ಮಾಜಿ ಸಚಿವ ಎ. ರಾಜಗೆ ಇಡಿ ಶಾಕ್: 55 ಕೋಟಿ ರೂ. ಮೌಲ್ಯದ 45 ಎಕರೆ ಜಮೀನು ಜಪ್ತಿ

Team Newsnap
1 Min Read
PSI Scam: ED raids RD Patil's residence ಪಿಎಸ್‌ಐ ಹಗರಣ: ಆರ್‌ಡಿ ಪಾಟೀಲ್ ನಿವಾಸದ ಮೇಲೆ ಇಡಿ ದಾಳಿ

ಕೇಂದ್ರದ ಮಾಜಿ ಸಚಿವ, ಡಿಎಂಕೆ ಸಂಸದ ಎ. ರಾಜಾ ಅವರಿಗೆ ಸಂಬಂಧಿಸಿದ 45 ಎಕರೆ ಭೂಮಿಯನ್ನು ಇಡಿ ಜಪ್ತಿ ಮಾಡಿದೆ.

ತಮಿಳುನಾಡಿನ ಕೊಯಮತ್ತೂರಿನಲ್ಲಿ ಕೇಂದ್ರದ ಮಾಜಿ ಟೆಲಿಕಾಂ ಸಚಿವ ಎ. ರಾಜಾ ಬೇನಾಮಿ ಕಂಪನಿಯ ಹೆಸರಿನಲ್ಲಿದೆ ಎಂದು ಹೇಳಲಾದ ಸುಮಾರು 55 ಕೋಟಿ ರು ಮೌಲ್ಯದ 45 ಎಕರೆ ಭೂಮಿಯನ್ನು ಜಾರಿ ನಿರ್ದೇಶನಾಲಯವು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.ರಂಗಸ್ಥಳದಲ್ಲೇ ಹೃದಯಾಘಾತ: ಯಕ್ಷಗಾನ ಕಲಾವಿದ ಸಾವು

2004 ರಿಂದ 2007 ರವರೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವರಾಗಿದ್ದ ಅವಧಿಯಲ್ಲಿ ಗುರುಗ್ರಾಮ್ ಮೂಲದ ರಿಯಲ್ ಎಸ್ಟೇಟ್ ಕಂಪನಿಗೆ ಪರಿಸರ ಅನುಮತಿಗಳನ್ನು ನೀಡಿದ್ದರು.

WhatsApp Image 2022 12 23 at 10.05.11 AM

ಇದು ದೇಶದ ಅತಿದೊಡ್ಡ ರಿಯಲ್ ಎಸ್ಟೇಟ್ ಕಂಪನಿಗಳಲ್ಲಿ ಒಂದಾಗಿದೆ, ಇದು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಸಹ ಪಟ್ಟಿಯಾಗಿದೆ ಎಂದು ಇಡಿ ಹೇಳಿದೆ.

Share This Article
Leave a comment