ಐಪಿಎಲ್ 20-20; ಸೆಮಿಫೈನಲ್ಸ್‌ಗೆ ಆಯ್ಕೆಯಾದ ಎಸ್‌ಆರ್‌ಹೆಚ್

Team Newsnap
1 Min Read

ಐಪಿಎಲ್ 20-20ಯ ಮೊದಲನೆ ಎಲಿಮಿನೇಟರ್ ಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ, ಸನ್ ರೈಸರ್ಸ್ ಆಫ್ ಹೈದರಾಬಾದ್ ತಂಡ ಗೆಲುವು ದಾಖಲಿಸಿತು.

ದುಬೈನ ಶೇಕ್ ಜಯೇದ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಎಸ್‌ಆರ್‌ಹೆಚ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

ಆರ್‌ಸಿಬಿ ತಂಡದಿಂದ ಓಪನಿಂಗ್ ಬ್ಯಾಟ್ಸ್‌ಮನ್‌ಗಳಾಗಿ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಸ್ಕ್ರೀಸ್‌ಗಿಳಿದರು. ಇವರಿಬ್ಬರ ಜೋಡಿಯಾಟ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು. ಕೊಹ್ಲಿ 7 ಎಸೆತಗಳಿಗೆ 6 ರನ್ ಗಳಿಸಿದರೆ, ಪಡಿಕ್ಕಲ್ 6 ಎಸೆತಗಳಿಗೆ 1 ರನ್ ಮಾತ್ರ ಗಳಿಸಿ ಪೆವಿಲಿಯನ್ ಕಡೆ ಮುಖ ಮಾಡಿದರು. ನಂತರ ಬಂದ ಎಬಿ ಡೀ ವಿಲಿಯರ್ಸ್ 43 ಎಸೆತಗಳಿಗೆ 56 ರನ್ ಹಾಗೂ ಫಿಂಚ್ 30 ಎಸೆತಗಳಿಗೆ 32 ರನ್ ಗಳಿಸಿ ತಂಡದ ಮೊತ್ತ ಪೇರಿಸುವಲ್ಲಿ‌ ಸರ್ವಪ್ರಯತ್ನ ಮಾಡಿದರೂ ತಂಡ ಗೆಲ್ಲಲಿಲ್ಲ. ಆರ್‌ಸಿಬಿ ತಂಡ‌ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 131 ರನ್‌ಗಳನ್ನು ಮಾತ್ರ ಗಳಿಕೆ ಮಾಡಿತು.

ಆರ್‌ಸಿಬಿ ತಂಡದ‌ ಪ್ರತಿ ತಂಡವಾದ ಎಸ್‌ಆರ್‌ಹೆಚ್ ತಂಡದಿಂದ ಡಿ. ವಾರ್ನರ್ ಹಾಗೂ ಎಸ್. ಗೋಸ್ವಾಮಿ ಮೈದಾನಕ್ಕಿಳಿದು ಅತ್ಯಂತ ಸಾಧಾರಣ ಆಟ ಪ್ರಾರಂಭ ಮಾಡಿದರು. ವಾರ್ನರ್ 17 ಎಸೆತಗಳಿಗೆ 17 ರನ್ ಗಳಿಸಿದರೆ, ಗೋಸ್ವಾಮಿ ಶೂನ್ಯಕ್ಕೆ ಪೆವಿಲಿಯನ್ ದಾರಿ‌ ಹಿಡಿದರು. ನಂತರ ಬಂದ ಮನೀಶ್ ಪಾಂಡೆ ಹಾಗೂ ಕೆ. ವಿಲಿಯಮ್ಸನ್ ತಙಡದ ಮೊತ್ತ ‌ಪೇರುವಲ್ಲಿ ಮಹತ್ವದ ಪಾತ್ರ ವಹಿಸಿದರು. ಪಾಂಡೆ 21 ಎಸೆತಗಳಿಗೆ 24 ರನ್ ಗಳಿಸಿಸರೆ, ವಿಲಿಯಮ್ಸನ್ 44 ಎಸೆತಗಳಿಗೆ 50 ರನ್ ಗಳಿಸಿದರು‌. ಎಸ್‌ಆರ್‌ಹೆಚ್ ತಂಡ 19.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿ ಪಂದ್ಯದಲ್ಲಿ ಗೆಲುವಿನ ಕಿರೀಟವನ್ನು ತನ್ನದಾಗಿಸಿಕೊಂಡಿತು.

TAGGED:
Share This Article
Leave a comment