December 26, 2024

Newsnap Kannada

The World at your finger tips!

childMother

love of mother ಏನದು ಅಮ್ಮ !

ಏನದು ಅಮ್ಮ !

Spread the love

ನಾ ಈಜು ಕೊಳದಲ್ಲಿ
ತೇಲುತಿದ್ದೆ
ಏನದು ಅಮ್ಮ!

ಈಜು ಕೊಳವಲ್ಲ
ಅದು ನನ್ನ ಗರ್ಭದ
ಜೀವಕೊಳ ಕಂದ !

ಹೊಕ್ಕಳಿಂದ ಬಳ್ಳಿಯೊಂದು
ಹೊರ ಬಂದಂತಿತ್ತು
ಏನದು ಅಮ್ಮ !

ಅದು ಬಳ್ಳಿಯಲ್ಲ
ತುತ್ತಿಡುವ ನನ್ನ
ಇನ್ನೊಂದು ಕೈ ಕಂದ !

ಹೊರಜಗತ್ತಿಗೆ ಬರುವಾಗ
ಆಕ್ರಂದನವ ಆಲಿಸಿದೆ
ಏನದು ಅಮ್ಮ!

ಆಕ್ರಂದನವಲ್ಲ ಅದು
ಬಚ್ಚಿಡದ ನನ್ನ ಸಡಗರದ
ಸಂಕೇತ ಕಂದ !

ನಿನ್ನ ಹೊಟ್ಟೆಯ
ಮೇಲೆ ಗೆರೆಗಳ ಕಂಡೆ
ಏನದು ಅಮ್ಮ!

WhatsApp Image 2023 05 21 at 12.45.06 PM

ಗೆರೆಗಳಲ್ಲ ಅವು
ನೀ ಬರೆದ ಮೊದಲ
ಚಿತ್ತಾರ ಕಂದ !

ನಾ ಅತ್ತರೆ ಅಳುವೇ
ನಾ ನಕ್ಕರೆ ನಗುವೆ ಸೋಜಿಗ
ಏನದು ಅಮ್ಮ!

ಅಳಲು-ನಗಲು ನಿನ್ನ
ರೂಪದಾಕೃತಿಗೆ ನಾ ಉಸಿರಿನ
ಬಣ್ಣ ಬಳಿದವಳು ಕಂದ !

===============
ಡಾ. ರಾಜಶೇಖರ ನಾಗೂರ

Copyright © All rights reserved Newsnap | Newsever by AF themes.
error: Content is protected !!