545 ಪಿಎಸ್ಐ ಪರೀಕ್ಷಾ ಅಕ್ರಮದ ಮತ್ತೊಬ್ಬ ಕಿಂಗ್‍ಪಿನ್ ಆರೋಪಿ ಕಾಶಿನಾಥ್ ಇಂದು ಬೆಳಿಗ್ಗೆ ಸಿಐಡಿ ಅಧಿಕಾರಿಗಳ ಎದುರು ಶರಣಾಗಿದ್ದಾನೆ.
ಈ ನಡುವೆ PSI ನೇಮಕಾತಿ ಹಗರಣದಲ್ಲಿ ಇಬ್ಬರು DYSP ಹಾಗೂ ಇನ್ಸ್ ಪೆಕ್ಟರ್ ಗಳೂ ಭಾಗಿಯಾಗಿದ್ದರೆಂಬ ಅಂಶ ಬೆಳಕಿಗೆಬಂದಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ
ಕಾಶೀನಾಥ್ ಶರಣು ಹೇಗೆ ?
ಇಂದು ಬೆಳಗ್ಗೆ 8 ಗಂಟೆ ವೇಳೆಗೆ ಕಲಬುರಗಿಯ ಸಿಐಡಿ ಕಚೇರಿ ಆಗಮಿಸಿದ ಕಾಶಿನಾಥ್ ಜ್ಞಾನ ಜ್ಯೋತಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಮುಖ್ಯೋಪಾಧ್ಯಾಯನೂ ಹೌದು
ಕಾಶಿನಾಥ್ ಮಾರ್ಗದರ್ಶನದಲ್ಲಿಯೇ ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ನಡೆಸಲಾಗಿದೆ ಎಂಬ ಆರೋಪವಿದ್ದು, ಜ್ಞಾನ ಜ್ಯೋತಿ ಪರೀಕ್ಷೆ ಕೇಂದ್ರದಲ್ಲಿ ಓಎಂಆರ್ ತಿದ್ದುಪಡಿ ಹಾಗೂ ಬ್ಲೂ ಟೂತ್ ಬಳಕೆ ಮಾಡುವ ಮೂಲಕ ಅಕ್ರಮ ನಡೆಸಲಾಗಿತ್ತು.
ಇದನ್ನು ಓದಿ : PSI ಹಗರಣ: ಕಿಂಗ್‍ಪಿನ್ ಮಂಜುನಾಥ್ ಮೇಳಕುಂದಿ CIDಗೆ ಶರಣು
ಪ್ರಕರಣದಲ್ಲಿ ಎಫ್ಐಆರ್ ದಾಖಲಾಗುತ್ತಿದಂತೆ ಪರಾರಿಯಾಗಿದ್ದ ಕಾಶಿನಾಥ್ ಕಳೆದ 22 ದಿನಗಳಿಂದ ತಲೆ ಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿತ್ತು.
ಸದ್ಯ ಆರೋಪಿ ಶರಣಾಗಿರುವ ಹಿನ್ನೆಲೆಯಲ್ಲಿ ಪರೀಕ್ಷೆ ಅಕ್ರಮದಲ್ಲಿ ಬಂಧನವಾಗಿರುವ ಸಂಖ್ಯೆ 26ಕ್ಕೇರಿದೆ.
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
- ರಾಜ್ಯದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ: ಬಿಜೆಪಿಗೆ ಆಘಾತ
- ಕಾಪರ್ ಏಜ್ ಇನ್ಸ್ಟಿಟ್ಯೂಟ್ ಮಾಲೀಕ ಶರತ್ ಆತ್ಮಹತ್ಯೆ: ಕಾರಣ ನಿಗೂಢ
- 104ರನ್ಗೆ ಆಸ್ಟ್ರೇಲಿಯಾ ಆಲೌಟ್ ,ಬುಮ್ರಾಗೆ 5 ವಿಕೆಟ್
- ಚನ್ನಪಟ್ಟಣ: 4 ನೇ ಸುತ್ತಿನಲ್ಲಿ ನಿಖಿಲ್ ಕುಮಾರಸ್ವಾಮಿ ಮುನ್ನಡೆ
More Stories
ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
ರಾಜ್ಯದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ: ಬಿಜೆಪಿಗೆ ಆಘಾತ