ರೇವಣ್ಣ ಕೇಂದ್ರ ಕಾರಾಗೃಹಕ್ಕೆ ಶಿಪ್ಟ್ : 4567 ಖೈದಿ ಸಂಖ್ಯೆ ನೀಡಿಕೆ

Team Newsnap
1 Min Read

ಬೆಂಗಳೂರು : ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನಕ್ಕೊಳಗಾಗಿರುವ ಜೆಡಿಎಸ್​ ಶಾಸಕ ಹಾಗೂ ಮಾಜಿ ಸಚಿವ ಹೆಚ್. ಡಿ. ರೇವಣ್ಣ ಅವರನ್ನು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಈ ರಾತ್ರಿ ಶಿಫ್ಟ್​ ಮಾಡಲಾಗಿದೆ.

ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣದಲ್ಲಿ ಮೇ 4 ರಂದು ಬಂಧಿತರಾಗಿರುವ ರೇವಣ್ಣ ಅವರನ್ನು ಈ ಹಿಂದೆ ನಾಲ್ಕು ದಿನಗಳವರೆಗೆ ಎಸ್ಐಟಿ ವಶಕ್ಕೆ ನೀಡಲಾಗಿತ್ತು.

ಕಸ್ಟಡಿ ಅವಧಿ ಇಂದು ಅಂತ್ಯವಾದ ಹಿನ್ನೆಲೆಯಲ್ಲಿ ಅವರನ್ನು 17ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು.

ವಿಚಾರಣೆ ನಡೆಸಿದ ನ್ಯಾಯಾಧೀಶರು, ಹೆಚ್. ಡಿ. ರೇವಣ್ಣ ಅವರನ್ನು ಮೇ 14 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ತಂದು ಸೇರಿಸಲಾಗಿದೆ

ವಿಚಾರಣಾಧೀನ ಖೈದಿ ಸಂಖ್ಯೆ – 4567:

ರೇವಣ್ಣ ಅವರಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿ ಸಂಖ್ಯೆ 4567 ನೀಡಲಾಗಿದೆ.

ಜೈಲು ಅಧಿಕಾರಿಗಳು ಯುಟಿಪಿ ನಂಬರ್ 4567ಅನ್ನು ರೇವಣ್ಣ ಅವರಿಗೆ ನೀಡಿದ್ದಾರೆ. ಸದ್ಯ ಕಾರಾಗೃಹದಲ್ಲಿನ ಕ್ವಾರಂಟೈನ್ ವಿಭಾಗದ ಪ್ರತ್ಯೇಕ ಕೊಠಡಿಯಲ್ಲಿ ರೇವಣ್ಣ ಅವರನ್ನು ಇರಿಸಲಾಗಿದೆ ಎಂದು ಕಾರಾಗೃಹದ ಮೂಲಗಳು ತಿಳಿಸಿವೆ.SSLC ಫಲಿತಾಂಶ ಪರಿಶೀಲಿಸಲು ಸುಲಭ ಹಂತಗಳು : ವಿವರ

ರಾಜಕಾರಣಿಯಾಗಿ, ಶಾಸಕರಾಗಿ ಐಷಾರಾಮಿ ಜೀವನ ನಡೆಸಿದ್ದ ರೇವಣ್ಣ ಅವರಿಗೆ ಜೈಲಿನ ಇಂದಿನ ಮೆನು ಪ್ರಕಾರ ಮುದ್ದೆ, ಚಪಾತಿ, ಅನ್ನ ಸಾಂಬಾರ್ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.

Share This Article
Leave a comment