May 22, 2022

Newsnap Kannada

The World at your finger tips!

ತಾರಾ ತಾಯಿ

ಹಿರಿಯ ನಟಿ ತಾರಾ ತಾಯಿ ಪುಷ್ಪಾ ಮೈಸೂರಿನಲ್ಲಿ ವಿಧಿವಶ – ಪಾರ್ಥಿವ ಶರೀರ ಬೆಂಗಳೂರಿಗೆ ರವಾನೆ

Spread the love

ಕನ್ನಡದ ಹಿರಿಯ ನಟಿ ತಾರಾ ತಾಯಿ ಪುಷ್ಪಾ( 76) ಬುಧವಾರ ಮೈಸೂರಿನಲ್ಲಿ ನಿಧನರಾದರು

ಪುಷ್ಪಾ , ತಾರಾ ಅವರ ಜೊತೆ ಮೈಸೂರಿನಲ್ಲಿ ನಡೆದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು.

ಚಿತ್ರೀಕರಣದ ವೇಳೆ ತೀವ್ರವಾಗಿ ವಾಂತಿಯಾದ ಹಿನ್ನೆಲೆಯಲ್ಲಿ ಅವರನ್ನು ತಕ್ಷಣವೇ ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

thara mother 1

ತಾರಾ ಜೊತೆಯಲ್ಲೇ ಯಾವಾಗಲೂ ಅವರ ತಾಯಿ ಇರುತ್ತಿದ್ದರು. ಶೂಟಿಂಗ್ ನಡೆಯುವ ಸ್ಥಳಕ್ಕೂ ಮಗಳೊಂದಿಗೆ ಪುಷ್ಪಾ ಅವರು ಹೋಗುತ್ತಿದ್ದರು. ಈ ಬಾರಿ ಹೋದಾಗ ಇಂಥದ್ದೊಂದು ದುರಂತ ಸಂಭವಿಸಿದೆ.

ಮೈಸೂರುನಿಂದ ಮೃತದೇಹವನ್ನು ಬೆಂಗಳೂರಿಗೆ ರವಾನಿಸಲಾಗುತ್ತಿದೆ.

error: Content is protected !!