March 31, 2023

Newsnap Kannada

The World at your finger tips!

kempgowda 96

ಪಾಂಡವಪುರದ ಮಾಜಿ ಶಾಸಕ ಕೆ.ಕೆಂಪೇಗೌಡ ನಿಧನ

Spread the love

ಪಾಂಡವಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ಕೆಂಪೇಗೌಡ (96) ಇಂದು ಬೆಳಗಿನ ಜಾವ ನಿಧನರಾದರು.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಶಾಸಕರು ಚಿನಕುರಳಿಯ ತೋಟದ ಮನೆಯಲ್ಲಿ ಕೊನೆಯುಸಿರೆಳೆದರು.

ಪಾಂಡವಪುರ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದ ಕೆಂಪೇಗೌಡ, 1983ರಲ್ಲಿ ಜನತಾಪರಿವಾರದಿಂದ ಗೆಲವು ಸಾಧಿಸಿದ್ದರು. 1985ರಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿ ಗೆಲುವು ಪಡೆದಿದ್ದರು. ಹಾಗೆಯೇ 1999ರಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿ ಜನ ಸೇವೆ ಮಾಡಿದ್ದರು.

ವಿವಿಧ ಮಠಾಧೀಶರಿಂದಲೂ ಲೈಂಗಿಕ ದೌರ್ಜನ್ಯ: ಆಡಿಯೋದಲ್ಲಿ ಮಾತನಾಡಿದ ಮಹಿಳೆಯರಿಬ್ಬರಿಗಾಗಿ ಶೋಧ

ನಂತರ ಹಲವು ವರ್ಷಗಳಿಂದ ಸಕ್ರಿಯ ರಾಜಕಾರಣದಿಂದ‌ ಕೆಂಪೇಗೌಡರು ದೂರ ಉಳಿದಿದ್ದರು. ಇಂದು ಮಧ್ಯಾಹ್ನ ಮೂರು ಗಂಟೆಗೆ ಚಿನಕುರಳಿಯ ತೋಟದಲ್ಲಿ ಅಂತ್ಯಸಂಸ್ಕಾರ ನಡೆಸಲಾಗುವುದು.

error: Content is protected !!