ಮಾಂಡೌಸ್ ಚಂಡಮಾರುತದ ಅಬ್ಬರ ಜೋರಾಗಿರುವ ಪರಿಣಾಮ ತಮಿಳುನಾಡಿನಲ್ಲಿ ನಾಲ್ವರು ಬಲಿಯಾಗಿದ್ದಾರೆ, ಮಾಂಡೌಸ್ ಸೈಕ್ಲೋನ್ ಗಂಟೆಗೆ 85 ಕಿ.ಮೀ. ವೇಗದಲ್ಲಿ ಬೀಸುತ್ತಿದೆ ಹೀಗಾಗಿ ಭೂಕುಸಿತ ಸೇರಿದಂತೆ 400ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ.
ಚೆನ್ನೈನ ಟಿ.ನಗರದಲ್ಲಿ ನಿಲ್ಲಿಸಿದ್ದ ಕಾರುಗಳ ಮೇಲೆ ಗೋಡೆ ಕುಸಿದು ಬಿದ್ದಿದೆ. 4 ಕಾರುಗಳು ಜಖಂ ಆಗಿವೆ. ನಗರದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. 205 ರಿಲೀಫ್ ಕ್ಯಾಂಪ್ಗಳಲ್ಲಿ 9 ಸಾವಿರ ಜನರಿಗೆ ಆಶ್ರಯ ನೀಡಲಾಗಿದೆ. 10 ಜಿಲ್ಲೆಗಳಲ್ಲಿ ರಕ್ಷಣಾ ತಂಡಗಳನ್ನು ನಿಯೋಜನೆ ಮಾಡಲಾಗಿದೆ.
ಮಾಂಡೌಸ್ ಸೈಕ್ಲೋನ್ ಎಫೆಕ್ಟ್ಗೆ ಚೆನ್ನೈನಲ್ಲಿ ಲಕ್ಷ್ಮೀ, ರಾಜೇಂದ್ರನ್ ಎಂಬವವರು ಸಾವನ್ನಪ್ಪಿದ್ದಾರೆ. ನಗರದ ಮಾದಿಪಾಕಂ, ರಾಮನಗರನಲ್ಲಿ ಮತ್ತಿಬ್ಬರ ಮೃತಪಟ್ಟಿದ್ದಾರೆ.
ತಮಿಳುನಾಡಿನದ್ಯಾಂತ ಚಂಡಮಾರುತದಿಂದ ಸಾಕಷ್ಟು ಹಾನಿಯಾಗಿದೆ, ಇದುವರೆಗೆ 400 ಮರಗಳು ಧರೆಗುರುಳಿದ್ದು, ಇದರಲ್ಲಿ 52 ಮರಗಳನ್ನು ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದ್ದಾರೆ.
More Stories
ಬಜೆಟ್ 2023: ಮಧ್ಯಮ ವರ್ಗಕ್ಕೆ ಬಿಗ್ ರಿಲೀಫ್, 5ರಿಂದ 7 ಲಕ್ಷದವರೆಗೆ ತೆರಿಗೆ ಇಲ್ಲ
ಒಡಿಶಾ ಆರೋಗ್ಯ ಸಚಿವರಿಗೆ ಗುಂಡೇಟು : ಚಿಕಿತ್ಸೆ ಫಲಿಸದೆ ಸಾವು
ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ- ಯುವಕರಿಗೆ ಪ್ರಧಾನಿ ಕರೆ