ಪ್ರಯೋಗದ ಹಂತಕ್ಕೆ ಬಂದ M15 ಪೆಟ್ರೋಲ್‌! ಪೆಟ್ರೋಲ್‌ ವೆಚ್ಚದ ಹೊರೆ ಕಡಿಮೆಯಾಗುವ ಸಾಧ್ಯತೆ

Team Newsnap
0 Min Read

ಪೆಟ್ರೋಲ್‌ನೊಂದಿಗೆ ಶೇ.15 ಮೆಥನಾಲ್‌ ಮಿಶ್ರಣ ಮಾಡಿರುವ ಎಂ15 ಪೆಟ್ರೋಲ್‌ನ್ನು ಇಂಡಿಯನ್‌ ಆಯಿಲ್‌ ಕಾರ್ಪೋರೇಶನ್‌ ಹೊರತಂದಿದೆ.

ಅಸ್ಸಾಂನ ತಿನ್‌ಸುಕಿಯಾ ಜಿಲ್ಲೆಯಲ್ಲಿ ಈ ಪೆಟ್ರೋಲ್‌ನ್ನು ಪ್ರಾಯೋಗಿಕವಾಗಿ ಬಳಕೆಗೆ ತರಲಾಗಿದೆ.

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಸಹಾಯಕ ಸಚಿವರಾಗಿರುವ ರಾಮೇಶ್ವರ್‌ ತೇಲಿ ಎಂ15 ಪೆಟ್ರೋಲ್‌ ಬಳಕೆಗೆ ಚಾಲನೆ ನೀಡಿದ್ದಾರೆ.

ಈ ರೀತಿಯಲ್ಲಿ ಮೆಥನಾಲ್‌ ಮಿಶ್ರಿತ ಪೆಟ್ರೋಲ್‌ ಬಳಕೆಯಿಂದಾಗಿ, ಗ್ರಾಹಕರಿಗೆ ಪೆಟ್ರೋಲ್‌ ವೆಚ್ಚದ ಹೊರೆ ಕಡಿಮೆಯಾಗುವುದರ ಜತೆ ನಾವು ಪೆಟ್ರೋಲ್‌ಗಾಗಿ ಬೇರೆ ದೇಶಗಳ ಮೇಲೆ ಅವಲಂಬಿಸಿರುವುದನ್ನೂ ಕಡಿಮೆ ಮಾಡಿಕೊಳ್ಳಬಹುದು ಎಂದಿದ್ದಾರೆ.

Share This Article
Leave a comment