June 9, 2023

Newsnap Kannada

The World at your finger tips!

Rain , storm , yellow alert

Yellow alert in Bengaluru and some part of state ಇಂದು ರಾಜಧಾನಿ ಸೇರಿದಂತೆ ಕೆಲ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

ರಾಜ್ಯಕ್ಕೆ ಅ. 24 ರಂದು ‘ಚಂಡಮಾರುತ’ ಪ್ರವೇಶ

Spread the love

ಭಾರೀ ಮಳೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಆತಂಕ ಎದುರಾಗಿದ್ದು, ಅ 24 ರಂದು ರಾಜ್ಯಕ್ಕೆ ಚಂಡಮಾರುತ ಪ್ರವೇಶವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಅರಬ್ಬಿ ಸಮುದ್ರದಲ್ಲಿ ( Arabian Sea ) ಉಂಟಾಗಿರುವ ವಾಯುಭಾರ ಕುಸಿತದಿಂದ ಅ 24 ರಂದು ಚಂಡಮಾರುತವಾಗಿ ಪರಿವರ್ತನೆಯಾಗಲಿದೆ, ರಾಜ್ಯದಲ್ಲಿ ಮಳೆ ( Rain ) ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.ಮೈಸೂರು ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳ‌ ಪಟ್ಟಿಯಲ್ಲಿ ಜಿಟಿಡಿ, ಪುತ್ರ ಹರೀಶ್ ಗೌಡನಿಗೂ ಟಿಕೆಟ್ ?

ಕರ್ನಾಟಕ ( Karnataka ) ಸೇರಿದಂತೆ ತಮಿಳುನಾಡು ( Tamil Nadu ), ತೆಲಂಗಾಣ ( Telangana ), ಪಶ್ಚಿಮಬಂಗಾಳ ( West Bengal ), ಒಡಿಶಾ ( Odisha ) , ಆಂಧ್ರಪ್ರದೇಶ ( Andra Pradesh ) ಮತ್ತು ಕೇರಳದಲ್ಲಿ ( Kerala )ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ರಾಜ್ಯದ ಹಲವಡೆ ಮುಂದಿನ 4 ದಿನ ಭಾರೀ ಮಳೆಯಾಗುವ ( Heavy Rainfall ) ಸಾಧ್ಯತೆ ಇದೆ. ಉತ್ತರ ಒಳನಾಡು, ಕರಾವಳಿ ಮತ್ತು ಮಲೆನಾಡು ಭಾಗಗಳ ಕೆಲವಡೆ ಭಾರೀ ಮಳೆಯಾಗಲಿದ್ದು, ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

error: Content is protected !!