ಹೊಸ ವರ್ಷಕ್ಕೆ LPG ಸಿಲಿಂಡರ್ ಬೆಲೆ ಇಳಿಕೆ ಸಾಧ್ಯತೆ

Team Newsnap
1 Min Read

ಹೊಸ ವರ್ಷಕ್ಕೆ ಭರ್ಜರಿ LPG ಸಿಲಿಂಡರ್’ಗಳ ಬೆಲೆ ಇಳಿಕೆಗೆ ಕೇಂದ್ರ ಸರ್ಕಾರ ಸಿದ್ದತೆ ಮಾಡುತ್ತಿದೆ.

ಈ ವರ್ಷದ ಜುಲೈನಿಂದ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಶೇಕಡಾ 30ರಷ್ಟು ಕಡಿಮೆಯಾಗಿದೆ. ಆದರೆ ಭಾರತದಲ್ಲಿ LPG ಸಿಲಿಂಡರ್ ಬೆಲೆ 1056 ರು ಇದೆ.ಮಾಜಿ ಸಚಿವ ಎ. ರಾಜಗೆ ಇಡಿ ಶಾಕ್: 55 ಕೋಟಿ ರೂ. ಮೌಲ್ಯದ 45 ಎಕರೆ ಜಮೀನು ಜಪ್ತಿ

ಹೊಸ ವರ್ಷದಲ್ಲಿ, ಎಲ್ಪಿಜಿ ಬೆಲೆಯಲ್ಲಿ ಸರ್ಕಾರವು ದೊಡ್ಡ ರಿಯಾಯಿತಿಯನ್ನು ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ.

ತೈಲ ಮತ್ತು ಅನಿಲದ ಬೆಲೆಯನ್ನು ನಿಗದಿಪಡಿಸುವ ಹಕ್ಕನ್ನು ಸರ್ಕಾರವು ಸರ್ಕಾರಿ ಕಂಪನಿಗಳಿಗೆ ನೀಡಿದೆ. ಈ ಕಂಪನಿಗಳು ಜುಲೈ 6, 2022 ರಿಂದ LPG ಬೆಲೆಗಳಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ.

Share This Article
Leave a comment