ಮ್ಯಾಗಿ .. ಮ್ಯಾಗಿ.. ಮ್ಯಾಗಿ : ಬೇಸತ್ತು ಪತ್ನಿಗೆ ವಿಚ್ಛೇದನ ನೀಡಿದ ಪತಿ

Team Newsnap
2 Min Read

ಇಂದಿನ ಯುವ ದಂಪತಿಗಳು ರೆಡಿ ಟು ಈಟ್ ಫುಡ್ ಗಳ ಮೇಲೆ ಅವಲಂಬಿತರಾಗುತ್ತಿರುವುದು ಹೆಚ್ಚಾಗಿದೆ. ಈ ಬೆಳವಣಿಗೆ ಕೆಲವರಲ್ಲಿ ಕಸಿವಿಸಿಯುಂಟು ಮಾಡಿದೆ. ಪತಿಯೊಬ್ಬ ತನ್ನ ಪತ್ನಿ ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ರಾತ್ರಿ ಊಟ ಎಲ್ಲೆಲ್ಲೂ ಮ್ಯಾಗಿ ಮಾಡಿ ಹಾಕುತ್ತಿದ್ದಾಳೆಂದು ಬೇಸತ್ತು ಪತಿಯೊಬ್ಬ ಪತ್ನಿಗೆ ವಿಚ್ಛೇದನ ನೀಡಿದ್ದಾನೆ.

ಇದನ್ನು ಓದಿ –ಕೆಸರು, ನೀರಿನಲ್ಲಿ ಸಾಮಾನ್ಯ ಮಹಿಳೆಯಂತೆ ನಡೆದುಕೊಂಡು ಹೋಗುವ ಐಎಎಸ್ ಅಧಿಕಾರಿ

ಮ್ಯಾಗಿ ಕೇಸ್ ಪ್ರಕರಣ

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಂ.ಎಲ್.ರಘುನಾಥ್ ಅವರು ಬಳ್ಳಾರಿಯಲ್ಲಿ ಜಿಲ್ಲಾ ನ್ಯಾಯಾಧೀಶರಾಗಿದ್ದಾಗ ಈ ಪ್ರಕರಣ ಕಂಡು ಬಂದಿತ್ತು. ಮ್ಯಾಗಿ ನೂಡಲ್ಸ್ ಹೊರತುಪಡಿಸಿ ಬೇರೆ ಯಾವುದೇ ಅಡುಗೆ ಮಾಡಲು ನನ್ನ ಹೆಂಡತಿಗೆ ಗೊತ್ತಿಲ್ಲ, ಉಪಹಾರ, ಮಧ್ಯಾಹ್ನ ಊಟ ಹಾಗೂ ರಾತ್ರಿ ಊಟಕ್ಕೆಲ್ಲಾ ಮ್ಯಾಗಿ ನೂಡಲ್ಸ್ ಮಾಡುತ್ತಿದ್ದಳು. ಪ್ರಾವಿಷನ್ ಸ್ಟೋರ್’ಗೆ ಹೋದರೆ ಆಕೆ ಕೇವಲ ಇನ್‌ಸ್ಟಂಟ್ ನೂಡಲ್ಸ್ ಮಾತ್ರ ತರುತ್ತಿದ್ದಳು ಎಂದು ವ್ಯಕ್ತಿ ಹೇಳಿಕೊಂಡಿದ್ದ. ಈ ಕೇಸ್’ಗೆ ಮ್ಯಾಗಿ ಕೇಸ್ ಎಂದು ಹೆಸರಿಡಲಾಗಿತ್ತು. ವಾದ ಪ್ರತಿವಾದದ ಬಳಿಕ ಅಂತಿಮವಾಗಿ ದಂಪತಿಗಳು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಂಡಿದ್ದರು ಎಂದು ಹೇಳಿದ್ದಾರೆ.

ವೈವಾಹಿಕ ಸಮಸ್ಯೆಗಳ ರಾಜಿ

ವೈವಾಹಿಕ ಸಮಸ್ಯೆಗಳನ್ನು ಇತ್ಯರ್ಥಪಡಿಸುವುದು ಸ್ವಲ್ಪ ಕಷ್ಟ ‘ಜೋಡಿಗಳ ನಡುವೆ ರಾಜಿ ತರಲು ಮತ್ತು ಅವರನ್ನು ಮತ್ತೆ ಒಂದುಗೂಡಿಸಲು ನಾವು ಭಾವನೆಗಳನ್ನು ಬಳಸುತ್ತೇವೆ. ಇಲ್ಲಿ ದೈಹಿಕ ಸಮಸ್ಯೆಗಳಿಗಿಂತ ಮಾನಸಿಕ ಸಮಸ್ಯೆಗಳು ಹೆಚ್ಚು ಕೆಲಸ ಮಾಡುತ್ತವೆ. ಹೆಚ್ಚಿನ ಸಂದರ್ಭಗಳಲ್ಲಿ, ದಂಪತಿಗಳು ಮತ್ತೆ ಒಂದಾದರೂ, ಮನಸ್ತಾಪಗಳ ಗುರುತುಗಳು ಹಾಗೆಯೇ ಉಳಿಯುತ್ತವೆ. 800-900 ವೈವಾಹಿಕ ಪ್ರಕರಣಗಳಲ್ಲಿ, ನಾವು ಸುಮಾರು 20-30 ಪ್ರಕರಣಗಳಲ್ಲಿ ಯಶಸ್ವಿಯಾಗುತ್ತೇವೆ. ಹಿಂದಿನ ಲೋಕ ಅದಾಲತ್‌ನಲ್ಲಿ ಸುಮಾರು 110 ವಿಚ್ಛೇದನ ಪ್ರಕರಣಗಳಲ್ಲಿ ಕೇವಲ 32 ಪ್ರಕರಣಗಳಲ್ಲಿ ಮಾತ್ರ ರಾಜಿ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.

ಲವ್ & ಆರೆಂಜ್ ಮ್ಯಾರೆಜ್ : ವಿಚ್ಛೇದನ ಪ್ರಕರಣಗಳು

ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗತೊಡಗಿವೆ. ವಿಚ್ಛೇದನ ಪಡೆಯುವ ಮೊದಲು ದಂಪತಿಗಳು ಕನಿಷ್ಠ ಒಂದು ವರ್ಷ ಒಟ್ಟಿಗೆ ಇರಬೇಕೆಂಬ ಕಾನೂನು ಇದೆ. ಅಂತಹ ಕಾನೂನು ಇಲ್ಲದಿದ್ದರೆ, ಮದುವೆ ಮಂಟಪಗಳಿಂದಲೇ ನೇರವಾಗಿ ವಿಚ್ಛೇದನ ಅರ್ಜಿಗಳನ್ನು ಸಲ್ಲಿಕೆಯಾಗುತ್ತಿತ್ತು. ವಿವಾಹವಾದ ಕೇವಲ ಒಂದು ದಿನದ ನಂತರ ದಂಪತಿಗಳು ವಿಚ್ಛೇದನದಕ್ಕೆ ಅರ್ಜಿ ಸಲ್ಲಿಸಿದ ಪ್ರಕರಣಗಳೂ ಕೂಡ ನ್ಯಾಯಾಲಯದಲ್ಲಿ ಇದೆ.

ಸಂಗಾತಿಯೊಂದಿಗೆ ಮಾತನಾಡದಿದ್ದಕ್ಕಾಗಿ, ತಟ್ಟೆಯ ತಪ್ಪಾದ ಬದಿಯಲ್ಲಿ ಉಪ್ಪು ಹಾಕಿದ್ದಕ್ಕಾಗಿ, ಮದುವೆಯ ಸೂಟ್ ಅನ್ನು ತಪ್ಪಾಗಿ ಹೊಲಿದಿದ್ದಕ್ಕಾಗಿ, ಹೆಂಡತಿಯನ್ನು ಹೊರಗೆ ಕರೆದೊಯ್ಯದಿದ್ದಕ್ಕಾಗಿ ಮತ್ತು ಇತರ ಕಾರಣಗಳಿಗಾಗಿ ವಿಚ್ಛೇದನಕ್ಕೆ ಅರ್ಜಿಗಳು ದಾಖಲಾಗಿವೆ. ಲವ್ ಅಥವಾ ಆರೆಂಜ್ ಮ್ಯಾರೆಜ್ ಎಂಬ ವ್ಯತ್ಯಾಸವಿಲ್ಲ ಎರಡೂ ರೀತಿಯ ವಿವಾಹಗಳಲ್ಲೂ ವಿಚ್ಛೇದನಕ್ಕೆ ಅರ್ಜಿಗಳು ದಾಖಲಾಗುತ್ತಿವೆ.

ಗ್ರಾಮೀಣ ಪ್ರದೇಶದಲ್ಲಿ ವಿಚ್ಛೇದನಗಳು ಕಡಿಮೆ

ಗ್ರಾಮೀಣ ಭಾಗಗಳಿಗಿಂತ ನಗರ ಪ್ರದೇಶಗಳಿಂದಲೇ ಹೆಚ್ಚು ವಿಚ್ಛೇದನ ಅರ್ಜಿಗಳು ಬರುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿಗಳು ಮಧ್ಯ ಪ್ರವೇಶಿಸಿ ಸಮಸ್ಯೆ ಇತ್ಯರ್ಥಪಡಿಸುತ್ತವೆ. ಮಹಿಳೆಯರಿಗೆ ಸ್ವಾತಂತ್ರ್ಯವಿಲ್ಲ ಮತ್ತು ಸಮಾಜದ ಬಗ್ಗೆ ಅವರ ಭಯ ಮತ್ತು ಕುಟುಂಬದ ಭಾವನೆಗಳು ಪರಿಸ್ಥಿತಿಯನ್ನು ನಿಭಾಯಿಸಲು ಅವರನ್ನು ಒತ್ತಾಯಿಸುತ್ತವೆ. ಆದರೆ ನಗರಗಳಲ್ಲಿ ಮಹಿಳೆಯರು ಶಿಕ್ಷಣ ಪಡೆದು ಆರ್ಥಿಕವಾಗಿ ಸ್ವಾವಲಂಬಿಗಳಾಗಿರುತ್ತಾರೆ. ಹೀಗಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ಆತಂಕ ಪಡುವುದಿಲ್ಲ ಎಂದು ಹೇಳಿದ್ದಾರೆ.

Share This Article
Leave a comment