ಈ ಸಿವಿಲ್ ಎಂಜನೀಯರ್ ಕೆಲಸವಿಲ್ಲ : ಬೈಕ್​​ಗಳನ್ನು ಕದ್ದು ಮಾರುವುದೇ ಈತನ ದಂಧೆ

Team Newsnap
1 Min Read

ಆಂಧ್ರದ ಕಡಪ ಮೂಲದ ಸಿವಿಲ್ ಎಂಜಿನಿಯರ್ ಒಬ್ಬನನ್ನು ಬುಲೆಟ್ ಬೈಕ್​​ಗಳ ಕಳ್ಳತನ ಆರೋಪದ ಮೇಲೆ ಬಂಡೆಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಕಳ್ಳನ ಹೆಸರು ಬಹಿರಂಗಗೊಂಡಿಲ್ಲ. ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದ ಕಳ್ಳ, ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ.

ಸಂದರ್ಶನದಲ್ಲಿ ಫೇಲ್​ ಆಗಿದ್ದರೂ . ಆಂಧ್ರದ ತನ್ನ ಊರಿನಲ್ಲಿ ಕೆಲಸ ಸಿಕ್ಕಿದೆ ಎಂದು ಬೆಂಗಳೂರಿಗೆ ಆಗಾಗ ಬರುತ್ತಿದ್ದ ಎನ್ನಲಾಗಿದೆ.

ಬೆಂಗಳೂರಿನ ಪಿಜಿ ಒಂದರಲ್ಲಿ ವಾಸವಿದ್ದ ಎಂಜಿನಿಯರ್​​, ರಾಯಲ್ ಎನ್​ಫೀಲ್ಡ್​ ಬೈಕ್​ಗಳನ್ನ ಕಳ್ಳತನ ಮಾಡೋದನ್ನು ರೂಢಿಸಿಕೊಂಡಿದ್ದ.

ಬೆಂಗಳೂರಿಂದ ಆಂಧ್ರಕ್ಕೆ ಹೋಗುವಾಗ ಬೆಂಗಳೂರಲ್ಲಿ ಬೈಕ್ ಕದ್ದುಕೊಂಡು ಹೋಗುತ್ತಿದ್ದ. ಅದನ್ನು ಅಲ್ಲಿ ಮಾರಾಟ ಮಾಡಿ, ಅಲ್ಲಿಂದ ಬರುವಾಗ ಮತ್ತೊಂದು ಬುಲೆಟ್ ಕದ್ದುಕೊಂಡು ಬರುತ್ತಿದ್ದ ಅಲ್ಲಿ ಕದ್ದ ಬುಲೆಟ್ ಬೈಕ್​​ ಅನ್ನ ಬೆಂಗಳೂರಲ್ಲಿ ಮಾರಾಟ ಮಾಡಿ ಹಣ ಪಡೆದುಕೊಳ್ತಿದ್ದ ಎನ್ನಲಾಗಿದೆ.

ಬಂಡೆಪಾಳ್ಯ ಪೊಲೀಸರು ಬಂಧಿತನಿಂದ 15 ಲಕ್ಷಕ್ಕೂ ಅಧಿಕ ಮೌಲ್ಯದ 10 ಬುಲೆಟ್ ಬೈಕ್​​ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Share This Article
Leave a comment