November 15, 2024

Newsnap Kannada

The World at your finger tips!

WhatsApp Image 2022 12 10 at 2.48.04 PM

ಮಾಂಡೌಸ್ ಚಂಡಮಾರುತ ಎಫೆಕ್ಟ್: ಚೆನ್ನೈ ನಲ್ಲಿ ನಾಲ್ವರ ಬಲಿ – 400 ಮರಗಳು ಧರೆಗೆ

Spread the love

ಮಾಂಡೌಸ್ ಚಂಡಮಾರುತದ ಅಬ್ಬರ ಜೋರಾಗಿರುವ ಪರಿಣಾಮ ತಮಿಳುನಾಡಿನಲ್ಲಿ ನಾಲ್ವರು ಬಲಿಯಾಗಿದ್ದಾರೆ, ಮಾಂಡೌಸ್​ ಸೈಕ್ಲೋನ್​ ಗಂಟೆಗೆ 85 ಕಿ.ಮೀ. ವೇಗದಲ್ಲಿ ಬೀಸುತ್ತಿದೆ ಹೀಗಾಗಿ ಭೂಕುಸಿತ ಸೇರಿದಂತೆ 400ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ.

ಚೆನ್ನೈನ‌ ಟಿ.ನಗರದಲ್ಲಿ ನಿಲ್ಲಿಸಿದ್ದ ಕಾರುಗಳ ಮೇಲೆ ಗೋಡೆ ಕುಸಿದು ಬಿದ್ದಿದೆ. 4‌ ಕಾರುಗಳು ಜಖಂ ಆಗಿವೆ. ನಗರದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. 205 ರಿಲೀಫ್ ಕ್ಯಾಂಪ್​ಗಳಲ್ಲಿ 9 ಸಾವಿರ ಜನರಿಗೆ ಆಶ್ರಯ ನೀಡಲಾಗಿದೆ. 10 ಜಿಲ್ಲೆಗಳಲ್ಲಿ ರಕ್ಷಣಾ ತಂಡಗಳನ್ನು ನಿಯೋಜನೆ ಮಾಡಲಾಗಿದೆ.

ಮಾಂಡೌಸ್ ಸೈಕ್ಲೋನ್ ಎಫೆಕ್ಟ್​ಗೆ ಚೆನ್ನೈನಲ್ಲಿ ಲಕ್ಷ್ಮೀ, ರಾಜೇಂದ್ರನ್ ಎಂಬವವರು ಸಾವನ್ನಪ್ಪಿದ್ದಾರೆ. ನಗರದ ಮಾದಿಪಾಕಂ, ರಾಮನಗರನಲ್ಲಿ ಮತ್ತಿಬ್ಬರ ಮೃತಪಟ್ಟಿದ್ದಾರೆ.

ತಮಿಳುನಾಡಿನದ್ಯಾಂತ ಚಂಡಮಾರುತದಿಂದ ಸಾಕಷ್ಟು ಹಾನಿಯಾಗಿದೆ, ಇದುವರೆಗೆ 400 ಮರಗಳು ಧರೆಗುರುಳಿದ್ದು, ಇದರಲ್ಲಿ 52 ಮರಗಳನ್ನು ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!