March 29, 2023

Newsnap Kannada

The World at your finger tips!

bribe , trap , malavalli

Malavalli APMC secretary Lokayukta trap while taking bribe ಲಂಚ ಪಡೆಯುತ್ತಿದ್ದ ವೇಳೆ ಮಳವಳ್ಳಿ ಎಪಿಎಂಸಿ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ

ಮೈಸೂರಿನ 7 ಕಡೆ ಲೋಕಾಯುಕ್ತ ದಾಳಿ: JE‌, ಇನ್ಸ್​ಪೆಕ್ಟರ್​ ಸೇರಿ ಅಧಿಕಾರಿಗಳಿಗೆ ಶಾಕ್​

Spread the love

ಮೈಸೂರಿನಲ್ಲಿ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳು ನಗರದ 7 ಕಡೆ ದಾಳಿ ನಡೆಸಿದ್ದಾರೆ. ಸಣ್ಣ ನೀರಾವರಿ ಇಲಾಖೆ ಜೆಇ‌ ರಫೀಕ್ ಮನೆ ಹಾಗೂ ಸಂಬಂಧಿಕರ ಮನೆ ಸೇರಿದಂತೆ ಕೆಲವೆಡೆ ಕೂಡ ದಾಳಿ ನಡೆಸಿದ್ದಾರೆ.

ಮಡಿಕೇರಿಯ ಸಣ್ಣ ನೀರಾವರಿ ಇಲಾಖೆಯ ಜೆಇ‌ ರಫೀಕ್ ಮನೆ ಸೇರಿ ಮೂರು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಜೊತೆಗೆ ಮಡಿಕೇರಿ ‌ಪಿಡಬ್ಲ್ಯೂಡಿ ಇಇ ನಾಗರಾಜ್ ಮನೆ ಮೇಲೂ ದಾಳಿ ನಡೆಸಲಾಗಿದೆ.ಮೈಸೂರು ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳ‌ ಪಟ್ಟಿಯಲ್ಲಿ ಜಿಟಿಡಿ, ಪುತ್ರ ಹರೀಶ್ ಗೌಡನಿಗೂ ಟಿಕೆಟ್ ?

ಮೈಸೂರಿನಲ್ಲಿರುವ ನಾಗರಾಜು ನಿವಾಸದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಇನ್ನೊಂದೆಡೆ ಕುಶಾಲನಗರ ಪೊಲೀಸ್ ಇನ್ಸ್​ಪೆಕ್ಟರ್ ಮಹೇಶ್ ನಿವಾಸದ ಮೇಲೆ ಕೂಡ ಲೋಕಾಯುಕ್ತರ ದಾಳಿ ನಡೆದಿದೆ. ಇವರು ಇಂಟೆಲಿಜೆನ್ಸ್​ ವಿಭಾಗಕ್ಕೆ‌ ವರ್ಗಾವಾದರೂ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ ಮೈಸೂರು ಲೋಕಾಯುಕ್ತ ಎಸ್​​ಪಿ ಸುರೇಶ್ ಬಾಬು ನೇತೃತ್ವದ ತಂಡದಿಂದ ಏಳು ಕಡೆಗಳಲ್ಲಿ ದಾಳಿ ನಡೆದಿದೆ.

error: Content is protected !!