ಮಂಡ್ಯ ರಾಜಕಾರಣ : ಬಿಜೆಪಿ ಅಭ್ಯಥಿ೯ ಹೆಸರಿನಲ್ಲೇ ಮತ್ತೊಬ್ಬ ಮಂಜುನಾಥ್ ನನ್ನು ಕಣಕ್ಕೆ !

Team Newsnap
1 Min Read

ಮಂಡ್ಯದಲ್ಲಿ ವಿಧಾನ ಪರಿಷತ್ ಚುನವಣೆಯಲ್ಲಿ ಬಿಜೆಪಿ ಮಣಿಸಲು ತಂತ್ರಗಾರಿಕೆ ಮಾಡಿರುವ ಜೆಡಿಎಸ್, ಬಿಜೆಪಿ ಅಭ್ಯಥಿ೯ ಬೂಕಳ್ಳಿ ಮಂಜುನಾಥ್ ಎದುರು ಪಕ್ಷೇತರ ಅಭ್ಯಥಿ೯ಯಾಗಿ ಬಿ. ಪಿ ಮಂಜುನಾಥ್ ಎಂಬುವವರನ್ನು ಕಣಕ್ಕೆ ಇಳಿಸಿದ್ದಾರೆ

ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಸದೆ ಸುಮಲತಾ ವಿರುದ್ಧ ಸುಮಲತಾ ಹೆಸರಿನಲ್ಲಿ ಮೂವರನ್ನು ಪಕ್ಷೇತರ ಅಭ್ಯಥಿ೯ಯಾಗಿ ಕಣಕ್ಕೆ ಇಳಿಸಿದ್ದರು ತಂತ್ರಗಾರಿಕೆಯನ್ನ ಹೆಣೆದಿರೋದು ತಿಳಿದುಬಂದಿತ್ತು. ಸುಮಲತಾ ಹೆಸರಿನ ಮೂವರು ಮಹಿಳೆಯರನ್ನು ಕರೆತಂದು ಪಕ್ಷೇತರ ಅಭ್ಯರ್ಥಿಗಳಾಗಿ ಚುನಾವಣೆಗೆ ನಿಲ್ಲಿಸಲಾಗಿತ್ತು.

ಅದೇ ತಂತ್ರಗಾರಿಕೆಯನ್ನು ಮಾಡಿದವರು ದಳಪತಿಗಳು ಎಂಬ ಅಂಶ ಬಯಲಾಗಿದೆ. ಈ ರೋಚಕ ಕುತಂತ್ರವನ್ನು ಸಚಿವ ನಾರಾಯಣಗೌಡ ಇದೀಗ ಬಹಿರಂಗಪಡಿಸಿದ್ದಾರೆ.

ಇದೀಗ ಬಿಜೆಪಿ ಅಭ್ಯರ್ಥಿ ಬೂಕಳ್ಳಿ ಮಂಜು ವಿರುದ್ಧವೂ ಜೆಡಿಎಸ್‌ ಇಂಥದ್ದೇ ತಂತ್ರಗಾರಿಕೆ ಹೆಣೆದಿದೆ ಎಂದು ನಾರಾಯಣ ಗೌಡ ಆರೋಪಿಸಿದ್ದಾರೆ.

ಬೂಕಳ್ಳಿ ಮಂಜು ವಿರುದ್ಧ ಮಂಜುನಾಥ್‌ ಜಿ.ಬಿ ಎಂಬುವವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಎಂಎಲ್‌ಸಿ ಚುನಾವಣೆಯಲ್ಲಿ ನಿಲ್ಲಿಸಿದ್ದಾರೆ ಎಂದು ಸಚಿವರು ಹೇಳಿದ್ದಾರೆ

ಬಿಜೆಪಿ ಅಭ್ಯರ್ಥಿ ಬೂಕಳ್ಳಿ ಮಂಜು ಕೂಡಾ ಕಿಡಿಕಾರಿ, ಇದು ಎದುರಾಳಿಗಳ ಕುತಂತ್ರ, ಕುತಂತ್ರಕ್ಕೆ ಬೆಲೆ ಸಿಗಲ್ಲ. ನಾನು ಮತದಾರರ ಮನೆಗಳಿಗೆ ನೇರ ಪರಿಚಯ ಇದ್ದೇನೆ. ಜೆಡಿಎಸ್‌ನವರ ಗಿಮಿಕ್ ನೋಡಿದ್ರೆ ಬಿಜೆಪಿ ಮೇಲಿನ ಅವರಿಗಿರುವ ಭಯ ಗೊತ್ತಾಗುತ್ತೆ ಅಂತಾ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಮಂಜುಗೆ ಬರಬೇಕಿದ್ದ ಮತಗಳನ್ನು ಹಾಗೂ ಪ್ರಾಶಸ್ತ್ಯ ಮತಗಳನ್ನು ಡಿವೈಡ್ ಮಾಡಲು, ಹೆಸರಿನ ಗೊಂದಲ ಮೂಡಿಸಲು ಈ​ ತಂತ್ರ ಮಾಡಲಾಗಿದೆ ಎಂಬುದು ಆರೋಪ.

ಈ ತಂತ್ರಕ್ಕೆ ಮತದಾರರು ಯಾವ‌ ರೀತಿ ಮಣೆ ಹಾಕುತ್ತಾರೆಂಬ ಕುತೂಹಲ ಇದ್ದೇ ಇದೆ.

Share This Article
Leave a comment