ಸುಮಲತಾ ತಟಸ್ಥರಾಗಿದ್ದು ಏಕೆ?

Team Newsnap
1 Min Read
Sumaltha's entry into state politics? ರಾಜ್ಯ ರಾಜಕಾಣಕ್ಕೆ ಸುಮಲತಾ ಎಂಟ್ರಿ?

ಸಂಸದೆ ಸುಮಲತಾ ನಿನ್ನೆ ನಾಗಮಂಗಲದ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ರ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿದ್ದರೂ ಅಲ್ಲಿ ಜೆಡಿಎಸ್ ಗೆಲುವು ಸಾಧಿಸಿತು.

ಶುಕ್ರವಾರ ಶ್ರೀರಂಗಪಟ್ಟಣ ಪುರಸಭೆಯ ಅಧ್ಯಕ್ಷ – ಉಪಾಧ್ಯಕ್ಷ ರ ಚುನಾವಣೆಯಿಂದ ದೂರ ಉಳಿದಿದ್ದರು. ತಟಸ್ಥ ನಿಲುವು ತಾಳಿದ್ದರು.

ಆದರೆ ಸಂಸದೆ ಸುಮಲತಾ ಮಾತ್ರ ನಂಗೆ ಬೆಂಗಳೂರಿನಲ್ಲಿ ಕೆಲಸ ಇದೆ. ಹೀಗಾಗಿ ಶ್ರೀರಂಗಪಟ್ಟಣ ಪುರಸಭೆಯ ಚುನಾವಣೆಯಲ್ಲಿ ಪಾಲ್ಗೊಳ್ಳುವುದಿಲ್ಲ ಅಂತ ಹೇಳಿದ್ದರು.

ಶ್ರೀರಂಗಪಟ್ಟಣ ಪುರಸಭೆಯಲ್ಲಿ ಕಾಂಗ್ರೆಸ್ 8 ಮಂದಿ ಸದಸ್ಯರನ್ನು ಹೊಂದಿದೆ. ಬಿಜೆಪಿ ಹಾಗೂ ಪಕ್ಷೇತರ ಸದಸ್ಯರ ಬೆಂಬಲ ಪಡೆಯುವಲ್ಲಿ ಕಾಂಗ್ರೆಸ್ ವಿಫಲವಾಯಿತು. ಈ ನಡುವೆ ಸಂಸದೆ ಕೂಡ ತಟಸ್ಥ ನಿಲುವು ತಳೆದಿದ್ದು ಕಾಂಗ್ರೆಸ್ ಗೆ ಮುಳುವಾಯಿತು.

ನಾನು ನಾಗಮಂಗಲದಲ್ಲಿ ಕಾಂಗ್ರೆಸ್ ಬೆಂಬಲ ನೀಡಿದ್ದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲ ನೀಡಿದ್ದರಿಂದ ನಾನು ಅವರ ಪರ ಮತ ಚಲಾಯಿಸಿದೆನು ಎಂದು ಸಂಸದೆ ಸುಮಲತಾ ತಿಳಿಸಿದರು.

ಆದರೆ ಶ್ರೀರಂಗಪಟ್ಟಣ ಪುರಸಭೆಯಲ್ಲಿನ ಪಕ್ಷಗಳ ಬಲಾಬಲದ ಸಂಖ್ಯೆ. ಜೆಡಿಎಸ್ ಶಾಸಕ ರವೀಂದ್ರಶ್ರೀಕಂಠಯ್ಯನವರ ತಂತ್ರಗಾರಿಕೆಯನ್ನು ಅರಿತು, ಸಂಸದೆ ತಟಸ್ಥರಾಗಿ ಉಳಿದಿರಬಹುದೇ ಎಂಬ ಅನುಮಾನ ಮಾತ್ರ ಕಾಡುತ್ತದೆ.

TAGGED:
Share This Article
Leave a comment