ಮಲೈಕಾ ಅರೋರಾ ಕಾರು ಅಪಘಾತ- ತಲೆಗೆ ಪೆಟ್ಟು: ಪ್ರಾಣಾಪಾಯದಿಂದ ಪಾರು

Team Newsnap
1 Min Read

ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಪರವಾಗಿ ಪ್ರಚಾರಕ್ಕೆ ಹೋಗಿ ವಾಪಸ್ ಆಗುತ್ತಿದ್ದಾಗ ಬಾಲಿವುಡ್ ನಟಿ ಮಲೈಕಾ ಅರೋರಾ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ.

ಪುಣೆಯ ಪನ್ವೇಲ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಎಂಎನ್​ಎಸ್​ ಪದಾಧಿಕಾರಿಗಳ ಕಾರಿಗೆ ಡಿಕ್ಕಿ ಹೊಡೆದಿದೆ.

ಈ ಅಪಘಾತದಲ್ಲಿ ನಟಿ ಮಲೈಕಾ ಅರೋರಾ ತಲೆಗೆ ಏಟಾಗಿದೆ. ಅರೋರಾ ಅವರನ್ನು ನವ ಮುಂಬೈನಲ್ಲಿರುವ ಅಪೊಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಲೈಕಾ ಅರೋರಾ ತಲೆಗೆ ಚಿಕ್ಕ ಗಾಯವಾಗಿದೆ. ಇದೀಗ ಸಿಟಿ ಸ್ಕ್ಯಾನ್ ವರದಿ ಕೂಡ ಬಂದಿದೆ, ಅವರು ಆರಾಮಾಗಿದ್ದಾರೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಿನ್ನೆ ರಾತ್ರಿಯಿಂದ ನಟಿಯ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. ಇಂದು ಮಧ್ಯಾಹ್ನದ ವೇಳೆಗೆ ಅವರನ್ನ ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದು ಅಪೊಲೋ ಆಸ್ಪತ್ರೆ ಹೇಳಿದೆ.

Share This Article
Leave a comment