9 ಪತ್ರಿಕೆಗೆ ಸಂಪಾದಕ ವೆಂಕಟನಾರಾಯಣ್ ಗೆ ಕೆಯುಡಬ್ಲ್ಯೂಜೆ ಗೌರವ

Team Newsnap
2 Min Read
KUWJ tribute to 9 paper editor Venkatanarayan ಪತ್ರಿಕೆಗೆ ಸಂಪಾದಕ ವೆಂಕಟನಾರಾಯಣ್ ಗೆ ಕೆಯುಡಬ್ಲ್ಯೂಜೆ ಗೌರವ

9 ಪತ್ರಿಕೆಗಳಲ್ಲಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ ಅನುಭವಿ 76 ವರ್ಷದ ಹಿರಿಯ ಚೇತನ ಪತ್ರಕರ್ತ ವೆಂಕಟ ನಾರಾಯಣ ಸುದ್ದಿ ಮನೆಯಲ್ಲಿ ಸಲ್ಲಿಸಿದ ಸೇವೆ ಅಮೂಲ್ಯವಾದದ್ದು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು.

ನಗರದ ಪ್ರೆಸ್ ಕ್ಲಬ್‌ ಆವರಣದಲ್ಲಿ ಟಿಎಸ್ ಆರ್ ಸಬಾಗಂಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ(ಕೆಯುಡಬ್ಲ್ಯೂಜೆ)
ವತಿಯಿಂದ ಹಿರಿಯ ಪತ್ರಕರ್ತರಿಗೆ ಮನೆಯಂಗಳದಲ್ಲಿ ಮನದಂಬಿ ಹಾರೈಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿರಿಯ ಪತ್ರಕರ್ತ ವೆಂಕಟ ನಾರಾಯಣ್ ರವರು 55 ವರ್ಷಗಳ ಪತ್ರಿಕೋದ್ಯಮ ಸುಧೀರ್ಘ ಸೇವೆ ಗುರುತಿಸಿ ಗೌರವ ನೀಡಲಾಗಿದೆ ಎಂದರು.ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ಗೆ ಕೊರೊನಾ

ವೆಂಕಟ ನಾರಾಯಣ ಸೇವಾ ಅವಧಿಯಲ್ಲಿ ರಾಜ್ಯಾದ್ಯಂತ ಅನೇಕ ಪತ್ರಕರ್ತರನ್ನು ಬೆಳಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಈಗಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಮಾತನಾಡಿ, ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಮತ್ತವರ ತಂಡದವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಈಗಾಲೇ ಅನೇಕ ಹಿರಿಯ ಪತ್ರಕರ್ತರನ್ನು ಸನ್ಮಾನಿಸುತ್ತಾ ಬಂದಿದ್ದಾರೆ.

ಇಂದು ಪ್ರೆಸ್ ಕ್ಲಬ್ ಅಂಗಳದಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಪ್ರೆಸ್ ಕ್ಲಬ್ ಗೇ ಒಂದು ಮೆರಗು ತಂದು ಕೊಟ್ಟಿದೆ ಎಂದರು.

ಕೆಯುಡಬ್ಲ್ಯೂಜೆ ವತಿಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ವೆಂಕಟ ನಾರಾಯಣ್ ಅವರು, ಪತ್ರಕರ್ತರು ವೃತ್ತಿ ಗೌರವ ಉಳಿಸಿಕೊಳ್ಳುವುದು ಸವಾಲಿನ ಕೆಲಸವಾಗಿದೆ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಇದರ ಅಧ್ಯಕ್ಷ ಶಿವಾನಂದ ತಗಡೂರು ಇತಿಹಾಸದ ಪುಟಗಳಲ್ಲಿ ಉಳಿಯುವ ಕಾರ್ಯ ಮಾಡುತ್ತಿದ್ದಾರೆ. ಇವರ ಕಾರ್ಯ ಶೈಲಿಗೆ ನಾನು ಬೆರಗಾಗಿರುವೆ.


ಕಾರಣಾಂತರಗಳಿಂದ ಕೆಯುಡಬ್ಲ್ಯೂಜೆ ಸದಸ್ಯತ್ವ ಸೇರಿದಂತೆ ಅದರ ಚಟುವಟಿಕೆ ಗಳಿಂದ ದೂರ ಉಳಿದ್ದಿದ್ದೆ ಈಗ ಅಧ್ಯಕ್ಷರು ಸದಸ್ಯತ್ವ ನೀಡುವುದಾದರೇ ನಾನು ಪಡೆಯಲು ಸಿದ್ದ ಎಂದರು.ನನ್ನ ಕಲರ್ ಬ್ಲ್ಯಾಕ್ : ಆದರೆ ನಾನು ಬ್ಲ್ಯಾಕ್​ಮೇಲರ್ ಅಲ್ಲ – HDK


ನನ್ನ ಸುದೀರ್ಘ 55 ವರ್ಷಗಳ ಸೇವೆಯಲ್ಲಿ ಅನೇಕ ಏಳು ಬೀಳು ಕಂಡಿದ್ದೇನೆ ಈ ಮಧ್ಯೆ ಸುಮಾರು 2 ಸಾವಿರದಷ್ಟು ಪತ್ರಕರ್ತರಿಗೆ
ಉದ್ಯೋಗ ನೀಡಿರುವ ಅದರಲ್ಲಿ ಎರಡು ಸಾವಿರ ಜನರನ್ನು ಉತ್ತಮ ಪತ್ರಕರ್ತರನ್ನಾಗಿ ರೂಪಿಸಿರುವೆ ಆ ಹೆಗ್ಗಳಿಕೆ ನನಗಿದೆ ಎಂದರು.


ಈ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ಖಜಾಂಚಿ ಮೋಹನ್, ನಿರ್ದೇಶಕ ಸೋಮಣ್ಣ, ಬಿಯುಡಬ್ಲ್ಯೂಜೆ ಪದಾಧಿಕಾರಿಗಳಾದ ಸ್ವಾಮಿ, ಬೆಂಗಳೂರು ನಗರ ಘಟಕದ ಪದಾಧಿಕಾರಿ ವಿಜಯ್ , ಫೋಟೋಗ್ರಾಫರ್ ಶರಣು, ಇನ್ನೂ ಮುಂತಾದವರಿದ್ದರು.


ಕಾರ್ಯಕ್ರಮದ ಆರಂಭದಲ್ಲಿ ಚಿತ್ರದುರ್ಗ ಜಿಲ್ಲಾಘಟಕದ ಅಧ್ಯಕ್ಷ ಬಿ.ದಿನೇಶ್ ಗೌಡಗೆರೆ ಸ್ವಾಗತಿಸಿದರು, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸೋಮಶೇಖರ ಗಾಂಧಿ ವಂದಿಸಿದರು.

Share This Article
Leave a comment