ವೇದಿಕೆಯಲ್ಲೇ ಪಾಟೀಲ್‌ಗೆ ಗದರಿದ ಡಿಕೆಶಿ – ಮುಜುಗರಕ್ಕೆ ಒಳಗಾಗಿ ಸಚಿವ ಪಾಟೀಲ್

Team Newsnap
1 Min Read
DKshi scolded Patil on the stage - Minister Patil was embarrassed ವೇದಿಕೆಯಲ್ಲೇ ಪಾಟೀಲ್‌ಗೆ ಗದರಿದ ಡಿಕೆಶಿ – ಮುಜುಗರಕ್ಕೆ ಒಳಗಾಗಿ ಸಚಿವ ಪಾಟೀಲ್

ಸಚಿವ ಎಂ.ಬಿ ಪಾಟೀಲ್‌ಗೆ ಡಿಸಿಎಂ ಡಿಕೆ ಶಿವಕುಮಾರ್ ವೇದಿಕೆಯಲ್ಲೇ ಗದರಿದ ಪ್ರಸಂಗ ಭಾನುವಾರ ಜರುಗಿದೆ .

ಇಂದಿರಾ ಭವನದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯುತ್ತಿತ್ತು.

ಈ ವೇಳೆ ಡಿಕೆಶಿ ಭಾಷಣ ಮಾಡುವಾಗ ವೇದಿಕೆ ಮೇಲೆ ಕುಳಿತಿದ್ದ ಎಂ.ಬಿ ಪಾಟೀಲ್ ಸಿಎಂ ಸಿದ್ದರಾಮಯ್ಯ ಜೊತೆ ಮಾತನಾಡುತ್ತಿದ್ದರು.

ಗಮನಿಸಿದ ಡಿಕೆಶಿ `ಡೋಂಟ್ ಡಿಸ್ಟರ್ಬ್, ಡೋಂಟ್ ಡಿಸ್ಟರ್ಬ್’ ಎಂದು ಎಂ.ಬಿ ಪಾಟೀಲ್‌ಗೆ ಗದರಿದ್ದಾರೆ.

ಅದಕ್ಕೆ ಎಂಬಿಪಿ ಸಮಜಾಯಿಷಿ ನೀಡಲು ಮುಂದಾದಾಗ ಇರಲಿ ಡೋಂಟ್ ಡಿಸ್ಟರ್ಬ್, ಇಲ್ಲಿ ಕೆಲವು ಹೊಸ ವಿಚಾರ ಹೇಳ್ತಿದ್ದೀನಿ ಎಂದು ಡಿಕೆಶಿ ಹೇಳಿದರು. ಇದರಿಂದ ಎಂಬಿಪಿ ಮುಜುಗರಕ್ಕೆ ಒಳಗಾಗಿ ಸುಮ್ಮನೆ ಕುಳಿತರು.

ಬಳಿಕ ಮಾತು ಮುಂದುವರಿಸಿದ ಡಿಕೆಶಿ, ನನ್ನ ಬಳಿ ಬಂದು ಸಿದ್ದರಾಮಯ್ಯ ಹಾಗಂದ್ರು, ಎಂಬಿಪಿ ಹೀಗಂದ್ರು ಅಂತಾ ಚಾಡಿ ಹೇಳಿ ತಂದು ಹಾಕಬೇಡಿ. ಮೊದಲು ಬೂತ್ ಮಟ್ಟದಲ್ಲಿ ಬಲಿಷ್ಠರಾಗಿ ಸಿದ್ದರಾಮಯ್ಯ ಮನೆ ನನ್ನ ಮನೆ ಸುತ್ತುತ್ತಾ ಇರಬೇಡಿ. ನಿಮ್ಮ ಗುರಿ ಮುಂದಿನ ಚುನಾವಣೆಗೆ ನಿಮ್ಮ ಬೂತ್ ಸಿದ್ದಪಡಿಸಿ. ಸಂಸತ್‌ಗೂ ವಿಧಾನಸಭೆಗೂ ವ್ಯತ್ಯಾಸ ಇರುತ್ತೆ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದ ಬಗ್ಗೆ ನಾವು ಮಾತನಾಡೋಕ್ಕಾಗಲ್ಲ. ನಮ್ಮ ಇಬ್ಬರಿಗೂ ಏನು ಹೇಳಬೇಕೋ ಅದನ್ನು ಹೈಕಮಾಂಡ್ ನಾಯಕರು ಹೇಳಿದ್ದಾರೆ ಅದಕ್ಕೆ ನಾವು ಬದ್ದರಾಗಿರುತ್ತೇವೆ ಎಂದು ತಿಳಿಸಿದರು.ಚಿತ್ರದುರ್ಗ – ಗ್ಯಾರೆಂಟಿ ಯೋಜನೆ ಕುರಿತು ಟೀಕೆ : ಸರ್ಕಾರಿ ಶಾಲಾ ಶಿಕ್ಷಕ ಅಮಾನತ್ತು

Share This Article
Leave a comment