January 4, 2025

Newsnap Kannada

The World at your finger tips!

d c office mandya

ಮಂಡ್ಯ ಜಿಲ್ಲೆಯಲ್ಲಿ ನಾಳೆಯ ಚುನಾವಣೆಗೆ ಸಕಲ ಸಿದ್ಧತೆ

Spread the love

ಕರ್ನಾಟಕ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಗೆ ನಾಳೆ ( ಜೂನ್ 13 ರಂದು) ಮತದಾನ ನಡೆಯಲಿರುವ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸಲು ಜಿಲ್ಲಾ ಆಡಳಿತವು ಸಕಲ ಸಿದ್ದತೆ ಮಾಡಿಕೊಂಡಿದೆ

ಮಂಡ್ಯ ಜಿಲ್ಲೆಯಲ್ಲಿ ಮತದಾರರ ಸಂಖ್ಯೆ :

ಕೆ.ಆರ್.ಪೇಟೆ-3326, ನಾಗಮಂಗಲ-2959, ಪಾಂಡವಪುರ-3705, ಮಂಡ್ಯ-15925, ಮದ್ದೂರು- 10360, ಶ್ರೀರಂಗಪಟ್ಟಣ-3307, ಮಳವಳ್ಳಿ-7720 ಒಟ್ಟು 47,302 ಮತದಾರರು ಇದ್ದಾರೆ

ಮತದಾನ ಎಲ್ಲಿ ?

ಕರ್ನಾಟಕ ದಕ್ಷಿಣ ಪದವೀಧರರ ಚುನಾವಣೆಗೆ ಸಂಬಂಧಿಸಿದಂತೆ ಕೆ.ಆರ್.ಪೇಟೆ-03, ( ಮಿನಿ ವಿಧಾನಸೌಧದ 3 ವಿವಿಧ ಕೊಠಡಿ) ನಾಗಮಂಗಲ-03 ಮಿನಿ ವಿಧಾನಸೌಧದ 3 ವಿವಿಧ ಕೊಠಡಿ), ಪಾಂಡವಪುರ-04 ( ಮಿನಿ ವಿಧಾನಸೌಧದ 1 ಕೊಠಡಿ ಹಾಗೂ ತಾಲ್ಲೂಕು ಕಚೇರಿಯ 3 ವಿವಿಧ ಕೊಠಡಿ) ಇದನ್ನು ಓದಿ: ಶಿಕ್ಷಕ ಮತದಾರರಿಗೆ ಎಣ್ಣೆ ಪಾರ್ಟಿ: ಫೋಟೊ, ವಿಡಿಯೊ ವೈರಲ್
ಮಂಡ್ಯ-15(ಮಂಡ್ಯ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ 7 ವಿವಿಧ ಕೊಠಡಿ ಹಾಗೂ ಮಂಡ್ಯ ವಿಶ್ವವಿದ್ಯಾಲಯ ವಿಜ್ಞಾನ ವಿಭಾಗದ 8 ಕೊಠಡಿ) ಮದ್ದೂರು-10 ( ಮಿನಿ ವಿಧಾನಸೌಧದ 2 ಕೊಠಡಿ, ತಾಲ್ಲೂಕು ಪಂಚಾಯತ್ ಕಚೇರಿಯ 2 ಕೊಠಡಿ, ಸರ್ಕಾರಿ ಮಹಿಳಾ ಕಾಲೇಜಿನ ಹಳೆ ಕಟ್ಟಡದ 3 ಕೊಠಡಿ ಹಾಗೂ ಸರ್ಕಾರಿ ಮಹಿಳಾ ಕಾಲೇಜಿನ ಹೊಸ ಕಟ್ಟಡದ 3 ಕೊಠಡಿ), ಶ್ರೀರಂಗಪಟ್ಟಣ-03(ಮಿನಿ ವಿಧಾನಸೌಧದ 3 ಕೊಠಡಿ),ಮಳವಳ್ಳಿ-07 (ಮಿನಿ ವಿಧಾನಸೌಧದ 2 ಕೊಠಡಿ ಹಾಗೂ ತಾಲ್ಲೂಕು ಪಂಚಾಯತ್ ಕಚೇರಿಯ ವಿವಿಧ 5 ಕೊಠಡಿ) ಒಟ್ಟು 45 ಮತಕೇಂದ್ರಗಳನ್ನು ಸಿದ್ಧತೆ ಮಾಡಲಾಗಿದೆ.

ಪ್ರತಿ ಮತಗಟ್ಟೆಗೆ ಒಬ್ಬರು ಪ್ರಿಸೈಡಿಂಗ್ ಅಧಿಕಾರಿ, ಹಾಗೂ ಮೂವರು ಪೋಲಿಂಗ್ ಅಧಿಕಾರಿಗಳು, ಒಬ್ಬರು ಮೈಕ್ರೋ ಅಬ್ಸರ್‌ವರ್ ನೇಮಕಮಾಡಲಾಗಿದೆ , 45 ಮೈಕ್ರೋ ಅಬ್ಸರ್‌ವರ್, ಪ್ರಿಸೈಡಿಂಗ್ ಅಧಿಕಾರಿಗಳು ಹಾಗೂ ಪೋಲಿಂಗ್ ಅಧಿಕಾರಿಗಳು ಸೇರಿದಂತೆ ಒಟ್ಟು 180 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಇದನ್ನು ಓದಿ : ಕೈಲಾಸದಲ್ಲಿ ನಿತ್ಯಾನಂದನ ಮೂರ್ತಿಗೆ ಮಂಗಳಾರತಿ

ಪೊಲೀಸ್ ಬಂದೋಬಸ್ತ್ ಗಾಗಿ ಡಿ.ಎಸ್.ಪಿ-4, ಸಿಪಿಐ/ಪಿಐ- 15, ಪಿ.ಎಸ್.ಐ- 20, ಎಎಸ್ಐ- 45, ಸಿ.ಹೆಚ್.ಸಿ/WHC-71, ಸಿ.ಪಿಸಿ/WPC -112 ಸಿಬ್ಬಂದಿ ಹಾಗೂ 9 ಡಿಎಆರ್ ಪಾರ್ಟಿಗಳನ್ನು ನೇಮಕ ಮಾಡಲಾಗಿದೆ.
ಮತದಾನವು ಜೂನ್ 13 ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ.

ಇದನ್ನು ಓದಿ : ಮೈಸೂರಿನಲ್ಲಿ ಯೋಗ ರಾಜಕಾರಣ – ಪ್ರತಾಪ್ ಸಿಂಹ, ಎಸ್.ಎ.ರಾಮದಾಸ್ ನಡುವೆ ಜಟಾಪಟಿ

ಸರ್ಕಾರಿ ರಜೆ ಯಾರಿಗೆ ?

ದಕ್ಷಿಣ ಪದವೀಧರರ ಕ್ಷೇತ್ರದ ವ್ಯಾಪ್ತಿ ಜಿಲ್ಲೆಗಳಾದ ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಹಾಸನ, ವಿಧಾನ ಪರಿಷತ್ ಮತ ಕ್ಷೇತ್ರಗಳಲ್ಲಿನ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು, ಅನುದಾನಿತ ಹಾಗೂ ಅನುದಾನ ರಹಿತ ವಿದ್ಯಾ ಸಂಸ್ಥೆಗಳು, ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಛೇರಿಗಳು, ರಾಷ್ಟ್ರೀಕೃತ ಹಾಗೂ ಇತರ ಬ್ಯಾಂಕುಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಖಾನೆಗಳು, ಉಳಿದ ಕೈಗಾರಿಕೆ ಸಂಸ್ಥೆಗಳು ಹಾಗೂ ಸಹಕಾರಿ ರಂಗದ ಸಂಘ ಸಂಸ್ಥೆಗಳಲ್ಲಿ, ಎಲ್ಲಾ ವ್ಯವಹಾರಿಕ ಸಂಸ್ಥೆಗಳಲ್ಲಿ, ಔದ್ಯಮಿಕ ಸಂಸ್ಥೆಗಳಲ್ಲಿ ಮತ್ತು ಇತರ Establishment ಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುವ ಪದವೀಧರರು ಹಾಗೂ ಶಿಕ್ಷಕರು ಮತದಾನ ಮಾಡಲು ಅನುಕೂಲವಾಗುವಂತೆ ಅಂತಹ ಅರ್ಹ ಮತದಾರರಿಗೆ ಮತ ಚಲಾಯಿಸಲಿರುವ ಮತದಾರರಿಗೆ ಜೂ.13 ರಂದು ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲಾಗಿದೆ.

Copyright © All rights reserved Newsnap | Newsever by AF themes.
error: Content is protected !!