ಬ್ರೆಜಿಲ್ ನ ಪ್ರಥಮ ಉಪಗ್ರಹ ಯಶಸ್ವಿ ಉಡಾವಣೆ ಮಾಡಿದ ಇಸ್ರೋ

Team Newsnap
1 Min Read

ಶ್ರೀಹರಿಕೋಟಾದಿಂದ ಇದೇ ಮೊದಲ ಬಾರಿಗೆ ಇಸ್ರೊ ಬ್ರೆಜಿಲ್‌ನ ಉಪಗ್ರಹವನ್ನು ಭಾನುವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. 2021ರಲ್ಲಿ ಇಸ್ರೊ ನಡೆಸಿರುವ ಮೊದಲ ಬಾಹ್ಯಾಕಾಶ ಉಡಾವಣೆ ಇದಾಗಿದೆ.

ಎಸ್‌ಡಿ ಸ್ಯಾಟ್‌ ಜೊತೆಗೆ 25,000 ಹೆಸರುಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತಿದೆ’ ಎಂದು ಎಸ್‌ಕೆಐನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಬಾಹ್ಯಾಕಾಶ ನೌಕೆಯ ಮೇಲಿನ ಪ್ಯಾನೆಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವನ್ನು ಸೃಜಿಸಲಾಗಿದೆ ಹಾಗೂ ಎಸ್‌ಡಿ ಕಾರ್ಡ್‌ನಲ್ಲಿ ಭಗವತ್ ಗೀತೆಯನ್ನು ಕಳುಹಿಸಲಾಗಿದೆ

ಬೆಳಿಗ್ಗೆ 10:24ಕ್ಕೆ ರಾಕೆಟ್ ಉಡಾವಣೆ ಮಾಡಲಾಯಿತು. ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‌ಎಲ್‌ವಿ-ಸಿ51 ರಾಕೆಟ್‌ ಬ್ರೆಜಿಲ್‌ನ ಅಮೆಜಾನಿಯಾ-1 ಉಪಗ್ರಹವನ್ನು ಹೊತ್ತೊಯ್ದಿದೆ. ರಾಕೆಟ್‌ ಉಡಾವಣೆಯಾಗಿ 5 ನಿಮಿಷಗಳಲ್ಲಿ ಮೂರನೇ ಹಂತವನ್ನು ಯಶಸ್ವಿಯಾಗಿ ಪೂರೈಸಿ ಮುಂದೆ ಸಾಗಿತು.

ಇದು ಇಸ್ರೊ ಪಿಎಸ್‌ಎಲ್‌ವಿ ರಾಕೆಟ್‌ನ 53ನೇ ಮಿಷನ್‌ ಆಗಿದೆ. ಪಿಎಸ್‌ಎಲ್‌ವಿ-ಸಿ51 ರಾಕೆಟ್‌ ಅಮೆಜಾನಿಯಾ-1 ಉಪಗ್ರಹದ ಜೊತೆಗೆ ಇತರೆ 18 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ.

ಚೆನ್ನೈ ಮೂಲದ ಸ್ಪೇಸ್‌ ಕಿಡ್ಜ್‌ ಇಂಡಿಯಾದ (ಎಸ್‌ಕೆಐ) ಸತೀಶ್‌ ಧವನ್‌ ಸ್ಯಾಟ್‌ (ಎಸ್‌ಡಿ ಸ್ಯಾಟ್‌), ಭಾರತದ ಶೈಕ್ಷಣಿಕ ಸಂಸ್ಥೆಗಳಿಂದ ಮೂರು ಯೂನಿಟಿಸ್ಯಾಟ್‌ಗಳು (UNITYsats) ಹಾಗೂ ಇಸ್ರೊದ ನ್ಯೂಸ್ಪೇಸ್‌ ಇಂಡಿಯಾ ಲಿಮಿಟೆಡ್‌ನ (ಎನ್‌ಎಸ್‌ಐಎಲ್‌) 14 ಉಪಗ್ರಹಗಳನ್ನು ಒಳಗೊಂಡಿತ್ತು.

ಬ್ರೆಜಿಲ್‌ನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಸ್ಪೇಸ್‌ ರಿಸರ್ಚ್‌ನ ಭೂವಲಯ ವೀಕ್ಷಣೆಗಾಗಿ ಬಳಕೆಯಾಗಲಿರುವ ದೂರ ಸಂವೇದಿ ಉಪಗ್ರಹ ಅಮೆಜಾನಿಯಾ-1. ಈ ಉಪಗ್ರಹವು 637 ಕೆ.ಜಿ. ತೂಕವಿದೆ. ಅಮೆಜಾನ್‌ ಪ್ರದೇಶದಲ್ಲಿ ಕಾಡು ನಾಶದ ಬಗ್ಗೆ ನಿಗಾವಹಿಸಲು ಹಾಗೂ ಕೃಷಿಗೆ ಸಂಬಂಧಿಸಿದಂತೆ ಪರಿಶೀಲನೆಗಳಿಗೆ ಅಮೆಜಾನಿಯಾ-1 ಉಪಗ್ರಹ ನೆರವಾಗಲಿದೆ.

Share This Article
Leave a comment