ತೀವ್ರ ಕುತೂಹಲ ಕೆರಳಿಸಿದ್ದ ಶ್ರೀರಂಗಪಟ್ಟಣ ಪುರಸಭೆಯ ಅಧಿಕಾರ ಗದ್ದುಗೆ ಹಿಡಿಯುವಲ್ಲಿ ಜೆಡಿಎಸ್ ಯಶಸ್ವಿಯಾಗಿದೆ. ಶಾಸಕ ರವೀಂದ್ರ
ಶ್ರೀಕಂಠಯ್ಯ ನವರ ತಂತ್ರಗಾರಿಕೆಯು ಕೊನೆಗೂ ಸಫಲವಾಗಿದೆ.
ಜೆಡಿಎಸ್ ನ ಇಬ್ಬರು ಸದಸ್ಯರು ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಂದು ನಿಗದಿಯಾಗಿದ್ದ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷರಾಗಿ ನಿರ್ಮಲ ಹಾಗೂ ಉಪಾಧ್ಯಕ್ಷರಾಗಿ ಎಸ್.ಪ್ರಕಾಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜೆಡಿಎಸ್ ಪಕ್ಷದ ಒಟ್ಟು 12 ಮಂದಿ ಸದಸ್ಯರ ಬಲದೊಂದಿಗೆ 7ನೇ ವಾರ್ಡಿನ ಬಿಜೆಪಿ ಸದಸ್ಯೆ ಪೂರ್ಣಿಮಾ ಹಾಗೂ ಗಂಜಾಂ 22ನೇ ವಾರ್ಡಿನ ಸ್ವತಂತ್ರ್ಯ ಅಭ್ಯರ್ಥಿ ಪೂರ್ಣಿಮಾ ಪ್ರಕಾಶ್ ರ ಬೆಂಬಲ ಮತ್ತು ಶಾಸಕರ ಮತದಿಂದ ಒಟ್ಟು 15 ಮತಗಳ ಸಂಪೂರ್ಣ ಬೆಂಬಲದೊಂದಿಗೆ ಕೋಟೆ ನಾಡಿನ ಗದ್ದುಗೆಯ ಅಧಿಕಾರವನ್ನು ಶಾಸಕ ರವೀಂದ್ರ ಶ್ರೀಕಂಠಯ್ಯ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
8 ಜನ ಪುರಸಭಾ ಸದಸ್ಯರ ಬಲ ಹೊಂದಿದ್ದ ಕಾಂಗ್ರೆಸ್ , 2 ಸ್ವತಂತ್ರ ಅಭ್ಯರ್ಥಿ ಹಾಗೂ ಬಿಜೆಪಿ 1 ಸದಸ್ಯರೊಂದಿಗೆ ಎದುರಾಳಿ ಪಕ್ಷದ ಸದಸ್ಯರನ್ನು ತಂತ್ರಗಾರಿಕೆಯ ಮೂಲಕ ಸೆಳೆಯುವ ಪ್ರಯತ್ನ ವಿಫಲವಾಗಿದೆ. ಜೆಡಿಎಸ್ ನೊಂದಿಗೆ ಬಿಜೆಪಿ ಮತ್ತು ಸ್ವತಂತ್ರ್ಯ ಅಭ್ಯರ್ಥಿ ಹೋಗಿ ಬೆಂಬಲ ನೀಡಿರುವುದು ಕಾಂಗ್ರೆಸ್ ಲೆಕ್ಕಾಚಾರಕ್ಕೆ ಮರ್ಮಾಘಾತವಾಗಿದೆ. ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಸೋಲೊಪ್ಪಿಕೊಂಡಿದ್ದಾರೆ.
ಪುರಸಭೆಯ ಸಭಾಂಗಣದಲ್ಲಿ ಚುನಾವಣಾಧಿಕಾರಿ ತಹಸೀಲ್ದಾರ್ ಎಂ.ವಿ.ರೂಪ, ಪುರಸಭಾ ಮುಖ್ಯಾಧಿಕಾರಿ ಕೃಷ್ಣ ಹಾಗೂ ಶಾಸಕ ರವೀಂದ್ರ ಶ್ರೀಕಂಠಯ್ಯ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು, ಕಾನೂನು ನಿಯಮಾವಳಿ ಪ್ರಕಾರ ನಡೆ ಹಾಗೂ ಅಧಿಕಾರ ಘೋಷಣೆಗೆ ಕಾಯ್ದಿರಿಸಲಾಗಿದೆ.
More Stories
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ
ಮಂಡ್ಯ ದೀಪಾಲಂಕಾರಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ