ಜನಪದ ಲೋಕದಲ್ಲಿ ಕಲಾ ಶಾಲಾ ವಿದ್ಯಾರ್ಥಿಗಳಿಂದ ಪಟ ಕುಣಿತ

Team Newsnap
1 Min Read

ರಾಮನಗರದ ಡಾ.ಎಚ್.ಎಲ್. ನಾಗೇಗೌಡ ಕಲಾ ಶಾಲೆಯ ವಿದ್ಯಾರ್ಥಿಗಳು ಇಲ್ಲಿನ ಜಾನಪದ ಲೋಕದಲ್ಲಿ ಭಾನುವಾರ ಪಟ ಕುಣಿತ ಪ್ರದರ್ಶಿಸಿದರು.

ಜನಪದ ಕಲೆಗಳನ್ನು ಕಲಿಯಲು ಯುವ ಸಮುದಾಯ ಆಸಕ್ತಿ ತೋರುತ್ತಿದೆ. ಓದಿನ ಜೊತೆಗೆ ಜನಪದ ಕಲೆಗಳನ್ನು ಕಲಿತು ಕೊಂಡರೆ ನಾಡಿನ ಸಂಸ್ಕøತಿಯನ್ನು ಉಳಿಸಬಹುದು. ಕಲೆಗಳ ಪ್ರದರ್ಶನದ ಮೂಲಕವೆ ಉತ್ತಮವಾದ ಜೀವನ ರೂಪಿಸಿಕೊಳ್ಳಬಹುದು ಎಂದು ರಂಗ ನಿರ್ದೇಶಕ ಎಸ್. ಪ್ರದೀಪ್ ತಿಳಿಸಿದರು.

ಹಿರಿಯ ತಮಟೆ ಕಲಾವಿದ ಗೋವಿಂದಯ್ಯ ಬೊಮ್ಮಚ್ಚನಹಳ್ಳಿ ಮಾತನಾಡಿ ಜನಪದ ಕಲೆಗಳ ಪ್ರದರ್ಶನಕ್ಕೆ ಉತ್ತಮವಾದ ಬೇಡಿಕೆ ಇದೆ. ಜನಪದ ಕಲೆಗಳನ್ನು ಕಲಿಯುವ ಕಲಾವಿದರು ಶಿಸ್ತು, ಶ್ರದ್ಧೆ, ಸಮಯ ಪಾಲನೆ ಮಾಡುವುದರೊಂದಿಗೆ ದುರಾಭ್ಯಾಸಗಳಿಂದ ದೂರವಿದ್ದರೆ ಉತ್ತಮ ಕಲಾವಿದರಾಗಬಹುದು ಎಂದು ತಿಳಿಸಿದರು.

ಕಲಾವಿದರಾದ ಸುನೀತ, ಬಿಂದು, ಭೂಮಿಕಾ, ಹನ್ಸಿಕಾ, ಗೋವರ್ಧಿನಿ, ಹನ್ಸಿಕಾ, ಕವನಾ, ಪಲ್ಲವಿ, ಹಿರಿಯ ಕಲಾವಿದರಾದ ಲೋಕೇಶ್, ಗಂಗಾಧರ್, ಪ್ರಕಾಶ್ ಪ್ರದರ್ಶನ ನೀಡಿದರು.

Share This Article
Leave a comment