ಮತದಾರರಿಗೆ ಹಣ ಹಂಚದಿದ್ರೆ ನನಗೆ ವಾಪಸ್ ಕೊಡಿ: ನಾರಾಯಣಗೌಡ

Team Newsnap
1 Min Read
If money is not distributed to voters, give it back to me: Narayana Gowda ಮತದಾರರಿಗೆ ಹಣ ಹಂಚದಿದ್ರೆ ನನಗೆ ವಾಪಸ್ ಕೊಡಿ: ನಾರಾಯಣಗೌಡ

ಮಂಡ್ಯ:ಚುನಾವಣೆ ವೇಳೆ ಜನರಿಗೆ ಹಂಚಲು ನೀಡಿದ್ದ ಹಣವನ್ನು ಮತದಾರರಿಗೆ ತಲುಪಿಸದೇ ಯಾರಾದರೂ ಇಟ್ಟುಕೊಂಡಿದ್ದರೆ ವಾಪಸ್ ಕೊಟ್ಟುಬಿಡಿ

  • ಹೀಗೆಂದು ಅಂಗಲಾಚಿ ಕೇಳಿದವರು ಕೆಆರ್ ಪೇಟೆ ಬಿಜೆಪಿ ಪರಾಜಿತ ಅಭ್ಯರ್ಥಿ ಕೆಸಿ ನಾರಾಯಣಗೌಡ ಮನವಿ ಮಾಡಿದ್ದಾರೆ.

ಮಂಡ್ಯದಲ್ಲಿ ಸೋಮವಾರ ಕೃತಜ್ಞತಾ ಸಭೆಯಲ್ಲಿ ಮಾತಾಡಿದ ನಾರಾಯಣೌಡರು, ಮತದಾರರಿಗೆ ಹಂಚಲು ಪಡೆದಿದ್ದ ಹಣ ಹಂಚದೇ ಆಪ್ತರಿಂದಲೇ ಮೋಸವಾಗಿದೆ ಎಂದು ಆರೋಪಿಸಿದ್ದಾರೆ.

ಯಾರಾದರೂ ಹಣ ಇಟ್ಟುಕೊಂಡಿದ್ದರೆ ವಾಪಸ್ ಕೊಟ್ಟುಬಿಡಿ ಎಂದು ಅಂಗಾಲಾಚಿದ್ದಾರೆ.

ಆ ಹಣದಿಂದ ಟ್ರಸ್ಟ್ ಸ್ಥಾಪಿಸಿ ಸಮಾಜ ಸೇವೆಗೆ ವಿನಿಯೋಗಿಸೋಣ ಎಂದು ಕರೆಕೊಟ್ಟಿದ್ದಾರೆ.

ನಾನು ಈ ವಿಚಾರವಾಗಿ ಮಾಹಿತಿ ಪಡೆದಿದ್ದೇನೆ. ಕ್ಷೇತ್ರದ ಹಲವು ಕಡೆಗಳಿಗೆ ನಮ್ಮ ಹಣ ತಲುಪಿಲ್ಲ. ಹಣ ಹಂಚಿಕೆ ಮಾಡದೇ ಇಟ್ಟುಕೊಂಡಿದ್ದರೆ ದಯವಿಟ್ಟು ವಾಪಸ್ ಕೊಡಿ. ಉತ್ತಮ ಕೆಲಸಗಳಿಗೆ
ಬಳಕೆ ಮಾಡುತ್ತೇನೆ ಎಂದು ಹಣ ಪಡೆದು ಹಂಚದ ಮುಖಂಡರಿಗೆ ಮನವಿಮಾಡಿದ್ದಾರೆ.ವೇದಿಕೆಯಲ್ಲೇ ಪಾಟೀಲ್‌ಗೆ ಗದರಿದ ಡಿಕೆಶಿ – ಮುಜುಗರಕ್ಕೆ ಒಳಗಾಗಿ ಸಚಿವ ಪಾಟೀಲ್

ಕ್ಷೇತ್ರದಲ್ಲಿ ಜೆಡಿಎಸ್ (JDS) ಅಭ್ಯರ್ಥಿ ಹೆಚ್.ಟಿ ಮಂಜು ಅವರು 79,844 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್ ದೇವರಾಜ್ ಅವರು 57,939 ಮತ ಪಡೆದಿದ್ದರೆ ಕೆಸಿ ನಾರಾಯಣಗೌಡ ಅವರು 37,793 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದ್ದರು.

Share This Article
Leave a comment