾರ್ಜ್‌, ಜೆಡಿಎಸ್‌ ಕಾರ್ಯಕರ್ತರು ವಶಕ್ಕೆ

ಹೀಗಾಗಿ ನಿಯಂತ್ರಿತ ಚಾಲನೆಯನ್ನು ಗಮನಿಸಲು ಹೈವೇ ಪ್ಯಾಟ್ರೋಲಿಂಗ್ (ಗಸ್ತು ಸೇವೆ) ಆರಂಭಿಸುತ್ತೇವೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಮಗು ಸಾವಿನ ಬಗ್ಗೆ ಟ್ವಿಟರ್ ನಲ್ಲಿ ಖೇದ ವ್ಯಕ್ತಪಡಿಸಿರುವ ಮೈಸೂರು ಸಂಸದ ಪ್ರತಾಪ್ ಸಿಂಹ, ಉತ್ತಮ ರಸ್ತೆಯಲ್ಲಿ ಸಾಗುವಾಗ ಸ್ವಯಂ ನಿಯಂತ್ರಣವೂ ಅಷ್ಟೇ ಮುಖ್ಯ.

ಶೀಘ್ರವೇ ಹೈವೇ ಪ್ಯಾಟ್ರೋಲಿಂಗ್ (ಗಸ್ತು ಸಿಬ್ಬಂದಿ ನಿಯೋಜನೆ) ಆರಂಭಿಸುತ್ತೇವೆ ಎಂದು ಹೇಳಿದ್ದಾರೆ.

Share This Article
Leave a comment