ಮಂಡ್ಯ: ದಿಶಾ ಸಭೆ ಮಾಡುವ ಮೂಲಕ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಂಸದರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ.
ಇಂದು ಬೆಳಗ್ಗೆ 10 ಗಂಟೆಗೆ ಮಂಡ್ಯದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ದಿಶಾ ಸಭೆ ಆರಂಭಗೊಳ್ಳಲಿದೆ.
ಒಂದೆಡೆ ಕುಮಾರಸ್ವಾಮಿ ಅವರು ಕೇಂದ್ರದ ಯಾವೆಲ್ಲಾ ಯೋಜನೆಗಳ ಬಗ್ಗೆ ಚರ್ಚೆ ಮಾಡುತ್ತಾರೆ ಎಂಬ ಕುತೂಹಲ ಇದ್ದರೆ, ಇನ್ನೊಂದೆಡೆ ದಿಶಾ ಸಭೆಯ ಮೂಲಕ ಸಚಿವ ಚಲುವರಾಯಸ್ವಾಮಿಗೆ ಹೆಚ್‌ಡಿಕೆ ಹೇಗೆ ತಿರುಗೇಟು ನೀಡುತ್ತಾರೆ ಎಂಬ ಕುತೂಹಲವಿದೆ.
ಇತ್ತೀಚಿಗಷ್ಟೇ ಕುಮಾರಸ್ವಾಮಿ ವಿರುದ್ಧ ಚಲುವರಾಯಸ್ವಾಮಿ ) ವಾಗ್ದಾಳಿ ನಡೆಸಿದ್ದು ,. ರಾಜಕೀಯ ಸಭೆಗೆ ಬನ್ನಿ ಅಂದ್ರೆ ಕುಮಾರಸ್ವಾಮಿ ಮಧ್ಯರಾತ್ರಿಯಾದ್ರೂ ಬರುತ್ತಾರೆ. ಆದರೆ ಅಭಿವೃದ್ಧಿ ಕುರಿತ ಸಭೆಗಳಿಗೆ ಬರಲ್ಲ ಎಂದು ಕೆಡಿಪಿ ಸಭೆಗೆ ಗೈರಾಗಿದ್ದಕ್ಕೆ ಚಲುವರಾಯಸ್ವಾಮಿ ಕಿಡಿಕಾರಿದ್ದರು.
ದಿಶಾ ಸಭೆ ಕರೆಯುವ ಮೂಲಕ ಚಲುವರಾಯಸ್ವಾಮಿಗೆ ಕುಮಾರಸ್ವಾಮಿ ಟಕ್ಕರ್ ನೀಡಿದ್ದು ,ಇಂದಿನ ದಿಶಾ ಸಭೆಗೆ ಸಚಿವ ಚಲುವರಾಯಸ್ವಾಮಿ ಗೈರು ಖಚಿತವಾಗಿದೆ.ಯಾರಿಗ್ ಹೇಳೋಣೂ ನಮ್ಮ ಪ್ರಾಬ್ಲಮ್
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ್, ಎಸ್ಪಿ ಮಲ್ಲಿಕಾರ್ಜುನ ಬಾಲದಂಡೆ ಸೇರಿದಂತೆ ಎಲ್ಲಾ ಜಿಲ್ಲಾಮಟ್ಟದ ಅಧಿಕಾರಿಗಳು, ತಹಸೀಲ್ದಾರ್‌ಗಳು ಭಾಗಿಯಾಗಲಿದ್ದಾರೆ.