ಕೋರ್ಟ್ ಅಂತಿಮ ತೀರ್ಪಿನ ತನಕ ಮಗಳು ಮನೆಯಲ್ಲೇ ಇರಲಿ: ಮಂಡ್ಯ ಪೋಷಕರು

Team Newsnap
1 Min Read

ಮಂಡ್ಯ ಜಿಲ್ಲೆಯಲ್ಲೂ ಹಿಜಬ್ ವಿವಾದ ಮುಂದುವರಿದಿದೆ.

ಹಿಜಬ್ ತೆಗೆಸಲು ಶಿಕ್ಷಕರು ಮುಂದಾದಾಗ ಪೋಷಕರು ನಿರಾಕರಿಸಿ ವಿದ್ಯಾರ್ಥಿನಿಯರನ್ನು ಮನೆಗೆ ವಾಪಸ್ ಕಡೆದುಕೊಂಡು ಹೋದ ಘಟನೆ ನಡೆದಿದೆ.

ಮಂಡ್ಯದ ನೂರಡಿ ರಸ್ತೆಯಲ್ಲಿರುವ ಗೌಸಿಯಾ ಶಾಲೆಯಲ್ಲಿ ಈ ಘಟನೆ ನಡೆದಿದೆ.

ಶಾಲೆಯ ಆಡಳಿತ ಮಂಡಳಿ ಹಿಜಬ್ ತೆಗೆದು ತರಗತಿ ಪ್ರವೇಶಿಸಬೇಕು ಎಂದು ಸೂಚಿಸಿದ್ದಕ್ಕೆ ವಿದ್ಯಾರ್ಥಿನಿ ಅರ್ಫಿಯಾ ವಾಪಸ್ ಮನೆಗೆ ಹೋಗಿದ್ದಾಳೆ.

ಶಾಲೆಗಿಂತ ನಮಗೆ ಧರ್ಮವೇ ಮುಖ್ಯವಾಗಿದೆ. ಕೋರ್ಟ್ ತೀರ್ಪು ಬರುವವರೆಗೂ ಮನೆಯಲ್ಲೇ ಇರಲಿ ಎಂದು ವಿದ್ಯಾರ್ಥಿನಿಯ ಪೋಷಕರು ತಿಳಿಸಿದ್ದಾರೆ.

ನಮಗೆ ಮೊದಲು ನಮ್ಮ ಧರ್ಮ ಮುಖ್ಯ ಆ ನಂತರ ಶಾಲೆ, ಈ ಹಿಂದೆ ಕೊರೋನಾದಿಂದ ಶಾಲೆಗಳು ಬಂದ್ ಆಗಿದ್ದಾಗ ಶಿಕ್ಷಣ ಹಾಳಾಗಿಲ್ಲ, ಈಗ ಹಿಜಬ್‍ನಿಂದ ಶಿಕ್ಷಣ ಹಾಳಾಗುತ್ತಾ ಎಂದು ಪೋಷಕರು ಪ್ರಶ್ನೆ ಮಾಡಿದ್ದಾರೆ.

ಹಿಜಬ್ ಹಾಕದಿದ್ದರೆ ಶಿಕ್ಷಣ ಕಲಿಸಲು ಸಾಧ್ಯವಿಲ್ಲವಾ? ಇಷ್ಟು ದಿನದಿಂದ ಇಲ್ಲವಾದ ಸಮಸ್ಯೆ ಈಗ ಎಲ್ಲಿಂದ ಬಂತು. ಶಾಲಾ ಶಿಕ್ಷಕರು ವಿದ್ಯಾರ್ಥಿನಿಯ ಹಿಜಬ್‍ನ್ನು ತೆಗೆಯಲು ಹೇಳಿದರು.

ಆಗ ವಿದ್ಯಾರ್ಥಿನಿಯ ನಾವು ಹೈಕೋರ್ಟ್ ತೀರ್ಪು ಬಂದ ನಂತರದಲ್ಲೇ ತಮ್ಮ ಮಗಳನ್ನು ಕರೆದುಕೊಂಡು ಬರುತ್ತೇವೆ. ಶಿಕ್ಷಣವು ಮುಖ್ಯವಾಗಿದೆ. ಆದರೆ ಹಿಜಬ್ ಧರಿಸಿಲ್ಲ ಎಂದರೆ ನಮಗೆ ತೊಂದರೆ ಆಗುತ್ತದೆ ಎಂದು ಹೇಳಿ ವಾಪಸ್ ಕರೆದುಕೊಂಡು ಹೋಗಿದ್ದಾರೆ.

Share This Article
Leave a comment