ಜನಸಾಮಾನ್ಯರಿಗೆ ಕಾನೂನು ಅರಿವು ಅತ್ಯಗತ್ಯ: ನ್ಯಾ. ವೀರಪ್ಪ

Team Newsnap
1 Min Read
Legal awareness is essential for the people: Veerappa

ಕಾನೂನನ್ನು ಉತ್ತಮ ರೀತಿಯಾಗಿ ತಿಳಿದುಕೊಂಡರೆ ನಮಗೆ ಇರುವಂತಹ ಹಕ್ಕುಗಳು ಅರಿವಾಗುತ್ತದೆ.ಸಮಾಜದಲ್ಲಿ ಬದುಕಲು ಸಹಾಯವಾಗುತ್ತದೆ ಆಗಾಗಿ ಜನಸಾಮಾನ್ಯರಿಗೆ ಕಾನೂನು ಅರಿವು ಅತ್ಯಗತ್ಯ ಎಂದು ಹೈಕೋರ್ಟ್ ನ ನ್ಯಾಯಾಧೀಶ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ನ್ಯಾ ವೀರಪ್ಪ ತಿಳಿಸಿದರು.

ಇದನ್ನು ಓದಿ –ಕೆಸರು, ನೀರಿನಲ್ಲಿ ಸಾಮಾನ್ಯ ಮಹಿಳೆಯಂತೆ ನಡೆದುಕೊಂಡು ಹೋಗುವ ಐಎಎಸ್ ಅಧಿಕಾರಿ

ಮಂಡ್ಯ ನ್ಯಾಯಾಲಯದ ಆವರಣದಲ್ಲಿ ನಡೆದ ದೆಹಲಿಯ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಕಾನೂನು ಸೇವಗಳ ಪ್ರಾಧಿಕಾರ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಭಾರತದ ಅಮೃತ ಮಹೋತ್ಸವ-2021 ಅಂಗವಾಗಿ “ಜಾಥಾ ಹಾಗೂ ಕಾನೂನು ಅರಿವು”ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿದರು.

ಅಂಗನವಾಡಿ ಕಾರ್ಯಕರ್ತರು ಹಕ್ಕುಗಳ ಬಗ್ಗೆ ಹಾಗೂ ಮನೆಯಲ್ಲಿರುವ ವೃದ್ಧರನ್ನು ಯಾವ ರೀತಿಯಾಗಿ ಕಾಳಜಿಯಿಂದ ನೋಡಿಕೊಳ್ಳಬೇಕು ಎಂಬುದರ ಕುರಿತು ಜನರಲ್ಲಿ ಅರಿವು ಮೂಡಿಸ ಬೇಕು ಎಂದರು.

ಕೋವಿಡ್ 19 ರ ಕಾಲಘಟ್ಟದಲ್ಲಿ ಅಂಗನವಾಡಿ ಕಾರ್ಯಕರ್ತರ ಪಾತ್ರ ಬಹಳ ಮುಖ್ಯವಾದದ್ದು,ತಮ್ಮ ಪ್ರಾಣವನ್ನು ಲೆಕ್ಕಿಸದೆ ಸೇವೆ ಮಾಡಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಕಾನೂನನ್ನು ಕುರಿತು ಅರಿವು ಮೂಡಿಸಲು ಕೈಗೊಂಡಂತಹ ಜಾಥಾ ಯಶಸ್ವಿಯಾಗಲಿ ಎಂದರು

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಶಿಧರ್ ಶೆಟ್ಟಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿಜ್ಞೇಶ್, ಮಂಡ್ಯಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಿ.ರಮಾ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಎ.ಎಂ ನಳಿನಿಕುಮಾರಿ ಸೇರಿದಂತೆ ಇತರರ ಉಪಸ್ಥಿತರಿದ್ದರು.

Share This Article
Leave a comment