UP ಯಲ್ಲಿ ಒಂದೇ ದಿನ 6 ಸಾವಿರಕ್ಕೂ ಅಧಿಕ ಧ್ವನಿವರ್ಧಕ ತೆರವು ಮಾಡಿಸಿದ ಅಧಿಕಾರಿಗಳು

Team Newsnap
1 Min Read
Arrival of UP CM Yogi Aditya in Mandya: Road show for BJP ನಾಡಿದ್ದು ಮಂಡ್ಯಕ್ಕೆ ಯುಪಿ ಸಿಎಂ ಯೋಗಿ ಆದಿತ್ಯ‌ ಆಗಮನ : ಬಿಜೆಪಿ ಪರ ರೋಡ್‌ ಶೋ

ಉತ್ತರ ಪ್ರದೇಶ್ ಸಿಎಂ ಯೋಗಿ ಆದೇಶದ ನಂತರ ಯುಪಿಯಲ್ಲಿ ಧಾರ್ಮಿಕ ಸ್ಥಳಗಳಲ್ಲಿ 6,000 ಕ್ಕೂ ಹೆಚ್ಚು ಧ್ವನಿವರ್ಧಕಗಳನ್ನು ತೆಗೆದುಹಾಕಲಾಗಿದೆ. ಇದುವರೆಗೂ 29,600 ಸ್ಥಳಗಳಲ್ಲಿ ಧ್ವನಿ ಕಡಿಮೆಯಾಗಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆದೇಶದ ನಂತರ, ಉತ್ತರ ಪ್ರದೇಶ ಪೊಲೀಸರು 6,031 ಧ್ವನಿವರ್ಧಕಗಳನ್ನು ತೆಗೆದುಹಾಕಿಸಿದ್ದಾರೆ ಮತ್ತು 29,674 ಧ್ವನಿವರ್ಧಕಗಳ ಧ್ವನಿಯನ್ನು ಮಿತಿಗೊಳಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ಹೇಳಿದ್ದಾರೆ.

ಜಿಲ್ಲಾಡಳಿತದಿಂದ ಸೂಕ್ತ ಅನುಮತಿ ಪಡೆಯದೆ ಹಾಕಲಾಗಿರುವ ಧ್ವನಿವರ್ಧಕಗಳು ಅಥವಾ ಅನುಮತಿಸಲಾದ ಸಂಖ್ಯೆಗಳಿಗಿಂತ ಹೆಚ್ಚು ಇರಿಸಲಾದ ಧ್ವನಿವರ್ಧಕಗಳನ್ನು ಅನಧಿಕೃತ ಎಂದು ವರ್ಗೀಕರಿಸಿ ಅಕ್ರಮವಾಗಿದ್ದ ಧ್ವನಿ ವರ್ಧಕಗಳನ್ನು ತೆಗೆದು ಹಾಕಲಾಯಿತು.

ಮೈಕ್ ಬಳಸಬಹುದಾದರೂ, ಯಾವುದೇ ಆವರಣದಿಂದ ಧ್ವನಿ ಬರದಂತೆ ನೋಡಿಕೊಳ್ಳಬೇಕು. ಜನರು ಯಾವುದೇ ಸಮಸ್ಯೆ ಎದುರಿಸಬಾರದು ಎಂದು ಆ ಅಧಿಕಾರಿ ಹೇಳಿದರು.

ಬುಧವಾರ ಪೊಲೀಸ್ ಇಲಾಖೆ ನೀಡಿದ ಮಾಹಿತಿಯ ಪ್ರಕಾರ ವಾರಣಾಸಿ ವಲಯದ ಜಿಲ್ಲೆಗಳಲ್ಲಿ ಗರಿಷ್ಠ 1,366 ಧ್ವನಿವರ್ಧಕಗಳನ್ನು ತೆಗೆದುಹಾಕಲಾಗಿದೆ, ಮೀರತ್ (1,215), ಬರೇಲಿ (1,070) ಮತ್ತು ಕಾನ್ಪುರ (1,056) ನಂತರದ ಜಿಲ್ಲೆಗಳಲ್ಲಿ ಧ್ವನಿವರ್ಧಕಗಳನ್ನು ತೆಗೆದುಹಾಕಲಾಗಿದೆ.

ಕಾರ್ಪೊರೇಷನ್ ಅಧಿಕಾರಿಗಳು ಮತ್ತು ಪೊಲೀಸರನ್ನು ಒಳಗೊಂಡ ಜಂಟಿ ತಂಡವು ನಗರಗಳಲ್ಲಿ ಈ ಕಸರತ್ತು ನಡೆಸಿ ಅಕ್ರಮ ಮೈಕ್ ಗಳನ್ನು ತೆರವುಗೊಳಸಿದೆ.

Share This Article
Leave a comment