ಸಚಿವ ಉಮೇಶ್ ಕತ್ತಿ ಹಠಾತ್ ನಿಧನದಿಂದಾಗಿ ದೊಡ್ಡಬಳ್ಳಾಪುರದಲ್ಲಿ ಇಂದು ನಡೆಯಬೇಕಿದ್ದ ಬಿಜೆಪಿ ಜನೋತ್ಸವ ಜನ ಸ್ಪಂದನ ಕಾರ್ಯಕ್ರಮವಾಗಿ ಬದಲಾಗಿದೆ. ಸೆ 10 ರಂದೇ ದೊಡ್ಡ ಬಳ್ಳಾಪುರದಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಸಚಿವ ಡಾ.ಕೆ ಸುಧಾಕರ್ ಈ ಬಗ್ಗೆ ಟ್ವಿಟ್ ಮಾಡಿ ಇಡೀ ರಾಜ್ಯ ಮುತ್ಸದ್ಧಿ ನಾಯಕರೊಬ್ಬರನ್ನು ಕಳೆದುಕೊಂಡ ಶೋಕದಲ್ಲಿದೆ, ನಾಳಿನ ‘ಜನ ಸ್ಪಂದನ (ಜನೋತ್ಸವ) – ಸಾರ್ಥಕ ಸೇವೆ ಹಾಗೂ ಸಬಲೀಕರಣ’ ಕಾರ್ಯಕ್ರಮವನ್ನು ಶನಿವಾರ, ಸೆಪ್ಟೆಂಬರ್ 10, ಮಧ್ಯಾಹ್ನ 12 ಗಂಟೆಗೆ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.
ನಮ್ಮ ಬೆಂಗಳೂರು ನಮ್ಮ ಹೆಮ್ಮೆ – ಸೂರು ಕೊಟ್ಟ ಊರಿಗೆ ಋಣವಾಗಿರೋಣ – ಚಿತ್ರಸಾಹಿತಿ ಕವಿರಾಜ್
ಸಚಿವ ಉಮೇಶ್ ಕತ್ತಿ ನಿಧನದಿಂದಾಗಿ ರಾಜ್ಯ ಸರ್ಕಾರದಿಂದ ರಾಜ್ಯಾಧ್ಯಂತ ಮೂರು ದಿನ ಶೋಕಾಚರಣೆ ಘೋಷಣೆ ಮಾಡಲಾಗಿದೆ. ಹೀಗಾಗಿ ಅದು ಮುಗಿದ ಮರುದಿನವಾದ ಶನಿವಾರವೇ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು