ನನಗೆ ಬಿಜೆಪಿ ಮಾತೃ ಪಕ್ಷ. 2023 ರ ವಿಧಾನಸಭಾ ಚುನಾವಣೆಗೆ ಚನ್ನಪಟ್ಟಣದಿಂದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಘೋಷಣೆ ಮಾಡಿದ್ದಾರೆ.
ರಾಮನಗರ ದ ಹೊರವಲಯದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿ.ಪಿ.ಯೋಗೇಶ್ವರ್, ಚನ್ನಪಟ್ಟಣ ಕ್ಷೇತ್ರ ಅಭಿವೃದ್ಧಿ ಆಗಿರುವುದು ಬಿಜೆಪಿ ಸರ್ಕಾರದ ಅವಧಿಯಲ್ಲಿ. ನಾನು ವೈಯಕ್ತಿಕವಾಗಿ ಬಿಜೆಪಿ ಪಕ್ಷದಿಂದ ಹೆಸರು ಗಳಿಸಿದ್ದೇನೆ. ಹಾಗಾಗಿ ನಾನು ಚನ್ನಪಟ್ಟಣ ದಿಂದ ಸ್ಪರ್ಧೆ ಮಾಡುತ್ತೇನೆ ಕ್ಷೇತ್ರದ ಜನರು ನನ್ನ ಕೈಹಿಡಿಯುತ್ತಾರೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದರು.ಸಿರಿಧಾನ್ಯ ಆಹಾರ ಸೇವನೆ ಆರೋಗ್ಯಕ್ಕೆ ಹಿತಕರ: ಡಿಸಿ HN ಗೋಪಾಲ ಕೃಷ್ಣ
ಕುಮಾರಸ್ವಾಮಿಯವರು ರಾಜ್ಯದ ಸಿಎಂ ಆಗಿದ್ದಾಗ ಕ್ಷೇತ್ರಕ್ಕೆ ಏನು ಅಭಿವೃದ್ಧಿ ಮಾಡಲಿಲ್ಲ. ಜಿಲ್ಲೆಗೆ ಬಹಳಷ್ಟು ಅಭಿವೃದ್ಧಿಗಳು ಬಿಜೆಪಿ ಸರ್ಕಾರದಲ್ಲಿ ಆಗಿವೆ. ಜನರನ್ನು ಭಾವನಾತ್ಮಕವಾಗಿ ಸೆಳೆಯಲು ಕುಮಾರಸ್ವಾಮಿ ಮುಂದಾಗಿದ್ದಾರೆ. ಕುಮಾರಸ್ವಾಮಿ ಕಳೆದ ಬಾರಿ ನನ್ನನ್ನು ಮೋಸ ಮಾಡಿ ಸೋಲಿಸಿದ್ದಾರೆ. ಜನರಿಗೆ ಸುಳ್ಳು ಆಶ್ವಾಸನೆ ಕೊಟ್ಟು ಮತ ಹಾಕಿಸಿಕೊಂಡಿದ್ದಾರೆ. ಕ್ಷೇತ್ರದಲ್ಲಿ ನನ್ನನ್ನು ತೀರಿಸುವವರು, ಉಳಿಸುವವರು ನನ್ನ ಕ್ಷೇತ್ರದ ಮತದಾರರು ಎಂದು ಸಿ.ಪಿ.ಯೋಗೇಶ್ವರ್ ತಿಳಿಸಿದರು.
2023ರ ವಿಧಾನಸಭಾ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಚಟುವಟಿಕೆ ಆರಂಭಿಸಿವೆ. ಮುಂದಿನ ದಿನಗಳಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲೂ ಬಿಜೆಪಿ ಪಕ್ಷದ ವತಿಯಿಂದ ಜನಸಂಕಲ್ಪಾ ಯಾತ್ರೆ ಮಾಡಲಾಗುತ್ತದೆ. ಜೆಡಿಎಸ್ ಪಕ್ಷದವರು ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರೆ. ನನ್ನ ವಿರುದ್ದವಾಗಿ ಸ್ಪರ್ಧೆ ಮಾಡಲು ಮಾಜಿ ಸಿಎಂ ಕುಮಾರಸ್ವಾಮಿ ಬಯಸಿದ್ದಾರೆ. ನಾನು ಕೂಡ ಬಿಜೆಪಿಯಿಂದ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದೇನೆ ಎಂದು ಹೇಳಿದರು.
ಕುಮಾರಸ್ವಾಮಿ ಶಾಸಕರಾದ ಮೇಲೆ ಚನ್ನಪಟ್ಟಣದಲ್ಲಿ ಒಂದೇ ಒಂದು ನಿವೇಶನ, ಮನೆ ಹಂಚಿಕೆ ಮಾಡಿಲ್ಲ, ಬಿಜೆಪಿ ಸರ್ಕಾರದ ವತಿಯಿಂದ ಮೂರು ಸಾವಿರ ಮನೆ ತಂದು ಗ್ರಾಮ ಪಂಚಾಯತಿಗಳ ಮೂಲಕ ಫಲಾನುಭವಿಗಳಿಗೆ ಹಂಚಿಕೆ ಮಾಡಿದ್ದೇವೆ. ಕ್ಷೇತ್ರದಲ್ಲಿ ಕುಮಾರಸ್ವಾಮಿಯ ಶ್ರಮ ಏನಿಲ್ಲ. ಕುಮಾರಸ್ವಾಮಿ ಉಡಾಫೆ ಮಾತುಗಳನ್ನು ಆಡುವುದು ಬಿಡಬೇಕು. ತಮ್ಮ ಅವಧಿಯಲ್ಲಿ ಅಭಿವೃದ್ಧಿ ಮಾಡಿರುವ ಬಗ್ಗೆ ದಾಖಲೆ ತಂದರೆ ಚರ್ಚೆಗೂ ನಾವು ಸಿದ್ಧ ಎಂದು ಸಿ.ಪಿ.ಯೋಗೇಶ್ವರ್ ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದರು.
- 8ನೇ ತರಗತಿ ವಿದ್ಯಾರ್ಥಿ Low ಬಿಪಿಯಿಂದ ಕುಸಿದು ಸಾವು
- ಮೈಸೂರು – ಕಲುಷಿತ ನೀರು ಸೇವಿಸಿ ಓರ್ವ ಸಾವು, 12 ಜನ ಅಸ್ವಸ್ಥ
- ಮಂಡ್ಯ ಭ್ರೂಣ ಹತ್ಯೆ ಪ್ರಕರಣ : ಆರು ಮಂದಿ ಬಂಧನ
- ನಟ ಕಿರಣ್ ರಾಜ್ ಕಾರು ಅಪಘಾತ : ಎದೆಗೆ ತೀವ್ರ ಪೆಟ್ಟು – ಕೆಂಗೇರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ
- ಮುಡಾ ಹಗರಣ : 18 ಅಧಿಕಾರಿಗಳಿಗೆ ಲೋಕಾಯುಕ್ತ ನೋಟಿಸ್
- ಮಾಧ್ಯಮಗಳ ಮೇಲೆ ನಿಷೇಧ ಹೇರುವಂತೆ ನಟ ದರ್ಶನ್ ಕೋರಿಕೆ