ಏಳು ರಾಜ್ಯಗಳಲ್ಲಿ 14 ಮದುವೆಯಾದ ಭೂಪನಿಗೆ ಈಗ ಪೋಲಿಸ್ ಆತಿಥ್ಯ

Team Newsnap
1 Min Read

ಅನೇಕ ಯುವಕರು ತಮಗೆ ಇನ್ನು ಮದುವೆಯಾಗಿಲ್ಲ. ಜೋಡಿ ಸಿಕ್ಕಿಲ್ಲ ಮದುವೆಗೆ ವಯಸ್ಸು ಮೀರಿ ಹೋಗುತ್ತಿದೆ ಎಂಬ ಚಿಂತೆಯಲ್ಲಿ ಇರುವವರ ಮಧ್ಯೆಯೂ ಇಲ್ಲೊಬ್ಬ ಭೂಪ ಬರೊಬ್ಬರಿ 14 ಮದುವೆಗಳನ್ನು ಆಗಿದ್ದಾನೆ.

ಒಡಿಶಾದ ಕೇಂದ್ರಪಾರ ಜಿಲ್ಲೆಯ ಪಟ್ಕುರಾ ಗ್ರಾಮದ ನಿವಾಸಿ ಬಿಂದು ಪ್ರಕಾಶ್ ಅಲಿಯಾಸ್ ರಮೇಶ್ (54) ಸರಿ ಸುಮಾರು ಏಳು ರಾಜ್ಯಗಳಲ್ಲಿ ಒಟ್ಟು ಹದಿನಾಲ್ಕು ಮದುವೆಯಾಗಿದ್ದಾನೆ. 

ತಾನೊಬ್ಬ ಹೆಲ್ತ್​ ಕೇರ್​ ಅಧಿಕಾರಿ ಎಂದು ಹೇಳಿಕೊಂಡು ಮೋಸ ಮಾಡುತ್ತಿದ್ದ ಎನ್ನಲಾಗಿದೆ. 1982ರಲ್ಲಿ ಮೊದಲ ಬಾರಿಗೆ ಮದುವೆಯಾಗಿದ್ದ ರಮೇಶ್​, ಬಳಿಕ ಮ್ಯಾಟ್ರಿಮೋನಿ​ ಮೂಲಕ ಹಲವರಿಗೆ ವಂಚಿಸಿದ್ದಾನೆ.

ಒಡಿಶಾ ಮೂಲದ ಮೂವರು, ದೆಹಲಿ ಮತ್ತು ಮಧ್ಯಪ್ರದೇಶದ ಇಬ್ಬರು ಮಹಿಳೆಯರು ಹಾಗೂ ಪಂಜಾಬ್​, ಜಾರ್ಖಂಡ್​, ಆಂಧ್ರಪ್ರದೇಶ, ಛತ್ತೀಸ್​ಗಡ​ ಮೂಲದ ಯುವತಿಯರಿಗೆ ಮೋಸ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ಭುವನೇಶ್ವರ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

Share This Article
Leave a comment