10 ಸಿಕ್ಸರ್​ಗಳ ಸುರಿಮಳೆ – 24 ಬೌಂಡರಿಗಳ ನೆರವಿನಿಂದ ದ್ವಿಶತಕ ಬಾರಿಸಿದ ಇಶಾನ್ ಕಿಶನ್

Team Newsnap
1 Min Read

ಬಾಂಗ್ಲಾ ವಿರುದ್ಧದ ಶನಿವಾರ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ ಇಶಾನ್ ಕಿಶನ್ ದ್ವಿಶತಕ ಬಾರಿಸಿ ಆರ್ಭಟಿಸಿದ್ದಾರೆ. ಈ ಮೂಲಕ ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿದ 7ನೇ ಬ್ಯಾಟ್ಸ್​​ಮನ್ ಎಂಬ ಹೆಗ್ಗಳಿಕೆ ಇಶಾನ್ ಕಿಶನ್ ಪಾತ್ರರಾಗಿದ್ದಾರೆ.

ಸಚಿನ್, ಸೆಹ್ವಾಗ್, ರೋಹಿತ್ ಬಳಿಕ ಇಶಾನ್ ಕಿಶನ್ ಭಾರತದ ಪರ ದ್ವಿಶತಕ ಬಾರಿಸಿದ ನಾಲ್ಕನೇ ಬ್ಯಾಟ್ಸ್​ಮನ್ ಆಗಿದ್ದಾರೆ. 160.31 ಸ್ಟ್ರೈಕ್​ ರೇನ್​ನಲ್ಲಿ ಬ್ಯಾಟ್ ಬೀಸಿದ ಕಿಶನ್ 131 ಬಾಲ್​ನಲ್ಲಿ 210 ರನ್​ಗಳಿಸಿದರು. 131 ಬಾಲ್​ನಲ್ಲಿ 24 ಬೌಂಡರಿ, 10  ಸಿಕ್ಸರ್​ ಬಾರಿಸಿ ಔಟ್ ಆದರು.

ಇಶಾನ್ ಕಿಶನ್ ಸ್ಫೋಟಕ ದ್ವಿಶತಕ ಬೆನ್ನಲ್ಲೇ ಟೀಂ ಇಂಡಿಯಾಗೆ ಹೊಸ ಭರವಸೆ ಮೂಡಿದೆ. ಇಷ್ಟುದಿನ ಬೆಂಚ್ ಕಾಯುತ್ತಿದ್ದ ಕಿಶನ್, ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡು ತಮ್ಮ ಸಾಮರ್ಥ್ಯವನ್ನು ಆಯ್ಕೆಗಾರರ ಗಮನಕ್ಕೆ ತಂದಿದ್ದಾರೆ.

ಮುಂದಿನ ವರ್ಷ ಭಾರತದಲ್ಲಿ ಏಕದಿನ ವಿಶ್ವಕಪ್​​ ನಡೆಯಲಿದೆ. ಈ ಟೂರ್ನಿ ತಯಾರಿಯಲ್ಲಿರುವ ಭಾರತಕ್ಕೆ ಮತ್ತೊಬ್ಬ ಯುವ ಆಟಗಾರ ಹೊಸ ಭರವಸೆ ಮೂಡಿಸಿದ್ದಾರೆ.

Share This Article
Leave a comment