ರಾಜ್ಯ ಸರ್ಕಾರದಿಂದ ಆ.30 ರಂದು ಉದ್ಯೋಗ ಮೇಳ ಆಯೋಜನೆ

Team Newsnap
1 Min Read

ಬೆಂಗಳೂರು :ಆ.30 ಚನ್ನಪಟ್ಟಣದಲ್ಲಿ ಉದ್ಯೋಗ ಮೇಳ ಆಯೋಜಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಆಗಸ್ಟ್ 30ರಂದು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಜಿಲ್ಲಾಡಳಿತ ರಾಮನಗರ ಇವರ ಸಹಯೋಗದಲ್ಲಿ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಅಂಚೆ ಕಛೇರಿ ರಸ್ತೆ, ಚನ್ನಪಟ್ಟಣ ಇಲ್ಲಿ ಮೇಳವನ್ನು ಆಯೋಜಿಸಲಾಗಿದೆ.

150ಕ್ಕೂ ಹೆಚ್ಚಿನ ಪ್ರತಿಷ್ಠಿತ ಕಂಪನಿಗಳು ಜಿಲ್ಲಾ ಮಟ್ಟದ ಉದ್ಯೋಗ ಮೇಳದಲ್ಲಿ ಭಾಗಿಯಾಗಲಿದೆ.

ಅರ್ಹತೆ : ಎಸ್‌ಎಸ್‌ಎಲ್ಸಿ (ಉತ್ತೀರ್ಣ/ ಅನುರ್ತೀರ್ಣ), ಪಿಯುಸಿ, ಐಟಿಐ, ಡಿಪ್ಲೊಮಾ ಮತ್ತು ಎಲ್ಲಾ ಪದವೀಧರರು ಪಾಲ್ಗೊಳ್ಳಬಹುದು. ಮಂಡ್ಯ : ಇಂದು ಹೆಚ್‌ಡಿಕೆ ಮೊದಲ ದಿಶಾ ಸಭೆ

ಆಸಕ್ತರು https://skillconnect.kaushalkar.com/ ಲಿಂಕ್ ಅನ್ನು ಬಳಕೆ ಮಾಡಿ ನೋಂದಣಿ ಮಾಡಿಕೊಳ್ಳಬಹುದು.

Share This Article
Leave a comment