ಹಾರ್ದಿಕ್‌ ಪಾಂಡ್ಯ ಅಮೋಘ ಆಟ: ಇಂಗ್ಲೆಂಡ್‌ ವಿರುದ್ಧ ಭಾರತಕ್ಕೆ ಭರ್ಜರಿ ಜಯ

Team Newsnap
1 Min Read

ಕಳೆದ ರಾತ್ರಿ ನಡೆದ ಇಂಗ್ಲೆಂಡ್‌ ವಿರುದ್ಧದ ಮೊದಲ ಟಿ- ಟ್ವಿಂಟಿ ಪಂದ್ಯದಲ್ಲಿ ಭಾರತ 50 ರನ್‌ ಗಳಿಂದ ಭರ್ಜರಿ ಜಯ ಗಳಿಸಿತು.

ಟಾಸ್‌ ಗೆದ್ದು ಬ್ಯಾಟ್‌ ಮಾಡಿದ ರೋಹಿತ್‌ ಪಡೆ ಆರಂಭದಲ್ಲೇ ಇಶಾನ್‌ ಕಿಶನ್‌ ವಿಕೆಟ್‌ ಕಳೆದುಕೊಂಡು ಮುಗ್ಗರಿಸಿತು.

ಕ್ಯಾಪ್ಟನ್‌ ರೋಹಿತ್‌ ಶರ್ಮಾ 24 ರನ್‌ ಗಳಿಸಿ ಮೊಯಿನ್‌ ಆಲಿ ಎಸೆತಕ್ಕೆ ಬಟ್ಲರ್‌ ಕೈಗೆ ಕ್ಯಾಚ್‌ ಕೊಟ್ಟು ಔಟ್ ಆದರು ಸ್ಫೋಟಕ ಆಟಗಾರ ದೀಪಕ್‌ ಹೂಡಾ ಬಿರುಸಿನ 33 ರನ್‌ ಹಾಗೂ ಸೂರ್ಯಕುಮಾರ್‌ ಯಾದವ್‌ 39 ರನ್‌ ಗಳಿಸಿ ಆಂಗ್ಲ ಬೌಲರ್‌ ಗಳನ್ನು ಕಾಡಿದರು. ಬಳಿಕ ಬಂದ ಹಾರ್ದಿಕ್‌ ಪಾಂಡ್ಯ 6 ಬೌಂಡರಿ, 1 ಸಿಕ್ಸರ್‌ ಸಿಡಿಸಿ ಆಕರ್ಷಕ (51 ರನ್ )ಅರ್ಧಶತಕಗಳಿಸಿದರು.

ಕಡೆಯ ಓವರ್‌ ಗಳಲ್ಲಿ ಭಾರತದ ವಿಕೆಟ್‌ ಗಳು ಒಂದರ ಮೇಲೆ ಒಂದಾರಂತೆ ಹೋಗಿ, ಅಂತಿಮವಾಗಿ 20 ಓವರ್‌ ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 198 ರನ್‌ ಗಳಿಸಿ 199 ರ ಬೃಹತ್‌ ಗುರಿಯನ್ನು ಬಿಟ್ಟು ಕೊಟ್ಟಿತು.

ದೊಡ್ಡ ಟಾರ್ಗೆಟ್‌ ಬೆನ್ನಟ್ಟಿದ್ದ ಇಂಗ್ಲೆಂಡ್‌ ಆರಂಭಿಕ ಓವರ್‌ ನಲ್ಲೇ ನಾಯಕ ಬಟ್ಲರ್‌ ಶೂನ್ಯ ಸುತ್ತಿ ಭುವನೇಶ್ವರ್‌ ಕುಮಾರ್‌ ಎಸತೆಕ್ಕೆ ಔಟ್‌ ಆದರು.

ಜೇಸನ್‌ ರಾಯ್ ಡೇವಿಡ್‌ ಮಾಲನ್‌, ಲಿವಿಂಗ್‌ ಸ್ಟೂನ್‌, ಸ್ಯಾಮ್‌ ಕರನ್ ನಿರೀಕ್ಷೆಯಷ್ಟು ಸಿಡಿಯಲಿಲ್ಲ. ಮೊಯಿನ್‌ ಆಲಿ, ಹ್ಯಾರಿ ಬ್ರೂಕ್‌ ಮೂವತ್ತರ ಮೇಲೆ ರನ್‌ ಗಳಿಸಿದರೂ ಕಡೆಯವರೆಗೆ ಸಾಗಲಿಲ್ಲ.

ಭಾರತದ ಪರವಾಗಿ ಹಾರ್ದಿಕ್‌ ಪಾಂಡ್ಯ 4 ಓವರ್‌ ನಲ್ಲಿ 4 ಮಹತ್ವದ ವಿಕೆಟ್‌ ಗಳನ್ನು ಪಡೆದು ಮಿಂಚಿದರು. ಯಜುವೇಂದ್ರ ಚಹಲ್‌ 2 ವಿಕೆಟ್‌ ಗಳನ್ನು ಪಡೆದರು.

ಕೆ ಆರ್ ಎಸ್ ಭರ್ತಿಗೆ 6 ಅಡಿ ಬಾಕಿ : ಜಲಾಶಯಕ್ಕೆ 36 ಸಾವಿರ ಕ್ಯೂಸೆಕ್ ಒಳಹರಿವು

ಇಂಗ್ಲೆಂಡ್‌ ಸರ್ವಪತನವಾಗಿ 148 ರನ್‌ ಗಳಿಸಿ ಸೋಲಿಗೆ ಶರಣಾಯಿತು.

Share This Article
Leave a comment