ಇಮ್ರಾನ್ ಖಾನ್​ಗೆ ಕೊಂಚ ನಿಟ್ಟುಸಿರು: ಅವಿಶ್ವಾಸ ನಿರ್ಣಯದ ಪ್ರಸ್ತಾಪವೇ ವಜಾ

Team Newsnap
1 Min Read

ಅವಿಶ್ವಾಸ ನಿರ್ಣಯದ ತೂಗುಗತ್ತಿಯಿಂದ ಸಂಕಷ್ಟಕ್ಕೆ ಒಳಗಾಗಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.

ವಿರೋಧ ಪಕ್ಷಗಳು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿರುದ್ದ ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಪ್ರಸ್ತಾಪವನ್ನು ಸ್ಪೀಕರ್ ವಜಾ ಮಾಡಿದ್ದಾರೆ.

ಅವಿಶ್ವಾಸ ನಿರ್ಣಯದ ಪ್ರಸ್ತಾಪವನ್ನು ವಜಾ ಮಾಡಿದ ಸ್ಪೀಕರ್ ಆರೀಫ್ ಅಲ್ವಿ, ಸದ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ಮಾಡುವಂತೆ ಕೋರಿಕೊಂಡರು.

ಸದನದಲ್ಲಿ ಗಲಾಟೆ ಹೆಚ್ಚಾದ ಹಿನ್ನೆಲೆಯಲ್ಲಿ ಕಲಾಪದ ಚರ್ಚೆಯನ್ನು ಅಮಾನತಿನಲ್ಲಿ ಇಟ್ಟಿದ್ದಾರೆ. ಅಂದ್ಹಾಗೆ ಇವತ್ತಿನ ಕಲಾಪಕ್ಕೆ ಪ್ರಧಾನಿ ಇಮ್ರಾನ್ ಖಾನ್ ಗೈರಾಗಿದ್ದರು.

ಈ ನಡುವೆ ಇಮ್ರಾನ್ ಖಾನ್ ಮಾತನಾಡಿ ಅಸೆಂಬ್ಲಿ ವಿಸರ್ಜನೆ ಮಾಡಿ ಸಾರ್ವತ್ರಿಕ ಚುನಾವಣೆ ನಡೆಸುವಂತೆ ರಾಷ್ಟ್ರಧ್ಯಕ್ಷರಿಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ.

ಅವಿಶ್ವಾಸ ನಿರ್ಣಯದ ಕುತಂತ್ರದಲ್ಲಿ ವಿದೇಶದ ಕೈವಾಡವಿದೆ. ಸ್ಪೀಕರ್ ಅವರ ಈಗಿನ ರಾಷ್ಟ್ರದ ಜನ ಖುಷಿಯಿಂದ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು

ಅವಿಶ್ವಾಸ ನಿಣ೯ಯದ ಪ್ರಸ್ತಾಪವೇ ವಜಾಗೊಂಡ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ರ ಪ್ರಧಾನಿ ಹುದ್ದೆ ಸಧ್ಯಕ್ಕೆ ಕುತ್ತಿಲ್ಲ. ಬೀಸೋ ದೊಣ್ಣೆ ಯಿಂದ ತಪ್ಪಿಸಿಕೊಂಡಂತಾಗಿದೆ.

Share This Article
Leave a comment