ಮಂಡ್ಯದ ಶ್ರೀನಿಧಿ ಶೆಟ್ಟಿ ಹನಿಟ್ರ್ಯಾಫ್ ಪ್ರಕರಣ’ಕ್ಕೆ ಬಿಗ್ ಟ್ವಿಸ್ಟ್: ಶೆಟ್ಟಿಯ ಮುಖವಾಡ ಬಯಲು ಮಾಡಿದ ವಿಡಿಯೋ ?

Team Newsnap
1 Min Read
Gold trader Jagannath Shetty caught in honeytrap - Rs 50 lakh taken by Sundari & Gang ಹನಿಟ್ರ್ಯಾಪ್ ಬಲೆಗೆ ಬಿದ್ದ ಚಿನ್ನದ ವ್ಯಾಪಾರಿ ಜಗನ್ನಾಥ್ ಶೆಟ್ಟಿ - 50 ಲಕ್ಷ ರು ಕಿತ್ತ ಸುಂದರಿ & ಗ್ಯಾಂಗ್

ಮಂಡ್ಯದ ಬಿಜೆಪಿ ಮುಖಂಡ ಹಾಗೂ ಚಿನ್ನದ ವ್ಯಾಪಾರಿ ಜಗನ್ನಾಥ್ ಶೆಟ್ಟಿಯ ಹನಿಟ್ರ್ಯಾಫ್ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಮಂಡ್ಯದ ಪಶ್ಚಿಮ ಠಾಣೆಯ ಪೋಲಿಸರು ಪ್ರಕರಣ ದಾಖಲಿಸಿಕೊಂಡ ಹಾಕಲಾಗಿರುವ ಎಫ್‌ಐಆರ್ ಗಿಂತಲೂ ಅಸಲಿಗೆ ನಡೆದಿದ್ದೇ ಬೇರೆ .

ಮೈಸೂರಿನ ದರ್ಶನ್ ಲಾಡ್ಜ್ ನಲ್ಲಿ ಬಿಜೆಪಿ ಮುಖಂಡ ಹಾಗೂ ಚಿನ್ನದ ವ್ಯಾಪಾರಿ ಜಗನ್ನಾಥ ಶೆಟ್ಟಿ ಹನಿಟ್ರ್ಯಾಫ್ ಪ್ರಕರಣದಲ್ಲಿ ಸಲ್ಮಾ ಗ್ಯಾಂಗ್ ದರ್ಶನ್ ಲಾಡ್ಜ್ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಜಗನ್ನಾಥ ಶೆಟ್ಟಿ ಕಾಲೇಜು ಉಪನ್ಯಾಸಕ ಎಂಬುದಾಗಿ ಮಾಹಿತಿ ನೀಡಿ, ರೂಂ ಪಡೆದಿದ್ದರು ಎಂದು ತಿಳಿದು ಬಂದಿದೆ.

ಇದನ್ನು ಓದಿ – ಬಿಜೆಪಿ ‘ಜನೋತ್ಸವದ ಬದಲು ‘ಜನಸ್ಪಂದನ’ ಕಾರ್ಯಕ್ರಮ: ಸೆ.10ಕ್ಕೆ ದೊಡ್ಡಬಳ್ಳಾಪುರದಲ್ಲಿ

ಮೈಸೂರಿನ ದರ್ಶನ ಲಾಡ್ಜ್ ಲ್ಲಿ ಯುವತಿಯೊಂದಿಗೆ ಜಗನ್ನಾಥ ಶೆಟ್ಟಿ ಇರುವ ಮಾಹಿತಿ ತಿಳಿದ ಸಲ್ಮಾ ಗ್ಯಾಂಗ್, ದಿಢೀರ್ ಅವರ ರೂಂ ಗೆ ದಾಳಿ ನಡೆಸಿತ್ತು.

ದಾಳಿಯ ವೇಳೆಯಲ್ಲಿ ವೀಡಿಯೋ ಕೂಡ ಚಿತ್ರೀಕರಣ ಮಾಡಿಕೊಂಡಿತ್ತು. ಜೊತೆಗೆ ಬಿಜೆಪಿ ಮುಖಂಡ ಜಗನ್ನಾಥ ಶೆಟ್ಟಿಯವರನ್ನು ಮನಬಂಧಂತೆ ಥಳಿಸಿರೋ ವೀಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಈ ಪ್ರಕರಣದಲ್ಲಿ ಮಂಡ್ಯ ಪಶ್ಚಿಮ ವಿಭಾಗದ ಠಾಣೆಯ ಪೊಲೀಸರು ಕೇಸ್ ದಾಖಲಿಸಿಕೊಂಡು, ಸಲ್ಮಾ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ.

ಈಗ ಶೆಟ್ಟಿ ಪ್ಲಾನ್ ಮಾಡಿ ಯುವತಿಯನ್ನು ಲಾಡ್ಜ್ ಗೆ ಕರೆದುಕೊಂಡು ಹೋಗಿರುವ ಬಗ್ಗೆ ಬಯಲಾಗಿರುವ ಆಡಿಯೋ ಮತ್ತು ವಿಡಿಯೋ ಬಯಲಾಗಿದೆ. ಈ ಕುರಿತಂತೆ ಸತ್ಯಾಸತ್ಯತೆ ಗೊತ್ತಾಗಬೇಕಾಗಿದೆ.

Share This Article
Leave a comment