June 9, 2023

Newsnap Kannada

The World at your finger tips!

WhatsApp Image 2022 12 23 at 12.26.42 PM

Consuming cereal food is good for health: DC HN Gopal Krishna ಸಿರಿಧಾನ್ಯ ಆಹಾರ ಸೇವನೆ ಆರೋಗ್ಯಕ್ಕೆ ಹಿತಕರ: ಡಿಸಿ HN ಗೋಪಾಲ ಕೃಷ್ಣ

ಸಿರಿಧಾನ್ಯ ಆಹಾರ ಸೇವನೆ ಆರೋಗ್ಯಕ್ಕೆ ಹಿತಕರ: ಡಿಸಿ HN ಗೋಪಾಲ ಕೃಷ್ಣ

Spread the love

ರಾಗಿ, ನವಣೆ, ಸಜ್ಜೆ ಈಗೆ ವಿವಿಧ ಸಿರಿಧಾನ್ಯಗಳಿವೆ. ಕೊಬ್ಬಿನಾಂಶ ಕಡಿಮೆ ಹೊಂದಿರುವ ಸಿರಿಧಾನ್ಯಗಳ ಸೇವನೆ ಆರೋಗ್ಯಕ್ಕೆ ಹಿತಕರ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ ಹೆಚ್.ಎನ್ ಗೋಪಾಲ ಕೃಷ್ಣ ಶುಕ್ರವಾರ ತಿಳಿಸಿದರು.

ರೈತ ದಿನಾಚರಣೆ ಅಂಗವಾಗಿ ಕೃಷಿ ಇಲಾಖೆ ವತಿಯಿಂದ ಮಂಡ್ಯ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗದಿಂದ ಹಮ್ಮಿಕೊಳ್ಳಲಾಗಿದ್ದ ಸಿರಿಧಾನ್ಯ ರೋಡ್ ಶೋ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು,

ಸಿರಿ ಧಾನ್ಯ 15 ನೇ‌ ಶತಮಾನದಲ್ಲೇ ಬಳಕೆಯಲ್ಲಿತ್ತು. ಆಗಲೇ ರಾಗಿಯನ್ನು ಗ್ರಾಮಧಾನ್ಯ ಎಂದು ಪ್ರಚಾರಪಡಿಸಲಾಗಿತ್ತು. ಸಿರಿಧಾನ್ಯ ಎಲ್ಲಾ ಹವಮಾನಕ್ಕೂ ಹೊಂದಿಕೊಂಡು ಕಡಿಮೆ ಕೀಟಬಾಧೆ, ಹೆಚ್ಚು ರೋಗಕ್ಕೆ ಒಳಗಾಗದೇ, ಕಡಿಮೆ ಮಳೆ ಇದ್ದರೂ ಪ ಬೆಳೆಯುತ್ತದೆ. ಈ ಹಿನ್ನಲೆಯಲ್ಲಿ ಕಡಿಮೆ ಖರ್ಚು ಮಾಡಿ ಸಿರಿಧಾನ್ಯ ಬೆಳೆಯನ್ನು ಬೆಳೆದು ರೈತ ಹೆಚ್ಚಿನ ಆದಾಯ ಗಳಿಸಬಹುದು ಎಂದರು.

ಸಿರಿಧಾನ್ಯ ಮೊದಲು ಬಡವರ ಆಹಾರವಾಗಿತ್ತು. ಇಂದು ವೈದ್ಯರು ಇದರ ಮಹತ್ವವನ್ನು ತಿಳಿಸಿ ಶ್ರೀಮಂತರೂ ಸೇರಿದಂತೆ ಎಲ್ಲರೂ ಸೇವಿಸುತ್ತಿದ್ದಾರೆ.ಹೊಸ ವರ್ಷಕ್ಕೆ LPG ಸಿಲಿಂಡರ್ ಬೆಲೆ ಇಳಿಕೆ ಸಾಧ್ಯತೆ


ರೈತರನ್ನು ಸಿರಿಧಾನ್ಯ ಬೆಳೆಯುವಂತೆ ಪ್ರೋತ್ಸಾಹಿಸುವುದರ ಜೊತೆಗೆ ಸಿರಿಧಾನ್ಯಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆಯನ್ನು ಸೃಷ್ಟಿಸಬೇಕು ಎಂದರು.

WhatsApp Image 2022 12 23 at 12.26.42 PM 1

ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹೆಚ್ಚಿಸಲು ಪ್ರಧಾನಮಂತ್ರಿ ಗಳು ವಿಶ್ವಸಂಸ್ಥೆ ಗೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.ಈ ಹಿನ್ನಲೆಯಲ್ಲಿ 2023 ನ್ನು ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಿಸಿರುತ್ತಾರೆ‌. ಈ ನಿಟ್ಟಿನಲ್ಲಿ ಕೃಷಿ ಇಲಾಖೆಯವರು ಸಾರ್ವಜನಿಕರು, ರೈತರಲ್ಲಿ ಅರಿವು ಮೂಡಿಸಲು ಇಂದು ಸಿರಿಧಾನ್ಯ ರೋಡ್ ಶೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತ ಎಲ್ ಹುಲ್ಮನಿ ಮಾತನಾಡಿ
ಮಾಜಿ ಪ್ರಧಾನಮಂತ್ರಿ ದಿವಂಗತ ಚರಣ್ ಸಿಂಗ್ ಅವರ ಜನ್ಮದಿನದ ಸ್ಮರಣಾರ್ಥ ರೈತದಿನಚರಣೆಯನ್ನು ಆಚರಿಸಲಾಗುತ್ತಿದೆ. ಈ ವರ್ಷ ಸಿರಿಧಾನ್ಯಕ್ಕೆ ಹೆಚ್ಚು ಮಹತ್ವ ನೀಡಲಾಗಿದೆ ಎಂದರು.

ಸಿರಿಧಾನ್ಯ ಭಾರತೀಯ ಆಹಾರ ಪದ್ಧತಿಗೆ ಹೊಸದಲ್ಲ. ನಮ್ಮ ಪೂರ್ವಜರು ಹೆಚ್ಚು ಸಿರಿಧಾನ್ಯವನ್ನು ಆಹಾರವಾಗಿ ಬಳಸಿ ಗಟ್ಟಿ ಮಟ್ಟಾಗಿ ಆರೋಗ್ಯವಾಗಿದ್ದರು.ಸಿರಿಧಾನ್ಯಕ್ಕೆ ನಾವು ಇಂದು ಮಹತ್ವವನ್ನು ನೀಡಿ, ಹೆಚ್ಚಿನ ಬಳಕೆಗೆ ಮುಂದಾಗಿದ್ದೇವೆ ಎಂದರು.

ಮೊದಲು ಅಕ್ಕಿಯನ್ನು ಶ್ರೀಮಂತರೂ ಮಾತ್ರ ಸೇವಿಸುತ್ತಿದ್ದರೂ, ಸಿರಿಧಾನ್ಯ ಬಡವರ ಪಾಲಾಗಿತ್ತು. ಇಂದು ಬದಲಾವಣೆಯಾಗಿ ಸಿರಿಧಾನ್ಯ ಶ್ರೀಮಂತರ ಪಾಲಾಗಿದೆ. ಸಿರಿಧಾನ್ಯವನ್ನು ರೈತರು ಹೆಚ್ಚು ಬೆಳೆದು ಎಲ್ಲರಿಗೂ ಸೇವನೆಗೆ ಲಭ್ಯವಾಗುವಂತೆ ಮಾಡಬೇಕು. ರೈತರ ಆದಾಯ ಸಹ ಹೆಚ್ಚಬೇಕು ಎಂದರು.

ಈ ವೇಳೆ ಅಪರ ಜಿಲ್ಲಾಧಿಕಾರಿ ಡಾ: ಹೆಚ್ ಎಲ್ ನಾಗರಾಜ್, ಜಂಟಿ ಕೃಷಿ ನಿರ್ದೇಶಕ ಅಶೋಕ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸೌಮ್ಯ, ಮಾಲತಿ, ಮಮತಾ ಸೇರಿದಂತೆ ವಿ.ಸಿ.ಫಾರಂ ಕೃಷಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಿರಿ ಧಾನ್ಯ ರೋಡ್ ಶೋ:

ಸಿರಿಧಾನ್ಯ ರೋಡ್ ಶೋ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗದಿಂದ ಪ್ರಾರಂಭವಾಗಿ, ಬೆಂಗಳೂರು- ಮೈಸೂರು ಮುಖ್ಯ ರಸ್ತೆ, ಸಂಜಯ ವೃತ್ತದಲ್ಲಿ “ಮಾನವ ಸರಪಳಿ” ರಚಿಸಿ, ಆರ್.ಪಿ ರಸ್ತೆ, 100ಅಡಿ ರಸ್ತೆ, ಕನ್ನಿಕಾ ಪರಮೇಶ್ವರಿ ದೇವಾಸ್ಥಾನ, ಆರ್.ಟಿ.ಓ ಕಛೇರಿ ರಸ್ತೆ ಮಾರ್ಗವಾಗಿ ಜಿಲ್ಲಾ ಪಂಚಾಯತ್ ಕಛೇರಿಯ ಬಳಿ ಮುಕ್ತಾಯವಾಯಿತು.

error: Content is protected !!