ಅಕ್ರಮ ಗೋಸಾಗಾಣೆ ಮಾಹಿತಿ ಕೊಟ್ಟವರ ಮೇಲೆಯೇ ಡಿವೈಎಸ್ಪಿ ಹಲ್ಲೆ

Team Newsnap
1 Min Read

ಅಕ್ರಮವಾಗಿ ಕಸಾಯಿ ಖಾನೆಗೆ ಗೋವು ಸಾಗಾಣಿಕೆ ಮಾಡುತ್ತಿದ್ದ ವಾಹನ ತಡೆದು ಪೋಲೀಸರಿಗೆ ಮಾಹಿತಿ ನೀಡಿದ್ದು ತಪ್ಪು ಎಂದು ಬೆದರಿಸಿ, ಹಿಂದೂ ಜಾಗರಣ ವೇದಿಕೆ ಜಿಲ್ಲಾಧ್ಯಕ್ಷರ ಮೇಲೆ ಹಲ್ಲೆ ನಡೆಸಿದ ಡಿವೈಎಸ್ಪಿ ಪೃಥ್ವಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹಿಂದೂ ಜಾಗರಣ ವೇದಿಕೆ ಹಾಗೂ ಪರಿವಾರದ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿಗೆ ಮುಂದೆ ಪ್ರತಿಭಟನೆ ನಡೆಸಿದ ಹಿಂದೂ ಜಾಗರಣ ವೇದಿಕೆ ಜಿಲ್ಲಾಧ್ಯಕ್ಷ ಕೆ. ಯೋಗಾನಂದ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ಮುಗಿಸಿಕೊಂಡು ನಿನ್ನೆ ಮಧ್ಯಾಹ್ನ 2.20ರ ಸಮಯದಲ್ಲಿ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿರುವ ಮದ್ದೂರಿನ ಅಡಿಗಾಸ್ ಹೊಟೇಲ್ ಬಳಿ ಮದ್ದೂರು-ಕುಣಿಗಲ್ ಮಾರ್ಗವಾಗಿ ಲಗೇಜ್ ಆಟೋ ವಾಹನದಲ್ಲಿ (ಕೆ.ಎ. 06-ಎಎ-2346) 4 ಹಸುಗಳನ್ನು ತುಂಬಿಕೊಂಡು ಹೋಗುತ್ತಿದ್ದನ್ನು ಗಮನಿಸಿ ತಕ್ಷಣ ತಡೆದು ಮದ್ದೂರು ಪಿಎಸ್‍ಐ ಹಾಗೂ ಸಿಪಿಐಗೆ ಮಾಹಿತಿ ನೀಡಿದ್ದರು.

WhatsApp Image 2020 11 06 at 8.01.49 PM

ಮಾಹಿತಿ ಪಡೆದರೂ ಸ್ಥಳಕ್ಕೆ ಅಧಿಕಾರಿಗಳು ಬರಲಿಲ್ಲ. ಸ್ವಲ್ಪ ಸಮಯದ ಬಳಿಕ ಇಬ್ಬರು ಪೋಲೀಸ್ ಸಿಬ್ಬಂದಿ ಬಂದು ಆ ವಾಹನವನ್ನು ಮದ್ದೂರು ಪೊಲೀಸ್ ಠಾಣೆಗೆ ಕರೆ ತಂದಿದ್ದಾರೆ ಎಂದು ದೂರಿದರು.

ಗೋವುಗಳನ್ನು ತುಂಬಿದ್ದ ವಾಹನವನ್ನು ಠಾಣೆಗೆ ಕೊಂಡೊಯ್ದರು. ಈ ವೇಳೆ ಯೋಗಾನಂದ ಪೋಲೀಸರು ಏನು ಕ್ರಮ ಜರುಗಿಸಿದ್ದಾರೆಂದು ನೋಡಲು ಠಾಣೆಗೆ ಹೋಗಿ, ಪಿಎಸ್‍ಐ ಅವರನ್ನು ವಿಚಾರಿಸಿದರು.

ಸಂಜೆ 6.15ರವರೆಗೆವಿಗೂ ವಿಚಾರಣೆ ಮಾಡುವುದಾಗಿ ಯೋಗಾನಂದ ಅವರನ್ನು ಠಾಣೆಯಲ್ಲೇ ಕೂರಿಸಿಕೊಂಡರು. ಬಳಿಕ ತೆರಳುವಂತೆ ಸೂಚಿಸಿದ್ದರು.

ಠಾಣೆಯಿಂದ ಹೊರ ಹೋಗುತ್ತಿದ್ದ ಸಂದರ್ಭದಲ್ಲಿ ಡಿವೈಎಸ್ಪಿ ಪೃಥ್ವಿ ಯೋಗಾನಂದ ಅವರನ್ನು ನೋಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಹಲ್ಲೆ ನಡೆಸಿ ಅವರಿಂದ ಪತ್ರವೊಂದಕ್ಕೆ ಸಹಿ ಮಾಡಿಸಿಕೊಂಡು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಈ ಪ್ರತಿಭಟನೆ ನಡೆಸಲಾಯಿತು.

ರಾಜ್ಯ ಗೃಹ ಸಚಿವ ಬೊಮ್ಮಾಯಿ ಗೋಸಾಗಾಣಿಕೆ ಮಾಡುವವರ ವಿರುದ್ದ‌ ಉಗ್ರ ಕ್ರಮ ಕೈಗೊಳ್ಳಿ ಎಂದು ಮಡಿಕೇರಿ ಯಲ್ಲಿ ಇಂದು ಹೇಳಿಕೆ ನೀಡಿದ ಬೆನ್ನಲ್ಲಿ ಡಿವೈಎಸ್ ಪಿ ಪೃಥ್ವಿ ಮಾತ್ರ ದೂರುದಾರರ ಮೇಲೆ ಹಲ್ಲೆ ನಿಜವಾದರೆ ಜಿಲ್ಲಾ ಎಸ್ಪಿ ಯಾವ ಕ್ರಮ ಜರುಗಿಸುತ್ತಾರೆ ಎಂಬುದನ್ನು ಕಾದು ನೋಡೋಣ.

Share This Article
Leave a comment