ಜಿಟಿ ಜಿಟಿ ಮಳೆಗೆ ಮನೆಯೊಳಗೆ ಬೆಚ್ಚಗೆ ಕುಳಿತು ವಿಧ ವಿಧವಾದ ಬೋಂಡಾ, ಸೂಪ್, ಹಪ್ಪಳ ಚುರುಮುರಿ, ಪಾನಿಪುರಿ, ಸಮೋಸ, ಇನ್ನೂ ಅನೇಕ ರೀತಿಯ ಆಹಾರಗಳ ಜೊತೆ ಕಾಫಿ ಟೀ ಹೀರುವ ಸುಖವೇ ಬೇರೆ.
ಮಳೆಗಾಲ ಅಂದ್ರೆ ರೋಗ-ರುಜಿನಗಳ ಸೀಸನ್ , ಹೀಗಾಗಿ ಈ ಸಮಯದಲ್ಲಿ ಮಕ್ಕಳಿಂದ ಹಿಡಿದು ವೃದ್ಧರ ತನಕ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಒಂದಿಷ್ಟು ಮುಂಜಾಗ್ರತೆ ವಹಿಸೋದು ಅಗತ್ಯ.
ಮಳೆಗಾಲ ಬಂತೆಂದರೆ ಸಾಕು ಹಲವಾರು ರೀತಿಯ ಕ್ರಿಮಿಕೀಟಗಳು, ಬ್ಯಾಕ್ಟೀರಿಯಾಗಳು, ಸೂಕ್ಷ್ಮಾಣು ಜೀವಿಗಳು ಜೀವ ಪಡೆದುಕೊಳ್ಳುವುದು.ಇವುಗಳಿಂದಾಗಿ ಹಲವಾರು ರೀತಿಯ ಕಾಯಿಲೆಗಳು ದೇಹವನ್ನು ಭಾದಿಸುವುದು.
ನಮ್ಮ ಹಿರಿಯರು ಪ್ರಕೃತಿಯಲ್ಲಿ ಸಿಗುವಂತಹ ಹಲವಾರು ರೀತಿಯ ಆಹಾರಗಳನ್ನು ಬಳಸಿಕೊಂಡು ಮಳೆಗಾಲದಲ್ಲಿ ದೇಹದ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದರು.
- ವ್ಯಾಯಾಮಕ್ಕೆ ಉದಾಸೀನ ಬೇಡ
- ಮಳೆಗಾಲದಲ್ಲಿ ಉದಾಸೀನ ಸಹಜ.ಆದ್ರೆ ಇದೇ ಕಾರಣಕ್ಕೆ ವ್ಯಾಯಾಮಕ್ಕೆ ರೆಸ್ಟ್ ನೀಡೋದು ಸರಿಯಲ್ಲ. ಮನೆಯಲ್ಲೇ ಒಂದಿಷ್ಟು ವ್ಯಾಯಾಮ ಮಾಡಿ. ಯೋಗ ಹಾಗೂ ಧ್ಯಾನ ಕೂಡ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಲು ನೆರವು ನೀಡುತ್ತದೆ.
- ಸಾಂಬಾರು ಪದಾರ್ಥಗಳಿಗೆ ಆದ್ಯತೆ
- ಮಳೆಗಾಲದಲ್ಲಿ ದೇಹವನ್ನು ಬೆಚ್ಚಗಿರಿಸುವ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಕಾಳುಮೆಣಸು, ಅರಿಶಿಣ, ಶುಂಠಿ, ಬೆಳ್ಳುಳ್ಳಿ, ಚಕ್ಕೆ, ಲವಂಗ ಸೇರಿದಂತೆ ಸಾಂಬಾರು ಪದಾರ್ಥಗಳನ್ನು ನಿತ್ಯದ ಆಹಾರದಲ್ಲಿ ಸೇರಿಸಬೇಕು. ಇವು ದೇಹವನ್ನು ಬೆಚ್ಚಗಿರಿಸುವ ಜೊತೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಅರಿಶಿಣ ಸೋಂಕು ನಿವಾರಕ ಕೂಡ ಹೌದು.
- ಯಥೇಚ್ಛವಾಗಿ ನೀರು ಕುಡಿಯಿರಿ
- ಮಳೆಗಾಲದಲ್ಲಿ ಯಥೇಚ್ಛವಾಗಿ ನೀರು ಕುಡಿಯಬೇಕು. ಬೇಸಿಗೆಗಾಲಕ್ಕೆ ಹೋಲಿಸಿದ್ರೆ ಮಳೆಗಾಲದಲ್ಲಿ ಬಾಯಾರಿಕೆ ಕಡಿಮೆ. ಹಾಗಂತ ದೇಹಕ್ಕೆ ನೀರಿನ ಅವಶ್ಯಕತೆ ಹೆಚ್ಚಿಲ್ಲ ಎಂದರ್ಥವಲ್ಲ. ದಿನಕ್ಕೆ ಕನಿಷ್ಠ 3-4 ಲೀಟರ್ ನೀರು ಕುಡಿಯಿರಿ. ಮಳೆಗಾಲದಲ್ಲಿ ಕುದಿಸಿ ಆರಿಸಿದ ನೀರನ್ನೇ ಕುಡಿಯಿರಿ. ಬೆಚ್ಚಗಿರುವ ನೀರು ದೇಹ ಹಾಗೂ ಮನಸ್ಸಿಗೆ ಹಿತ ನೀಡುತ್ತದೆ. ಮಳೆಗಾಲದಲ್ಲಿ ಬಿಸಿ ಬಿಸಿ ಕಾಫಿ ಟೀ ಮನಸ್ಸಿಗೆ ಉಲ್ಲಾಸ ನೀಡುತ್ತೆ ನಿಜ. ಆದ್ರೆ ಅತಿಯಾದ ಕಾಫಿ ಟೀ ಸೇವನೆ ಆರೋಗ್ಯಕ್ಕೆ ಹಾನಿಕಾರಕ.
- ಮಸಾಲೆಯುಕ್ತ ಮತ್ತು ಎಣ್ಣೆಯುಕ್ತ ಆಹಾರವನ್ನು ಸೇವಿಸಬೇಡಿ
- ಮಳೆಯಲ್ಲಿ ಬಿಸಿಬಿಸಿ ಪಕೋಡ ಮತ್ತು ಸಮೋಸಾಗಳನ್ನು ಆನಂದಿಸುತ್ತೇವೆ. ಆದರೆ ಈ ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ತಿಂಡಿಗಳು ನಿಮ್ಮನ್ನು ಉಬ್ಬಿಸಲು ಕಾರಣವಾಗುವುದು. ಮಳೆಗಾಲದಲ್ಲಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಸಾಮಾನ್ಯವಾಗಿದೆ ಏಕೆಂದರೆ ಅತಿಯಾದ ತೇವಾಂಶವು ನಮ್ಮ ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದು ನಮ್ಮ ಹೊಟ್ಟೆಗೆ ಆಹಾರದಿಂದ ಪೋಷಕಾಂಶಗಳನ್ನು ಹೀರಿಕೊಳ್ಳಲು ಕಷ್ಟವಾಗುತ್ತದೆ.
- ನಿಷಿದ್ಧ ತರಕಾರಿಗಳು
- ಆಲೂಗಡ್ಡೆ ,ಹೂ ಕೋಸು, ಅವರೆಕಾಳು,ಇವುಗಳನ್ನು ಸೇವಿಸುವ ಪ್ರಮಾಣ ಕಡಿಮೆಯಿರಲಿ,ಅಜೀರ್ಣ ಜೊತೆಗೆ ವಾಯು ಕೂಡ ಹೌದು,ವರ್ಷಪೂರ್ತಿ ಹಸಿರುಸೊಪ್ಪನ್ನು ತಿನ್ನವುದು ಒಳಿತು, ಆದರೆ ಮಳೆಗಾಲದಲ್ಲಿ ಅವುಗಳ ಬಳಕೆ ಕಡಿಮೆಯಿರಲಿ. ತೇವಾಂಶದಿಂದಾಗಿ ಈ ಋತುವಿನಲ್ಲಿ ಎಲೆಗಳು ಹಾಳಾಗುತ್ತವೆ, ಹವಾಮಾನದ ತಾಪಮಾನದಿಂದ ಕೆಲವೊಂದು ಸಸ್ಯಗಳ ಮೇಲೆ ಸೂಕ್ಷ್ಮಾಣು ಜೀವಿಗಳು ಸಂತಾನೋತ್ಪತ್ತಿ ಮಾಡುತ್ತವೆ. ಆದ್ದರಿಂದ ಈ ಸಮಯದಲ್ಲಿ ಪಾಲಕ್, ಎಲೆಕೋಸು, ಹೂಕೋಸು ಮುಂತಾದವುಗಳನ್ನು ತಪ್ಪಿಸುವುದು ಉತ್ತಮ.
- ಬೇಯಿಸಿದ ಆಹಾರವನ್ನು ಮಾತ್ರ ಸೇವಿಸಿ
- ಸಲಾಡ್ ಗಳು ಆರೋಗ್ಯಕರ ಮತ್ತು ಪೌಷ್ಠಿಕಾಂಶವನ್ನು ಹೊಂದಿದ್ದರೂ, ಮಳೆಗಾಲದಲ್ಲಿ ಹಸಿ ತರಕಾರಿಗಳನ್ನು ಸೇವಿಸುವುದು ಆರೋಗ್ಯ ಸಮಸ್ಯೆಗಳಿಗೆ ಆಹ್ವಾನವಾಗಬಹುದು. ಕೆಲವು ತರಕಾರಿಗಳು ಧೂಳಿನಿಂದಾಗಿ ಹೆಚ್ಚಿನ ಪ್ರಮಾಣದ ಸೂಕ್ಷ್ಮಜೀವಿಗಳನ್ನು ಹೊಂದಿರುತ್ತವೆ, ಇದು ಜೀರ್ಣಕ್ರಿಯೆಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಹಸಿ ಸಲಾಡ್ ಗಳಿಗೆ ಬದಲಾಗಿ, ಬೇಯಿಸಿದ ಆಹಾರ ಅಥವಾ ತರಕಾರಿಗಳನ್ನು ಸೇವಿಸಿ.
- ಕ್ಯಾರೆಟ್ ನ 5 ಉಪಯೋಗಗಳು : Top 5 Uses of Carrot
- ಮನೆಯನ್ನು ಸ್ವಚ್ಛವಾಗಿಡುವುದು
- ಮಳೆಗಾಲದಲ್ಲಿ ಕೀಟಾಣುಗಳು ಬೇಗ ವೃದ್ಧಿಯಾಗುತ್ತವೆ. ಹೀಗಾಗಿ ಮನೆಯನ್ನು ಕೀಟಾಣುಗಳಿಂದ ಮುಕ್ತವಾಗಿರಿಸಿಕೊಳ್ಳೋದು ಅಗತ್ಯ. ಮನೆಯ ಸುತ್ತಮುತ್ತ ಎಲ್ಲೂ ನೀರು ನಿಲ್ಲದಂತೆ ಜಾಗ್ರತೆ ವಹಿಸಬೇಕು. ಡೆಂಗ್ಯೂ, ಮಲೇರಿಯಾದಂತಹ ಮಾರಕ ಕಾಯಿಲೆಗಳನ್ನು ಸೊಳ್ಳೆಗಳ ಸಂತಾನೋತ್ಪತಿಯನ್ನು ತಡೆಯಬಹುದು.
- ಬೆಳ್ಳುಳ್ಳಿಯ ಬಳಕೆ ಒಳ್ಳೆಯದು
- ಮಳೆಗಾಲದಲ್ಲಿ ಬೆಳ್ಳುಳ್ಳಿಯ ಬಳಕೆ ಒಳ್ಳೆಯದು, ಇದರಲ್ಲಿ ರೋಗ ನಿರೋಧಕ ಶಕ್ತಿ ಇದೆ, ಮಳೆಗಾಲದಲ್ಲಿ ಬಿಸಿ ಬಿಸಿ ಸೂಪ್ ಜೊತೆ ಬೆಳ್ಳುಳ್ಳಿ ಸೇವನೆ ಆರೋಗ್ಯಕ್ಕೆ ಉತ್ತಮ.ಮಳೆಗಾಲದಲ್ಲಿ ನೀವು ಸೇವಿಸಬಹುದಾದ ಆಹಾರಗಳಲ್ಲಿ ಬಿಸಿ ಬಿಸಿ ಸೂಪ್ ಮೊದಲ ಸ್ಥಾನದಲ್ಲಿದೆ. ಯಾಕೆಂದರೆ ಇದು ಅಜೀರ್ಣ ಮತ್ತು ಹೊಟ್ಟೆಯ ಸೋಂಕು ತಡೆಯುವುದು. ಮಾತ್ರವಲ್ಲದೆ ಶೀತ, ಕೆಮ್ಮು ಮತ್ತು ಕಫ ದಿಂದ ಮುಕ್ತಿ ನೀಡುವುದು. ಗಂಟಲಿನ ಅಲರ್ಜಿಗೂ ಈ ಸೂಪ್ ರಾಮಬಾಣ.
- ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ
- ಅಹಂಕಾರ , ಒಣಜಂಭ ಬೇಡ
- ಸಮೃದ್ಧ ಪೋಷಕಾಂಶಗಳ ಆಗರ- ಕ್ಯಾರೆಟ್
- ” ಆನ್ ಲೈನ್ ವಂಚನೆ: ಡಿಜಿಟಲ್ ಯುಗದ ಕರಾಳ ರೂಪ “
- ಬರತಾನ ರಾಜಕುಮಾರ
- ಬದುಕಿದ್ದಾಗಲೇ ಗುಲಾಬಿ ಹೂ ಕೊಡಿ…….
More Stories
ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ
ಅಹಂಕಾರ , ಒಣಜಂಭ ಬೇಡ
ಸಮೃದ್ಧ ಪೋಷಕಾಂಶಗಳ ಆಗರ- ಕ್ಯಾರೆಟ್