January 11, 2025

Newsnap Kannada

The World at your finger tips!

rcb

ಜೈ ಆರ್​ಸಿಬಿ – ಈ ಸಲ ಕಪ್ ನಮ್ದೆ ಬಾಳೆಹಣ್ಣಿನ ಮೂಲಕ ಅಭಿಮಾನಿ ಪ್ರಾರ್ಥನೆ

Spread the love

ಹಿರಿಯೂರು ತೇರು ಮಲ್ಲೇಶ್ವರ ರಥೋತ್ಸವದಲ್ಲಿ ಆರ್​ ಸಿಬಿ ಅಭಿಮಾನಿಯೊಬ್ಬ ಬಾಳೆಹಣ್ಣಿನ ಮೇಲೆ ಈ ಬಾರಿ ಕಪ್ ನಮ್ದೆ ಎಂದು ಬರೆಯುವ ಮೂಲಕ ದೇವರಲ್ಲಿ ವಿಭಿನ್ನವಾಗಿ ಪ್ರಾರ್ಥಿಸಿದ್ದಾನೆ

ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣದಲ್ಲಿ ನಡೆದ ರಥೋತ್ಸವದಲ್ಲಿ ಅಭಿಮಾನಿಯೊಬ್ಬ ಈ ಸಲ ಕಪ್ ನಮ್ದೆ, ಜೈ ಆರ್​ಸಿಬಿ ಎಂದು ಬಾಳೆಹಣ್ಣಿನ ಮೇಲೆ ಬರೆದು ತೇರಿಗೆ ಎರಡು ಕೈಗಳನ್ನು ಜೋಡಿಸಿ ಬೇಡಿಕೊಂಡು ಬಾಳೆಹಣ್ಣನ್ನು ತೇರಿನ ಮೇಲೆಸೆದು ಪ್ರಾರ್ಥಿಸಿದ್ದಾನೆ.

rcb1

ಕಳೆದ 14 ವರ್ಷಗಳಿಂದ ಐಪಿಎಲ್ ನಲ್ಲಿ ಆರ್ ಸಿ ಬಿ ಗೆಲುವನ್ನು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಆರ್​ಸಿಬಿ ಕೊನೆಯ ಹಂತದವರೆಗೂ ತಲುಪಿ ಸೋಲನ್ನುಭವಿಸುತ್ತಿದೆ. ಹೀಗಾಗಿ ಅಭಿಮಾನಿ ಈ ಬಾರಿ ಆರ್​ಸಿಬಿ ಗೆಲ್ಲಲೆಬೇಕೆಂದು ವಿಭಿನ್ನವಾಗಿ ದೇವರಲ್ಲಿ ಪ್ರಾರ್ಥಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!