ನಾನು ಬದುಕಲು ಅರ್ಹನಲ್ಲ- ಪೋಲಿಸರ ಮುಂದೆ ಮಳವಳ್ಳಿ ರೇಪ್ ಆರೋಪಿಗೆ ಈಗ ಪಶ್ಚಾತ್ತಾಪ

Team Newsnap
1 Min Read
Rape & murder of Malavalli girl - Charge sheet submitted against accused ಮಳವಳ್ಳಿ ಬಾಲಕಿಯ ಮೇಲೆ ಅತ್ಯಾಚಾರ , ಹತ್ಯೆ -ಆರೋಪಿ ವಿರುದ್ದ ಕೇವಲ 14 ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಕೆ

ಮಳವಳ್ಳಿಯಲ್ಲಿ ಟ್ಯೂಷನ್‍ ಗೆ ಹೋಗಿದ್ದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಕೀಚಕನಿಗೆ ಈಗ ತಾನು ಮಾಡಿರುವ ತಪ್ಪಿನ ಅರಿವಾಗಿ ಪೊಲೀಸರ ಮುಂದೆ ನಾನು ಬದುಕಲ್ಲ, ಸತ್ತು ಹೋಗುತ್ತೇನೆ ಎಂದು ಆ ಪಾಪಿ ಹೇಳಿ ಪಶ್ಚಾತಾಪ ಪಡುತ್ತಿದ್ದಾನೆ.

ಜೈಲಿನಲ್ಲಿರುವ ಕೀಚಕ ಕಾಂತರಾಜುವಿಗೆ ತಾನು ಮಾಡಿರುವ ಪಾಪ ಕೃತ್ಯದ ಪಶ್ಚಾತ್ತಾಪ ಕಾಡುತ್ತಿದೆ. ಪೊಲೀಸರ ಮುಂದೆ ಕಾಂತರಾಜು ಪಶ್ಚಾತ್ತಾಪ ಪಟ್ಟು ನನ್ನಿಂದ ತಪ್ಪಾಗಿದೆ ಸಮಾಜದಲ್ಲಿ ನಾನೆಂದಿಗೂ ತಲೆ ಎತ್ತಲು ಸಾಧ್ಯವಿಲ್ಲ. ನನ್ನ ಕುಟುಂಬದ ಸ್ಥಿತಿ ಏನಾಗಿದೆಯೋ ಗೊತ್ತಿಲ್ಲ, ನಾನು ಬದುಕಲು ಅರ್ಹನಲ್ಲ ಎಂದು ಕಟುಕ ಕಾಂತರಾಜು ಪೊಲೀಸರ ಮುಂದೆ ಪಶ್ಚಾತ್ತಾಪ ಪಟ್ಟಿದ್ದಾನೆ.ಮೈಸೂರಿನ 7 ಕಡೆ ಲೋಕಾಯುಕ್ತ ದಾಳಿ: JE‌, ಇನ್ಸ್​ಪೆಕ್ಟರ್​ ಸೇರಿ ಅಧಿಕಾರಿಗಳಿಗೆ ಶಾಕ್​

ಕಾಂತರಾಜು ಎಸಗಿರುವ ಅಮಾನುಷ ಕೃತ್ಯವನ್ನು ಇಡೀ ಮಾನವ ಸಂಕುಲವೇ ಖಂಡಿಸಿತು. ಆತ ಎಸಗಿರುವ ಕೃತ್ಯ ಕ್ಷಮಿಸಲು ಆಗದಂತಹದ್ದು, ಆತನನ್ನು ಗಲ್ಲಿಗೆ ಏರಿಸಬೇಕು. ಪುಟ್ಟಕಂದಮ್ಮನ ಆತ್ಮಕ್ಕೆ ಶಾಂತಿ ದೊರಕಬೇಕೆಂದ್ರೆ ಇವನ್ನು ಜೀವಂತ ಬಿಡಬಾರದೆಂದು ಆಕ್ರೋಶ
ವ್ಯಕ್ತವಾಗಿದ್ದವು. ಅಲ್ಲದೇ ಬಾಲಕಿಯ ತಂದೆ-ತಾಯಿ ಕೂಡ ಸರ್ಕಾರ ಕಠಿಣ ಶಿಕ್ಷೆ ನೀಡಬೇಕಂದು ಒತ್ತಾಯಿಸಿದ್ದರು.

Share This Article
Leave a comment