ಕೆಸರು, ನೀರಿನಲ್ಲಿ ಸಾಮಾನ್ಯ ಮಹಿಳೆಯಂತೆ ನಡೆದುಕೊಂಡು ಹೋಗುವ ಐಎಎಸ್ ಅಧಿಕಾರಿ

Team Newsnap
1 Min Read
IAS officer who walks like a normal woman in sludge and water
WhatsApp Image 2022 05 28 at 3.21.50 PM

ಅಸ್ಸಾಂನಲ್ಲಿ ಸೇವೆ ಸಲ್ಲಿಸುತ್ತಿರುವ ವರಂಗಲ್ ಮೂಲದ ಐಎಎಸ್ ಅಧಿಕಾರಿ ಕೀರ್ತಿ ಜಲ್ಲಿ ಅಸ್ಸಾಂ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಾಮಾನ್ಯ ಜನರಿಗೆ ಖುದ್ದಾಗಿ ನೆರವಾಗುತ್ತಾರೆ

ಕೀರ್ತಿ ಜಲ್ಲಿ ಜನರಿಗೆ ನೆರವಾಗುವ ಭರದಲ್ಲಿ ತಮ್ಮ ವೇಷಧಾರಣೆಯನ್ನೂ ಮರೆತಿದ್ದಾರೆ ಎನಿಸುತ್ತೆ. ತುಂಬಾ ಸಾದಾಸೀದಾ ಸೀರೆ ಧರಿಸಿ, ಯಾವುದೇ ಮೇಕಪ್ ಕೂಡ ಇಲ್ಲದೇ, ಕೆಸರು ನೀರು ಎನ್ನದೇ ಸಂತ್ರಸ್ತರ ಕಷ್ಟ ಆಲಿಸಿ, ಅಗತ್ಯವಾದ ನೆರವನ್ನು ಕಲ್ಪಿಸಲು ಶ್ರಮಿಸುತ್ತಿದ್ದಾರೆ.

ಇದನ್ನು ಓದಿ –ಮನುಷ್ಯ ಸಾಮಾಜಿಕ ಜಾಲತಾಣದ ನಿಯಂತ್ರಣದಲ್ಲಿ ಇದ್ದಾನೆ : ಇಸ್ರೋ ಮಾಜಿ ಅಧ್ಯಕ್ಷ ವಿಷಾದ

ಇವರ ಫೋಟೋಗಳೀಗ ಸಾಮಾಜಿಕ ಮಾಧ್ಯಮಗಳಲ್ಲಿ ಫುಲ್ ವೈರಲ್ ಆಗುತ್ತಿವೆ. 
2013ರ ಬ್ಯಾಚ್‌ನ ಅಧಿಕಾರಿಯಾದ ಇವರು, ಅಸ್ಸಾಂ ಕಾರ್ಮಿಕ ಮಹಿಳೆಯರನ್ನು ಹಾಗೂ ಮಕ್ಕಳನ್ನು ಕಾಡುವ ರಕ್ತಹೀನತೆ, ಪೌಷ್ಠಿಕಾಂಶ ಕೊರತೆ ಸಮಸ್ಯೆ ನೀಗಿಸಲು ಸ್ಥಳೀಯವಾಗಿ ಸಿಗುವ ನೆಲ್ಲಿಕಾಯಿಯನ್ನು ನಿತ್ಯದ

ಆಹಾರದಲ್ಲಿ ಬಳಸುವಂತೆ ಮಾಡಿ, ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಿಸಿದ್ದರು. 2020ರಲ್ಲಿ ಕೋವಿಡ್ ಕಾಲದಲ್ಲಿ ಮದುವೆಯಾದ ಇವರು, ಮರುದಿನವೇ ಕರ್ತವ್ಯಕ್ಕೆ ಮರಳಿ, ಜನರಿಂದ ಭೇಷ್ ಎನಿಸಿಕೊಂಡರು.

Share This Article
Leave a comment